Homeಜೋತಿಷ್ಯನಕ್ಷತ್ರ ಮಾಲೆ: ಶತಭಿಶಾ ನಕ್ಷತ್ರ

ನಕ್ಷತ್ರ ಮಾಲೆ: ಶತಭಿಶಾ ನಕ್ಷತ್ರ

ಶತಭಿಶಾ ನಕ್ಷತ್ರ

🌷ಚಿಹ್ನೆ- ಖಾಲಿ ವಲಯ, ಸಾವಿರ ಹೂವುಗಳು ಅಥವಾ ನಕ್ಷತ್ರಗಳು

🌷ಆಳುವ ಗ್ರಹ– ರೆಹು

🌷ಲಿಂಗ-ಹೆಣ್ಣು

🌷ಗಣ– ರಾಕ್ಷಸ

🌷ಗುಣ– ಸತ್ವ / ತಮಾ

🌷ಆಳುವ ದೇವತೆ– ವರುಣ

🌷ಪ್ರಾಣಿ– ಮರೆ

🌷ಭಾರತೀಯ ರಾಶಿಚಕ್ರ – 6 ° 40 – 20 ° ಕುಂಭ

🌷ಶತಭಿಶಾ ನಕ್ಷತ್ರದ ಪ್ರಭಾವದಡಿಯಲ್ಲಿ ಜನರು ರಹಸ್ಯ ಮತ್ತು ತಾತ್ವಿಕವಾಗಿರುತ್ತಾರೆ.


🌴ನಕ್ಷತ್ರಗಳ ಪಟ್ಟಿಯಲ್ಲಿ ಇಪ್ಪತ್ನಾಲ್ಕನೆಯ ನಕ್ಷತ್ರ ಶತಭಿಷ ನಕ್ಷತ್ರವಾಗಿದೆ. ನಕ್ಷತ್ರದ ಅಧಿಪತಿ ದೇವರು ರಾಹುಗ್ರಹವಾಗಿದೆ. ಈ ನಕ್ಷತ್ರದಲ್ಲಿ ಜನಿಸಿದ ವ್ಯಕ್ತಿಗಳು ಶಾರೀರಿಕ ಶ್ರಮದ ಮೇಲೆ ಹೆಚ್ಚು ವಿಶ್ವಾಸ ಇಟ್ಟುಕೊಳ್ಳುವುದಿಲ್ಲ. ಬದಲಾಗಿ ಬುದ್ಧಿಯನ್ನು ಹೆಚ್ಚು ಉಪಯೋಗಿಸುತ್ತಾರೆ. ಈ ನಕ್ಷತ್ರದಲ್ಲಿ ಜನಿಸಿದವರು ಸ್ವತಂತ್ರರಾಗಿರಲು ಬಯಸುತ್ತಾರೆ. ಅಷ್ಟೇ ಅಲ್ಲದೆ ಸ್ವತಂತ್ರವಾಗಿ ಉದ್ಯೋಗ ಮಾಡಲು ಸಹ ಬಯಸುತ್ತಾರೆ. ಸದಾ ದುಡಿಯುತ್ತಾ ಯಂತ್ರದ ರೀತಿಯಲ್ಲಿ ಜೀವನ ನಡೆಸುವುದು ಇವರಿಗೆ ಇಷ್ಟವಿರುವುದಿಲ್ಲ.

🌴ಶತ್ರುಗಳ ವಿರುದ್ಧ ಸದಾ ಜಯಗಳಿಸುತ್ತಾರೆ. ಹತ್ತಿರದವರಿಂದ ಹೆಚ್ಚು ತೊಂದರೆಯನ್ನು ಅನುಭವಿಸುತ್ತಾರೆ. ಅಂದರೆ, ಅಣ್ಣ-ತಮ್ಮಂದಿರಿಂದಲೇ ಹೆಚ್ಚು ಸಮಸ್ಯೆಗಳು ಉಂಟಾಗುತ್ತವೆ. ಆದರೂ ಅವರಿಗೆ ಅವಶ್ಯಕತೆ ಇದ್ದರೂ ಅವರಿಗೆ ಸಹಾಯ ಮಾಡುವ ಗುಣವನ್ನು ಈ ರಾಶಿಯವರು ಹೊಂದಿರುತ್ತಾರೆ. ಇದರ ಜೊತೆಗೆ ಇವರ ತಂದೆಯೂ ಸಹ ಇವರಿಗೆ ಹೆಚ್ಚಿನ ಅನುಕೂಲ ಮಾಡಿಕೊಡುವುದಿಲ್ಲ. ತಾಯಿ ಪ್ರೀತಿ ಮಾತ್ರ ಇವರಿಗೆ ಸದಾ ಸಿಗುತ್ತದೆ. ಇವರ ವೈವಾಹಿಕ ಜೀವನ ಅಷ್ಟು ಆನಂದಕರವಾಗಿರದಿದ್ದರೂ, ಪತ್ನಿಯಾದವರು ಗೃಹಿಣಿಗೆ ಇರಬೇಕಾದ ಎಲ್ಲ ಒಳ್ಳೆ ಗುಣಗಳನ್ನು ಹೊಂದಿರುತ್ತಾರೆ.


🚩ಶ್ರೀ ಭಗವಂತ ಪರಶುರಾಮ🚩
ಇಂತಿ ಜ್ಯೋತಿಷ್ಯ ಸೇವೆಯಲ್ಲಿ ತಮ್ಮವ ಪ್ರಾಚೀನಶಾಸ್ತ್ರಾಸಕ್ತ

L ವಿವೇಕಾನಂದ ಆಚಾರ್ಯ🇮🇳 (Army Rtd) Gubbi.
ph no :9480916387

RELATED ARTICLES

Most Popular

error: Content is protected !!
Join WhatsApp Group