ಮಂಗಳೂರಿನ ಕಥಾಬಿಂದು ಪ್ರಕಾಶನ ಕೊಡಮಾಡುವ ಶಿಕ್ಷಕ ರತ್ನ ಪ್ರಶಸ್ತಿಗೆ ಪ್ರೌಢಶಾಲಾ ಮುಖ್ಯಶಿಕ್ಷಕಿ ಶ್ರೀಮತಿ ಸಾವಿತ್ರಮ್ಮಓಂಕಾರ ಅರಸೀಕೆರೆ ಅವರು ಭಾಜನರಾಗಿದ್ದಾರೆ.
ಹಾಸನ ಜಿಲ್ಲೆಯಲ್ಲಿ 28 ವರ್ಷ ಸೇವೆ ಸಲ್ಲಿಸಿದ ಅವರು ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ್ದಾರೆ. ಇದುವರೆಗೆ ಸಾಹಿತ್ಯದ ಹಲವು ಪ್ರಕಾರಗಳಾದ ಕವನ, ಮಕ್ಕಳ ಸಣ್ಣಕಥೆಗಳು, ಶಿಶುಗೀತೆ, ಗಝಲ್, ಕಥೆಗಳು , ವ್ಯಕ್ತಿ ಚಿತ್ರ, ಚಿತ್ರಕವನ, ಮಕ್ಕಳ ನಾಟಕ ಸಂಕಲನದ ಜೊತೆಗೆ ಇತೀಚೆಗೆ 74 ಜನ ಸಾಧಕರ ಪರಿಚಯಿಸಿರುವ ಸುಂದರ ನವಿಲಿಗೆ ಚಂದದ ಗರಿ ಎನ್ನುವ ಪುಸ್ತಕವನ್ನೂ ಹೊರತಂದಿದ್ದಾರೆ.
ಇವರ ಕವನ ಸಂಕಲನಕ್ಕೆ ಗುರುಕುಲ ಪ್ರತಿಷ್ಠಾನದ ಸಾಹಿತ್ಯ ಕೇಸರಿ ,ಮಕ್ಕಳ ಸಣ್ಣಕಥೆ ಪುಸ್ತಕಕ್ಕೆ ಧಾರವಾಡದ ವಿದ್ಯಾಧರ ಕನ್ನಡ ಪ್ರತಿಷ್ಠಾನವು ‘ಹಸ್ತಪ್ರತಿ ಪ್ರಶಸ್ತಿ’,ದೊರೆತಿದೆ. ಇವರ ಸಮಾಜಸೇವೆ ಗುರುತಿಸಿ ಗಾಂಧಿಬುದ್ಧಬಸವ ಪ್ರತಿಷ್ಠಾನದವರು ‘ಲೋಹಿಯಾ ಪುರಸ್ಕಾರ’, ಸಾಹಿತ್ಯ ಸೇವೆಗಾಗಿ ಅಕ್ಷರನಾದ ಸಾಹಿತ್ಯ ಪ್ರತಿಷ್ಠಾನದವರು *ಸಾಹಿತ್ಯ ರತ್ನ ಶಿರೋಮಣಿ* ಪುರಸ್ಕಾರ, ಸಿರಿಗನ್ನಡ ವೇದಿಕೆಯವರು ಸಾಧಕರ ನುಡಿ ಮಾಲಿಕೆಯಲ್ಲಿ ಸಂದರ್ಶನ, ಕಸ್ತೂರಿ ಕನ್ನಡ ಪ್ರತಿಷ್ಠಾನದಿಂದ *ಕಾವ್ಯಶ್ರೀ* ಪುರಸ್ಕಾರ , ಭಾವಸಂಗಮ ಪ್ರತಿಷ್ಠಾನದಿಂದ *ಸ್ವರ್ಣಸಿರಿ* ಪ್ರಶಸ್ತಿ ಪಡೆದಿರುವ ಸಾವಿತ್ರಮ್ಮ ಓಂಕಾರ್ ಇದುವರೆಗೆ ಹುಬ್ಬಳ್ಳಿ ಧಾರವಾಡ ಮೈಸೂರು ಅರಕಲಗೂಡು ಬೆಂಗಳೂರು ಮುಂತಾದ ಕಡೆ ಚಿತ್ರಕಲಾ ಪ್ರದರ್ಶನ ಮಾಡಿದ್ದು ಅಕ್ಟೋಬರ್ 26ರಂದು 36ನೇ ಚಿತ್ರಕಲಾ ಪ್ರದರ್ಶನ ಮಾಡಲಿದ್ದಾರೆ.
ಇವರ ಈ ಸಾಧನೆ ಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ಪ್ರತಿಷ್ಠಾನದವರು ಘೋಷಿಸಿದ್ದು ಸಾಹಿತಿ ಗೊರೂರು ಅನಂತರಾಜು ಅಭಿನಂದಿಸಿದ್ದಾರೆ.

