ಹುಬ್ಬಳ್ಳಿ:ಹುಬ್ಬಳ್ಳಿಯ ಬೆಂಗೇರಿ ಸೆಂಟ್ರಲ್ ಸಂತೆ ಮೈದಾನದಲ್ಲಿ “ಪವರ ಆಫ್ ಯೂಥ್ಸ ಫೌಂಡೇಶನ್ನ”ವರು ಹಮ್ಮಿಕೊಂಡಿದ್ದ “ಕನ್ನಡ ರಾಜ್ಯೋತ್ಸವ ನಾಡಹಬ್ಬ” ಕಾರ್ಯಕ್ರಮ ಇತ್ತೀಚೆಗೆ ಅದ್ದೂರಿಯಾಗಿ ಜರುಗಿತು. ಈ ಕಾರ್ಯಕ್ರಮದಲ್ಲಿ ಸಮಾಜ ಸೇವಕರಿಗೆ ಸಾಹಿತಿಗಳಿಗೆ ವಿವಿಧ ಕಲಾವಿದರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು
ಕಾರ್ಯಕ್ರಮದ ಉದ್ಘಾಟನೆಯನ್ನು ಡಾ. ವಿ ಎಸ್ ಪ್ರಸಾದ ರವರು ನೆರವೇರಿಸಿದರು ಕಾರ್ಯಕ್ರಮ ನಡೆಯುವ ಬಗ್ಗೆ ಮಾತನಾಡುತ್ತ ಪವರ್ ಆಪ್ ಯುಥ ಫೌಂಡೇಶನ್ನನ ಸಮಾಜಮುಖಿ ಕಾರ್ಯಗಳ ಬಗ್ಗೆ ಅಭಿನಂದನೆ ತಿಳಿಸಿದರು.
ಇದೇ ಸಂದರ್ಭದಲ್ಲಿ ವಾಯ್ ಬಿ ಕಡಕೋಳರವರ ಸಂಪಾದಕತ್ವದ ‘ನಾ ಕಂಡ ಶತಮಾನದ ಸಂತರು’ ಕೃತಿಯನ್ನು ಅಕ್ಷರ ತಾಯಿ ,ದತ್ತಿ ದಾನಿ,ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಸರಕಾರದ ಸುವರ್ಣ ಮಹೋತ್ಸವ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ಲೂಸಿ ಸಾಲ್ಡಾನ ರವರು ಬಿಡುಗಡೆ ಮಾಡಿದರು.
ಕಾರ್ಯಕ್ರಮ ಅಧ್ಯಕ್ಷತೆಯನ್ನ ಫೌಂಡೇಶನ್ನಿನ ಗೌರವಾಧ್ಯಕ್ಷರು ಎಲ್ ಐ ಲಕ್ಕಮ್ಮನವರ ವಹಿಸಿದ್ದರು.ಇದೇ ಸಂದರ್ಭದಲ್ಲಿ ಶಿಕ್ಷಕ ಸಾಹಿತಿ ವೈ ಬಿ ಕಡಕೋಳ ರಿಗೆ ‘ಕರುನಾಡ ಐಸಿರಿ’ ಗೌರವ ನೀಡಲಾಯಿತು. ಕಾರ್ಯಕ್ರಮ ನಿಮಿತ್ತವಾಗಿ ಕನ್ನಡ ನಾಡು ನುಡಿ ಸಂಸ್ಕೃತಿ ಬಿಂಬಿಸುವ ಹಾಡುಗಳು, ಜನಪದ ಕಲೆಗಳ ಪ್ರದರ್ಶನ ಜರುಗಿತು.
ರವಿಚಂದ್ರ ದೊಡ್ಡಿಹಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೊಪ್ಪಳ ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ತೊದಲಬಾಗಿ ಮಾತನಾಡಿ ಇದೊಂದು ವಿಶಿಷ್ಟ ಕಾರ್ಯ ಕ್ರಮ. ಕನ್ನಡ ಮಾತನಾಡುವ ಜೊತೆಗೆ ಕನ್ನಡ ಉಳಿಸುವ ನಿಟ್ಟಿನಲ್ಲಿ ನಾಡು ನುಡಿ ಬಿಂಬಿಸುವ ವೈಶಿಷ್ಟ್ಯಗಳನ್ನು ಇಲ್ಲಿ ಪ್ರದರ್ಶನ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಈ ರೀತಿಯ ರಾಜ್ಯೋತ್ಸವ ಕಾರ್ಯ ಕ್ರಮ ಗಳು ಜರುಗಬೇಕು. ನಮ್ಮ ನಿತ್ಯದ ಜೀವನ ಕನ್ನಡ ಮಯವಾಗಿರಬೇಕು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಸಂಕಲ್ಪ ಶೆಟ್ಟರ ,ಸತೀಶ ಮೆಹರವಾಡೆ, ಮಾರುತಿ ಬೀಳಗಿ,ಹೂವಪ್ಪ ದಾಯಗೋಡಿ,ರಮೇಶ ಮಹದೆವಪ್ಪನವರ, ಸಂತೋಷ ವರ್ಣೆಕರ, ರಾಜು ಕಾಳೆ ,ಸದಾಶಿವ ಚೌಶೆಟ್ಟಿ,ಅಶೋಕ ವಾಲ್ಮೀಕಿ, ಮಲ್ಲಿಕಾರ್ಜುನ ತೊದಲಬಾಗಿ ,ಬಿ ಎಸ್ ಪುಷ್ಪ,ಬದುಕು ಬಂಡಿ ಚಲನಚಿತ್ರ ಸಹ ನಿರ್ದೇಶಕ ಎನ್ ಬಿ ದ್ಯಾಂಪೂರ ಹಾಗೂ ಫೌಂಡೇಶನ್ನಿನ ಎಲ್ಲ ಸದಸ್ಯ ಮತ್ತು ವಿವಿಧ ಸಂಘ ಸಂಸ್ಥೆಗಳು ಭಾಗವಹಿಸಿದ್ದರು.