spot_img
spot_img

ಬಸವಕಲ್ಯಾಣದಲ್ಲಿ ಹೆಬ್ಬಾವು ದಾಳಿಗೆ ಕುರಿ ಬಲಿ

Must Read

ಬೀದರ: ಅಡವಿಯಲ್ಲಿ ಹುಲ್ಲು ಮೇಯುತ್ತಿದ್ದ ಕುರಿಯೊಂದರ ಮೇಲೆ ಹೆಬ್ಬಾವು ದಾಳಿ ನಡೆಸಿ ಕೊಂದಿರುವ ಘಟನೆ ಬಸವಕಲ್ಯಾಣ ತಾಲೂಕಿನ ಲಿಂಗದಳ್ಳಿ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ.

ಗ್ರಾಮದ ನಿವಾಸಿ ಲಕ್ಷ್ಮಿಬಾಯಿ ರಾಮಣ್ಣ ವಾಡೇಕರ್ ಅವರಿಗೆ ಸೇರಿದ ಕುರಿ ಮೃತಪಟ್ಟಿದೆ.

ಕುರಿ ಮೇಯಿಸಲು ಅರಣ್ಯ ಕ್ಕೆ ಹೋದಾಗ ಕುರಿ ಮೇಯುತ್ತಾ ಒಂದು ಮರದ ಕಡೆ ಹೋದಾಗ ಹೆಬ್ಬಾವು ಕುರಿ ಮೇಲೆ ದಿಢೀರ್​ ದಾಳಿ ನಡೆಸಿ ಕುರಿಯ ಕುತ್ತಿಗೆಗೆ ಸುರುಳಿ ಹಾಕಿ ಬಲಿ ಪಡೆದಿರುವುದನ್ನು ಗಮನಿಸಿದ ಮಹಿಳೆ ಭಯಭೀತಗೊಂಡು ಊರಕಡೆ ಓಡಿ ಹೋಗಿ ಗ್ರಾಮಸ್ಥರಿಗೆ ಮಾಹಿತಿ ನೀಡಿದಾರೆ.

ಇನ್ನೇನು ಕುರಿಯನ್ನು ತಿಂದು ಹಾಕಬೇಕು ಎನ್ನುವಷ್ಟರಲ್ಲಿ ಸುದ್ದಿ ತಿಳಿದು ಸ್ಥಳಕ್ಕೆ ಬಂದ ಉಪ ವಲಯ ಆರಣ್ಯಾಧಿಕಾರಿ ಸುರೇಶ ಕನಕಟ್ಟಾ ನೇತೃತ್ವದ ಸಿಬ್ಬಂದಿ ತಂಡ ತಡೋಳಾ ಗ್ರಾಮದ ಉರಗ ತಜ್ಞ ಸೈಯದ್ ಗನಿ ಅವರನ್ನು ಸ್ಥಳಕ್ಕೆ ಕರೆಸಿ, ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದು ಆರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಕವಿ ನಾಗೇಶ್ ನಾಯಕಗೆ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ದತ್ತಿ ಪ್ರಶಸ್ತಿ ಪ್ರದಾನ

ಸವದತ್ತಿಃ ಸಮೀಪದ ಉಡಿಕೇರಿಯ ರಾಮಲಿಂಗೇಶ್ವರ ಪ್ರೌಢಶಾಲೆಯ ಕವಿ, ಶಿಕ್ಷಕ ನಾಗೇಶ್ ಜೆ. ನಾಯಕ ಅವರಿಗೆ ಇತ್ತೀಚೆಗೆ ಬೆಳಗಾವಿ ಹಿಂದವಾಡಿಯ ಐ.ಎಂ.ಇ.ಆರ್. ಸಭಾಭವನದಲ್ಲಿ ಜರುಗಿದ ಬೆಳಗಾವಿ ಜಿಲ್ಲಾ...
- Advertisement -

More Articles Like This

- Advertisement -
close
error: Content is protected !!