ಬೀದರ – ಮುಸ್ಲಿಂ ಸಮುದಾಯದ ಜನರು ದೇಶದಲ್ಲಿ ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದು ಅಂಥವರ ಜೊತೆ ವೇದಿಕೆ ಹಂಚಿಕೊಂಡ ಬಿಜೆಪಿ ಶಾಸಕ ಶರಣು ಸಲಗಾರ ವಿರುದ್ಧ ಶ್ರೀ ಸಿದ್ಧಲಿಂಗ ಸ್ವಾಮಿ ವಾಗ್ದಾಳಿ ನಡೆಸಿದರು.
ಬಸವಣ್ಣನವರ ಕರ್ಮಭೂಮಿ ಬಸವಕಲ್ಯಾಣ ನಲ್ಲಿ ನಿನ್ನೆ ನಡೆದ ರಾಜಾ ಬಗರಸಿ ದರ್ಗಾದಲ್ಲಿ ನಡೆದ 644ನೇ ಉರುಸ್ ಜಾತ್ರೆ ಮಹೋತ್ಸವದಲ್ಲಿ ಪೊಲೀಸ್ ಇಲಾಖೆಯಿಂದ ಅನುಮತಿ ಇಲ್ಲದಿರುವ ಮೆರವಣಿಗೆಯಲ್ಲಿ ಸ್ಥಳೀಯ ಶಾಸಕರು ಸುಪ್ರೀಂ ಕೋರ್ಟ್ ಆದೇಶ ಧಿಕ್ಕರಿಸಿ ಪಾಲ್ಗೊಂಡು ಪೊಲೀಸ್ ಇಲಾಖೆಗೆ ಸವಾಲು ಹಾಕಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಕಾನೂನು ಕಾಪಾಡುವ ಜವಾಬ್ದಾರಿಯುತ ಶಾಸಕರೆ ಈ ರೀತಿ ಮಾಡಿದ್ದಾರೆ ಅದಕ್ಕೆ ಪೊಲೀಸ್ ಇಲಾಖೆ ಸಹಕಾರ ನೀಡಿದೆ ಶ್ರೀ ರಾಮ ಸೇನಾ ರಾಜ್ಯಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿ ಶಾಸಕರನ್ನು ಮೊದಲು ಬಂಧಿಸಬೇಕು ಎಂದು ಆಗ್ರಹಿಸಿದರು.
ಅವರು ಪತ್ರಕರ್ತರೊಡನೆ ಮಾತನಾಡಿ, ಶಾಸಕ ಸಲಗರ ಅವರು ಸುಪ್ರೀಂ ಕೋರ್ಟ್ ಆದೇಶ ಧಿಕ್ಕರಿಸಿ ಪೊಲೀಸ್ ಇಲಾಖೆಗೇ ಸವಾಲು ಹಾಕಿದ್ದಾರೆ. ರಾತ್ರಿಯಲ್ಲಿ ಡಿ ಜೆ ಹಚ್ಚಲು ಪರವಾನಿಗೆ ಇಲ್ಲ ಆದರೆ ಈ ಉರುಸ್ ಮೆರವಣಿಗೆಯಲ್ಲಿ ಶಾಸಕರು, ರಾತಭರ ಡೀಜೆ ಚಲೇಗಾ, ಹಮ್ ಭೀ ನಾಚೇಂಗೆ ತುಮ್ ಭಿ ನಾಚೋ ಎಂದು ಅವರ ಜೊತೆ ಸೇರಿ ಡಾನ್ಸ್ ಮಾಡಿದ್ದಾರೆ. ಇದನ್ನೆಲ್ಲ ನೋಡಿದರೆ ಇವರು ಬಿಜೆಪಿ ಶಾಸಕರೋ ಎಮ್ಐಎಮ್ ಪಕ್ಷದ ಶಾಸಕರೋ ಎಂಬ ಬಗ್ಗೆ ಸಂದೇಹ ಮೂಡುತ್ತಿದೆ ಎಂದರು.
ರಾಜಾ ಬಗರಸಿ ಉರಸ್ ಮೆರವಣಿಗೆ ಅನುಮತಿ ಪಡೆಯದೇ ಇರುವ ಸಂದರ್ಭದಲ್ಲಿ ಶಾಸಕರು ಮಾತಾಡುತ್ತಾ, ಯಾವ ಅನುಮತಿ ನಮಗೆ ಬೇಕಾಗಿಲ್ಲ ಬಸವಕಲ್ಯಾಣ ನಲ್ಲಿ ರಾಜಾ ಬಗರಸಿ ಉರಸ್ ಮೆರವಣಿಗೆ ಹಗಲು ರಾತ್ರಿ ನಡೆಯುತ್ತದೆ ಯಾವ ಪೊಲೀಸ್ ಬಂದು ಏನು ಮಾಡುತ್ತಾರೋ ನೋಡೋಣ ಎಂದು ಪೊಲಿಸ್ ಇಲಾಖೆ ವಿರುದ್ಧ ಗುಡಗಿದ ಶಾಸಕ ಶರಣು ಸಲಗಾರ.
ಈ ಹಿನ್ನೆಲೆಯಲ್ಲಿ ಕಲಬುರಗಿಯ ಶ್ರೀ ರಾಮ ಸೇನೆ ರಾಜ್ಯ ಅಧ್ಯಕ್ಷ ಸಿದ್ದಲಿಂಗ ಸ್ವಾಮಿ ಮಾತನಾಡಿ, ಶರಣು ಸಲಗಾರ ಕಾನೂನು ಬಾಹಿರ ಮುಸ್ಲಿಂ ಸಮುದಾಯದ ರಾಜಾ ಬಗರಸಿ ಉರಸ್ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಾರೆ ಮೊದಲು ಶಾಸಕರನ್ನು ಬಂಧಿಸಬೇಕು. ಹಿಂದುಗಳ ಮೆರವಣಿಗೆ ಇದ್ದರೆ ರಾತ್ರಿ ಹತ್ತು ಗಂಟೆಗೆ ಬಂದ್ ಮಾಡಿಸುತ್ತಾರೆ. ಅದೇ ಮುಸ್ಲಿಂ ಸಮುದಾಯದ ಮೆರವಣಿಗೆ ಹಗಲು ರಾತ್ರಿ ಅನುಮತಿ ನೀಡುತ್ತಾರೆ ಎಂದು ಶ್ರೀ ಸಿದ್ದಲಿಂಗ ಸ್ವಾಮಿ ಬಸವಕಲ್ಯಾಣ ಶಾಸಕ ಶರಣು ಸಲಗಾರ ವಿರುದ್ಧ ವಾಗ್ದಾಳಿ ನಡೆಸಿದರು.
ಮುಸ್ಲಿಂ ಸಮುದಾಯದವರು ದೇಶದಲ್ಲಿ ದೇಶವಿರೋಧಿ ಚಟುವಟಿಕೆ ಮಾಡುತ್ತಾರೆ ಇಂತಹ ಮುಸ್ಲಿಂ ಸಮುದಾಯದ ಜೊತೆ ವೇದಿಕೆ ಹಂಚಿಕೊಂಡ ಈ ಶಾಸಕ ಮೊದಲು ಬಂಧಿಸಿ ಎಂದು ಶ್ರೀಗಳು ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ವರದಿ: ನಂದಕುಮಾರ ಕರಂಜೆ, ಬೀದರ