ಶ್ರಾವಣ ಮಾಸದ ಮನೆಮನೆಗಳಲ್ಲಿ ಮನ ಮನಕ್ಕೆ
ಕಾರ್ಯಕ್ರಮವನ್ನು ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘದ ವತಿಯುಂದ ರವಿವಾರ ದಿನಾಂಕ ೧ ರಂದು ಆಚರಿಸಲಾಯಿತು.
ಅಧ್ಯಕ್ಷರು ಎಸ್ ಜಿ ಸಿದ್ನಾಳ ಮತ್ತು ಶಂಕರ ಶೆಟ್ಟಿ ಅವರು ಕಾರ್ಯಕ್ರಮ ಮತ್ತು ಪ್ರಸಾದ ವ್ಯವಸ್ಥೆಯನ್ನು ಮಾಡಿದ್ದರು. ಉಪನ್ಯಾಸವನ್ನು ಶರಣೆ ವಸಂತಕ್ಕಾ ಗಡ್ಕರಿ ಅವರು ನೀಡುತ್ತಾ, ಹನ್ನೆರಡನೇ ಶತಮಾನದ ಶರಣರ ಶರಣೆಯರ ಕುರಿತು ಮಾತನಾಡಿದರು.
ವರ್ಣಭೇದ ,ವರ್ಗಭೇಧ , ಲಿಂಗಭೇದ ಹಾಗೂ ಏಕದೇವೋಪಾಸನೆ ಮತ್ತು ಮೂಢ ನಂಬಿಕೆಗಳನ್ನು ತೊಡೆದು ಹಾಕುವ ಮುಖಾಂತರ ಜಗತ್ತಿನ ಮೊಟ್ಟಮೊದಲ ವಿಧಾನಸೌಧ ಎಂಬ ಅನುಭವ ಮಂಟಪವನ್ನು ಬಸವಣ್ಣನವರು ಸ್ಥಾಪಿಸಿದರು, ಎಲ್ಲರಿಗೂ ಸರಿಸಮಾನದ ಅವಕಾಶಗಳನ್ನು ನೀಡಿ ವಚನ ಸಾಹಿತ್ಯ ಜಗತ್ತಿಗೆ ಪರಿಚಯಿಸುವಂತೆ ಮಾಡಿದರು ಇದರ ಸದುಪಯೋಗ ಪಡೆದು ಶರಣೆಯರು ಅಕ್ಕ ನಾಗಮ್ಮ, ಸತ್ಯಕ್ಕ, ಭೊಂತಾದೇವಿ ಮುಂತಾದ ಶರಣೆಯರು. ದಿಟ್ಟ ವಚನಗಳನ್ನು ರಚನೆ ಮಾಡುವ ಮುಖಾಂತರ ಸಮಾಜವನ್ನು ತಿದ್ದುವ, ಪ್ರಶ್ನಿಸುವ ಮೂಲಕ ಸಮಾನತೆ ಸಾರುವ ಕೇಲಸವನ್ನು ಮಾಡಿದರು ಎಂದು ಹೇಳಿದರು.
ಆಶೀರ್ವಚನ ನೀಡಿದ ಮೃತ್ಯುಂಜಯ ಅಪ್ಪಗಳು ಗಂದಿಗವಾಡ ಅವರು ಲಿಂಗಾಯತ ಸಂಘಟನೆಗಳು ಒಂದುಗೂಡಬೇಕು ಶರಣರ ವಚನಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಆಚರಿಸಬೇಕು . ಸಂಘಟನೆಗಳಲ್ಲಿ ರಾಜಕಾರಣಿಗಳು ಪ್ರವೇಶಿಸಬಾರದು ರಾಜಕೀಯ ಆಡಳಿತದಲ್ಲಿ ವಚನ ಸಾಹಿತ್ಯ ಅಳವಡಬೇಕು ಆಗ ಮಾತ್ರ ಸರ್ವ ಸಮಾಜ ಸುಧಾರಿಸಲು ಸಾಧ್ಯ. ಬಸವಣ್ಣನವರ ನಡವಳಿಕೆಯಿಂದ ದೇಶ ವಿದೇಶದಿಂದ ಜನ ಹರಿದು ಬಂದು ಶರಣರಾದರು ಅದನ್ನೇ ನಾವು ಪಾಲಿಸಬೇಕು. ಉಳಿಸಬೇಕು. ದುಡಿದು ಹಂಚಿ ಉಣ್ಣುವುದು ಲಿಂಗಾಯತ ಧರ್ಮ ಬೇಡಿ ತಿನ್ನುವುದಲ್ಲ ಮೊದಲು ನಾವು ಧರ್ಮವನ್ನು ಚೆನ್ನಾಗಿ ಅರ್ಥೈಸಿಕೊಂಡ ನಡೆಯಬೇಕು ಎಂದು ಕರೆ ಕೊಟ್ಟರು.
ಜಾಗತಿಕ ಲಿಂಗಾಯತ ಮಹಾ ಸಭಾ ಅಧ್ಯಕ್ಷರು ಬಸವರಾಜ ರೊಟ್ಟಿ ಅವರು ಮಾತನಾಡಿದರು. ಶರಣ ಕಟ್ಟಿಮನಿಯವರು ನಿರೂಪಣೆ ಮಾಡಿದರು. ಶೋಭಾ ಶಿವಳ್ಳಿ, ಶೈಲಜಾ ಮುನವಳ್ಳಿ ಪ್ರಾರ್ಥನೆ ನಡೆಸಿಕೊಟ್ಟರು. ಎಲ್ಲ ಶರಣ ಶರಣೆಯರು ಉಪಸ್ಥಿತರಿದ್ದರು.