spot_img
spot_img

ಅಮೃತ ಮಹೋತ್ಸವ ನಿಮಿತ್ತ ಗೆಳೆಯರ ಬಳಗದಿಂದ ಜಿಲೇಬಿ ಹಂಚಿಕೆ

Must Read

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿಯವರಿಂದ ಚಾಲನೆ

ಮೂಡಲಗಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ವಿಶೇಷ ಕಾರ್ಯಕ್ರಮದ ಅಡಿಯಲ್ಲಿ 1987 -90 ಸಾಲಿನ ಶ್ರೀಶಿವಬೋಧರಂಗ ಪ್ರೌಡ ಶಾಲೆಯ ಗೆಳೆಯರ ಬಳಗದಿಂದ ಇಂದು ಕಲ್ಮೇಶ್ವರ ವೃತ್ತದಲ್ಲಿ ಶಿಕ್ಷಕರಿಗೆ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಎರಡು ಕ್ವಿಂಟಾಲ್ ಜಿಲೇಬಿ ಹಂಚಲಾಯಿತು.

ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಿ ಚಾಲನೆ ನೀಡಿ ಮಾತನಾಡಿ, ದೇಶ 75 ನೇಯ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಸಮಯದಲ್ಲಿ ರಾಷ್ಟ್ರೀಯ ಸಿಹಿ ಎಂದು ಕರೆಯಲ್ಪಡುವ ಜಿಲೇಬಿ ಎಲ್ಲರ ಮನೆ ಮನದಲ್ಲಿಯೂ ಸಿಹಿ ತುಂಬುವಂತೆ ಮಾಡಲಿ‌.ಅಮೃತ ಮಹೋತ್ಸವದ ಶುಭಾಶಯಗಳು ಎಂದು ಶುಭ ಹಾರೈಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ, ಪಿ ಎಸ್ ಐ ಹಾಲಪ್ಪ ಬಾಲದಂಡಿ ಹಾಗೂ ಗೆಳೆಯರ ಬಳಗದ ಶಿವಾನಂದ ಕಂಬಾರ, ಲಕ್ಕಪ್ಪ ಹುಚರೆಡ್ಡಿ, ಸಂಗಮೇಶ ಆಲತಗಿ, ಶಿವಾನಂದ ಮುಧೋಳ, ಚನ್ನವೀರ ಅಂಗಡಿ, ರಾಜು ಬಡಿಗೇರ, ಮಹೇಶ ಹೀರೆಮಠ, ಮಲ್ಲಿಕಾರ್ಜುನ ನೀಡಸೊಸಿ, ರಪೀಕ ತಾಂಬೋಳಿ, ಸುಭಾಸ ಅವಟಿ,

ಸಂತ್ರಾಮ ನಾಶಿ, ಲಕ್ಷ್ಮಣ ಸಾನವಾಲೆ, ಉಮೇಶ ಬೆಳಕೂಡ, ಸಂತೋಷ ಆನಿಕಿಂಡಿ, ಶಂಕರ ಹಳ್ಳಿ ಸಹಿತ ಹಲವರು ಇದ್ದರು.

- Advertisement -
- Advertisement -

Latest News

ಕೆನಡಾ ಮೇಯರ್ ಗೆ  ಭಾರತದ ಸಂವಿಧಾನದ ಪ್ರತಿ

ಸದ್ಯ ಕೆನಡಾ ಪ್ರವಾಸದಲ್ಲಿರುವ ಹಿರಿಯ ಸಾಹಿತಿ , ಸಂಶೋಧಕ ಬೆಂಗಳೂರಿನ ಡಾ.ಕೆ.ಜಿ.ಲಕ್ಷ್ಮೀನಾರಾಯಣಪ್ಪರವರು ಇತ್ತೀಚೆಗೆ ಕೆನಡಾದ ಎಡ್ಮಾಟನ್ ನಗರದ ಮೇಯರ್ ಕಚೇರಿಯ ಸಭಾಂಗಣದಲ್ಲಿ ಅಲ್ಲಿನ ಪ್ರಥಮ ಪ್ರಜೆ ಚೆರಿಯಲ್...
- Advertisement -

More Articles Like This

- Advertisement -
close
error: Content is protected !!