spot_img
spot_img

ಶಾರದಾ ಭಕ್ತಿ ಭಾವದಿ ಸದ್ಗುಣಿ ಸದಾ ವಿನಯಶೀಲೆ ಹಸನ್ಮುಖಿ ಮಿತಭಾಷಿ ಹೃದಯವಂತೆ ಶಾರದಾ

Must Read

ವಾರ್ಷಿಕೋತ್ಸವವನ್ನು ಕೆಲವು ಸಾಂಪ್ರದಾಯಿಕ ಹೆಸರುಗಳಿಂದ ಕರೆಯಲಾಗುತ್ತದೆ.

ಇತ್ತೀಚೆಗೆ ಮುನವಳ್ಳಿ ಮಹಾಲಕ್ಷ್ಮಿ ಮಹಿಳಾ ಬ್ಯಾಂಕಿನ ಅಧ್ಯಕ್ಷರಾದ ಶಾರದಾ ಪಂಚನಗೌಡ ದ್ಯಾಮನಗೌಡರ ಹಾಗೂ ಪಂಚನಗೌಡ ದ್ಯಾಮನಗೌಡರ ದಂಪತಿಗಳ 22ನೆಯ ವಿವಾಹ ವಾರ್ಷಿಕೋತ್ಸವ ಸಂದರ್ಭ ಬ್ಯಾಂಕ್ ನಿರ್ದೇಶಕರ ಸಮ್ಮುಖದಲ್ಲಿ ವಿವಾಹ ವಾರ್ಷಿಕೋತ್ಸವದ ಶುಭಾಶಯ ಕೋರುವ ಕಾರ್ಯ ಕ್ರಮ ಆಯೋಜಿಸಲಾಗಿತ್ತು. 

ವಿವಾಹ ವಾರ್ಷಿಕೋತ್ಸವು ಐತಿಹಾಸಿಕದ ಮೂಲವಾಗಿದ್ದು, ಪವಿತ್ರ ರೋಮನ್ ಸಾಮ್ರಾಜ್ಯದ ಕಾಲದಿಂದಲೂ ನಡೆದುಕೊಂಡು ಬಂದಿದೆ. ಗಂಡಂದಿರು ತಮ್ಮ ಹೆಂಡತಿಯರಿಗೆ ತಮ್ಮ ಇಪ್ಪತ್ತೈದನೇ ಮದುವೆಯ ವಾರ್ಷಿಕೋತ್ಸವದಂದು ಬೆಳ್ಳಿಯ ಕಿರೀಟವನ್ನು ಮತ್ತು ತಮಗಿಷ್ಟವಾದ ಉಡುಗೊರೆ ನೀಡುತ್ತ ವಾರ್ಷಿಕೋತ್ಸವದಂದು ಚಿನ್ನದ ಕಿರೀಟವನ್ನು ನೀಡುತ್ತಿದ್ದರು.   

ನಂತರ, ಮುಖ್ಯವಾಗಿ ಇಪ್ಪತ್ತನೇ ಶತಮಾನದಲ್ಲಿ, ವಾಣಿಜ್ಯೀಕರಣದಿಂದ ಹೆಸರಿಸಲ್ಪಟ್ಟ ಉಡುಗೊರೆಯಿಂದ ಹೆಚ್ಚಿನ ಮದುವೆಯ ವಾರ್ಷಿಕೋತ್ಸವಗಳು ಆಚರಣೆಗೆ ಬರಲು ಕಾರಣವಾಯಿತು.  

ಕಾಮನ್ವೆಲ್ತ್ ಕ್ಷೇತ್ರಗಳಲ್ಲಿ, 60, 65 ಮತ್ತು 70 ನೇ ವಿವಾಹ ವಾರ್ಷಿಕೋತ್ಸವಗಳಿಗೆ ರಾಜನಿಂದ ಸಂದೇಶವನ್ನು, ಮತ್ತು ಅದರ ನಂತರ ಯಾವುದೇ ವಿವಾಹ ವಾರ್ಷಿಕೋತ್ಸವ ಯುನೈಟೆಡ್ ಕಿಂಗ್‌ಡಂನ ಬಕಿಂಗ್ಹ್ಯಾಮ್ ಅರಮನೆಗೆ ಅಥವಾ ಇತರ ಕಾಮನ್‌ವೆಲ್ತ್ ಕ್ಷೇತ್ರಗಳಲ್ಲಿನ ಗವರ್ನರ್-ಜನರಲ್ ಕಚೇರಿಗೆ ಅರ್ಜಿ ಸಲ್ಲಿಸುವ ಮೂಲಕ ವಿವಾಹ ವಾರ್ಷಿಕೋತ್ಸವವನ್ನು ಮಾಡಿಕೊಳ್ಳುತ್ತಿದ್ದರು.

ಹೀಗೆ ವಿವಾಹ ವಾರ್ಷಿಕೋತ್ಸವದ ಕುರಿತು ಅನೇಕ ಸಂಗತಿಗಳನ್ನು ನೆನೆಯುತ್ತಾ ನಮ್ಮ ಬ್ಯಾಂಕಿನ ಸಿಬ್ಬಂದಿ ಎಲ್ಲರೂ ದ್ಯಾಮನಗೌಡರ ದಂಪತಿಗಳ 22 ವರ್ಷಗಳ ದಾಂಪತ್ಯ ಜೀವನಕ್ಕೆ ಶುಭ ತೋರಬೇಕು ಎಂದು ನಿರ್ಧರಿಸಿದೆವು

ಶಾರದಾ ಅವರನ್ನು ಕಂಡಾಗ ಚುಟುಕೊಂದು ಮೂಡಿ ಬಂತು

ಶಾರದಾ
ಭಕ್ತಿ ಭಾವದಿ ಸದ್ಗುಣಿ
ಸದಾ ವಿನಯಶೀಲೆ ಹಸನ್ಮುಖಿ
ಮಿತಭಾಷಿ ಹೃದಯವಂತೆ ಶಾರದಾ

ಎಂದು ಚುಟುಕು ಸ್ಮರಿಸುತ್ತಾ ಕಾರ್ಯ ಕ್ರಮ ಆರಂಭವಾಯಿತು. ಬ್ಯಾಂಕಿನ ಮ್ಯಾನೇಜರ್ ಆಗಿರುವ ಶ್ರೀಮತಿ ಮಂಜುಳಾ ಮುರನಾಳ ಈ ಕಾರಣದಿಂದ ಮಾಡುವ ಕುರಿತು ಎಲ್ಲರಿಗೂ ತಿಳಿಸಿದ್ದರು. ಮುನವಳ್ಳಿ ಯ ಪ್ರತಿಷ್ಠಿತ ಮನೆತನದ ಕಾರ್ಯ ಕ್ರಮ ಎಂದಾಗ ಕೇಳಬೇಕೇ. ಬ್ಯಾಂಕಿನ ಎಲ್ಲಾ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಬ್ಯಾಂಕಿನಲ್ಲಿ ಸೇರಿದ್ದರು.

ಮಹಿಳೆ ಅಬಲೆಯಲ್ಲ ಸಬಲೆ ಎನ್ನುವುದಕ್ಕೆ ತಕ್ಕ ಮಹಿಳೆ ಎಂಬಂತೆ ಅವರಿಗೆ ತಕ್ಕಂತೆ ಸೋಲಿಗೆ ಹೆದರದೇ  ಗೆಲುವಿಗೆ ಕುಗ್ಗದ ಪಂಚನಗೌಡ ದ್ಯಾಮನಗೌಡರ ಈ ದಂಪತಿಗಳ ಅನ್ಯೋನ್ಯ ಬದುಕಿಗೆ ಈಗ 22 ವಸಂತ ಪೂರೈಸಿ 23 ರ ಆರಂಭ.

ಕಾರ್ಯ ಕ್ರಮ ದ ಪ್ರಾರಂಭದಲ್ಲಿ ಬ್ಯಾಂಕಿನ ಸಿಬ್ಬಂದಿ ಪ್ರಶಾಂತ ಸ್ವಾಗತ ಕೋರಿ ಶುಭ ಹಾರೈಸಿದರು. ದಂಪತಿಗಳಿಬ್ಬರೂ ಹಾರ ಬದಲಾಯಿಸಿಕೊಂಡು ಗುಲಾಬಿ ಹೂ ನೀಡುವ ಮೂಲಕ ಮದುವೆಯ ಈ ಬಂಧ ಅನುರಾಗದ ಅನುಬಂಧ ಏಳೇಳು ಜನುಮದಲಿ ತೀರದ ಸಂಬಂಧ ಎಂಬಂತೆ ಕಾಣತೊಡಗಿತ್ತು. ಪುಟ್ಟ ವೇದಿಕೆಯಲ್ಲಿ ಅವರೀರ್ವರೂ ಕುಳಿತರು. ನಂತರ ಬಾಳಪ್ಪ ಹೂಲಿ ಮಾತನಾಡಿ “ಪಂಚನಗೌಡ ರು ಬಡವರ ಬಂಧು ಸದಾ ಕ್ರಿಯಾಶೀಲರು.

ಶಾರದಮ್ಮನವರು ಬ್ಯಾಂಕಿನ ಅಧ್ಯಕ್ಷರಾಗಿದ್ದರೂ ಯಾವ ಹಮ್ಮು ಬಿಮ್ಮುಗಳಿಲ್ಲದ ವಿನಯಶೀಲೆ. ಹಿರಿಯರಿಗೆ ಗೌರವ ನೀಡುತ್ತಾ ಎಲ್ಲರ ಪ್ರೀತಿ ವಿಶ್ವಾಸ ಗೆಲ್ಲುತ್ತಾ ಬ್ಯಾಂಕ್ ನ್ನು ಮುನ್ನಡೆಸುತ್ತಿರುವರು ಈ ದಂಪತಿಗಳ ಬದುಕು ಸುಖ ಶಾಂತಿ ತುಂಬಿರಲಿ ಎಂದು ಹಾರೈಸಿದರು.

ಮಲ್ಲಿಕಾರ್ಜುನ ಹನಸಿ ಮಾತನಾಡಿ ತಮ್ಮ 22 ನೆಯ ವಿವಾಹ ವಾರ್ಷಿಕೋತ್ಸವ ಈ ದಿನದ ಆಚರಣೆ “ನಿಮ್ಮ ಉಳಿದ ಜೀವನವು ಯಾವಾಗಲೂ ನಿಮ್ಮ ಮೊದಲ ವಾರ್ಷಿಕೋತ್ಸವದಂತೆಯೇ ಕಾಣುತ್ತದೆ ಸಹೋದರಿ ಶಾರದಾ ಅವರು ಗೃಹಿಣಿ ಯಾಗಿ ಪಂಚನಗೌಡ ಅವರ ಬೆನ್ನೆಲುಬಾಗಿ ನಿಂತು ಅವರನ್ನು ಪ್ರೋತ್ಸಾಹಿಸುತ್ತಿರುವರು.ಈ ಅಪರೂಪದ ದಾಂಪತ್ಯ ಜೀವನಕ್ಕೆ 23 ರ ಹರೆಯ ದೇವರು ಇವರ ದಾಂಪತ್ಯದ ಬದುಕಿಗೆ ನೂರ್ಕಾಲ ಆಯುಷ್ಯ ಆರೋಗ್ಯ ನೀಡಲಿ ಎಂದು ಶುಭ ಕೋರಿದರು. ಮಲ್ಲಿಕಾರ್ಜುನ ಹಿರೇಮಠ ಅವರು “ಒಂಟಿಯಾಗಿದ್ದ ಪಂಚನಗೌಡರಿಗೆ ಜಂಟಿಯಾಗಿ, ಸಪ್ತಪದಿಯ ತುಳಿದ ಶಾರದಾ ಇಪ್ಪತ್ತೆರಡು ವರುಷ ಕಳೆದರೂ ಪತಿಯ ಪ್ರತಿ ಕಾರ್ಯ ಗಳಿಗೂ ಬೆಂಬಲವಾಗಿ ನಿಂತು, ಜನ್ಮಾಂತರದ ಬಂಧವಿದು ಪ್ರೇಮವೆಂದೂ ಕಳೆಯದು ಎಂಬಂತೆ ಆದರ್ಶ ಗೃಹಿಣಿ ಯಾಗಿರುವರು.

ಈ ದಾಂಪತ್ಯ ನೂರ್ಕಾಲ ಸುಖವಾಗಿರಲಿ ಎಂದು ಶುಭ ಕೋರಿದರು, ಡಾ. ಇಮಾಂಬಿ ಬೈರಕದಾರ್ ಶುಭ ಕೋರಿದರು.

ವಿವಾಹ ವಾರ್ಷಿಕೋತ್ಸವವು ಅವರ ವೈವಾಹಿಕ ಜೀವನ ಮತ್ತು ಅದರ ನೆನಪುಗಳನ್ನು ಆಚರಿಸಲು ವಿಶೇಷ ಸಮಯವಾಗಿದೆ. ತಮ್ಮ ಈ 22 ವಸಂತಗಳ ಏಳುಬೀಳುಗಳನ್ನು ನೆನಪಿಗೆ ತಂದುಕೊಂಡು 23 ಹೇಗಿರಬೇಕು ನಿತ್ಯವೂ ಹೊಸ ಆಲೋಚನೆ ಮತ್ತು ಗುರಿಯನ್ನು ಹೊಂದಿರುವ ನಿಮ್ಮ ದೈನಂದಿನ ಬದುಕು ಅನ್ಯೋನ್ಯತೆಯಿಂದ ಕೂಡಿರಲಿ.

ನಿಮ್ಮ ದಾಂಪತ್ಯ ನೂರ್ಕಾಲ ಸುಖ ಶಾಂತಿ ನೆಮ್ಮದಿಯಿಂದ ಕೂಡಿರಲಿ ಎಂದು ಹೇಳಿ ಶುಭ ಕೋರಿದರು. ನಂತರ  ಪಂಚನಗೌಡರು ಮಾತನಾಡಿ ಶಾರದಾ ಅವರು ತಮ್ಮ ಜೀವನದಲ್ಲಿ ಬಂದ ಮೇಲೆ ನನ್ನ ಜೀವನದ ಹಲವಾರು ಸಮಸ್ಯೆಗಳಲ್ಲಿ. ಕಷ್ಟಗಳಲ್ಲಿ ಸದಾ ನನ್ನ ಜೊತೆ ಇದ್ದು ಧೈರ್ಯ ನೀಡಿದ್ದಾರೆ ಎಂದು ಭಾವುಕ ರಾಗಿ ಹೇಳುವಾಗ ಶಾರದಾ ಅವರ ಕಣ್ಣಂಚಿನಲ್ಲಿ ನೀರು ಜಿನುಗಿತು. ಬಹುಶಃ ನನ್ನ ಎಲ್ಲ ಯಶಸ್ಸಿಗೂ ಅವರೇ ಬೆನ್ನೆಲುಬು ಎಂದರು.

ಕಾರ್ಯಕ್ರಮದಲ್ಲಿ ಬಾಳಪ್ಪ ಹೂಲಿ, ಲಕ್ಷ್ಮವ್ವ ಹೂಲಿ, ಕಸ್ತೂರಿ ನಲವಡೆ, ಕಲ್ಲಪ್ಪ ನಲವಡೆ, ರಾಧಿಕಾ ಹಿಂಬರಕಿ, ಪಂಕಜ ಸುಣಗಾರ, ಪಂಚಣ್ಣ ಸುಣಗಾರ,ಪಂಚು ಗುಂಡ್ಲೂರ, ಶಿವಲೀಲಾ ಕೊಡಬಳಿ, ಸುವರ್ಣ ಅಂಕಲಗಿ, ಹನುಮತ ಕರಿಕಟ್ಟಿ ಉಪಸ್ಥಿತರಿದ್ದರು. ಎಲ್ಲರೂ ಪಂಚನಗೌಡ ಹಾಗೂ ಶಾರದಾ ದಂಪತಿಗಳಿಗೆ ಶುಭ ಕೋರಿದರು. ಈ ಕಾರ್ಯ ಕ್ರಮ ಸಂಘಟಿಸಿ ಶುಭ ಕೋರಿದ ಎಲ್ಲರಿಗೂ  ಪಂಚನಗೌಡ ಹಾಗೂ ಶಾರದಾ ದಂಪತಿಗಳು ಕೃತಜ್ಞತೆ ಸಲ್ಲಿಸಿದರು. ನಂತರ ಅಲ್ಪೋಪಾಹಾರ ಜರುಗುವ ಮೂಲಕ ಮಂಜುಳಾ ಮುರನಾಳ ವಂದಿಸಿದರು.


ಶ್ರೀಮತಿ ಮುಕ್ತಾ ಷ. ಪಶುಪತಿಮಠ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ರಿಯಾಯಿತಿ ದರದಲ್ಲಿ ಸಂತಾನ ಪ್ರಾಪ್ತಿ ಚಿಕಿತ್ಸೆ

ಬೆಳಗಾವಿ: ಮಕ್ಕಳಿಲ್ಲದ ಬಡ ದಂಪತಿಗಳಿಗೆ ರಿಯಾಯಿತಿ ದರದಲ್ಲಿ ಸಂತಾನ ಪ್ರಾಪ್ತಿ ಚಿಕಿತ್ಸೆ ಕೊಡಿಸಲು ಕೊಲ್ಲಾಪುರದ ಸಿದ್ಧಗಿರಿ ಮಠದ ದತ್ತಿ ಆಸ್ಪತ್ರೆಯಲ್ಲಿ ಐವಿಎಫ್ ಕೇಂದ್ರ ಸ್ಥಾಪಿಸಲಾಗಿದೆ ಎಂದು ಮುಜರಾಯಿ,...
- Advertisement -

More Articles Like This

- Advertisement -
close
error: Content is protected !!