ಭಕ್ತರ ಆಶೋತ್ತರ ಈಡೇರಿಸುವ ಶಿವಬೋಧರಂಗನ ಪಲ್ಲಕ್ಕಿ ಉತ್ಸವ

Must Read

ಮೂಡಲಗಿ : ಪವಾಡ ಪುರುಷ ಶ್ರೀ ಶಿವಬೋಧ ರಂಗನ ಜಾತ್ರಾ ಮಹೋತ್ಸವದಲ್ಲಿ ಸಡಗರ ಸಂಭ್ರಮಗಳಿಂದ ಪಲ್ಲಕ್ಕಿ ಉತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಬುಧವಾರ ಜರುಗಿತು.

ಪ್ರತಿ ವರ್ಷದಂತೆ ನಡೆಯುವ ಶ್ರೀ ಕಲ್ಮೇಶ್ವರ ಬೋಧರ ಪುಣ್ಯ ತಿಥಿ ಹಾಗೂ ಶ್ರೀ ಶಿವಬೋಧ ರಂಗನ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಮಧ್ಯರಾತ್ರಿಯಿಂದ ಸಹಸ್ರಾರು ಭಕ್ತರು ಯಾವದೇ ಜಾತಿ ಭೇದವಿಲ್ಲದೇ ಬುಧವಾರ ಮುಂಜಾನೆಯವರೆಗೆ ಭಕ್ತಭಾವದಿಂದ ಧೀಘ೯ದಂಡ ನಮಸ್ಕಾರ ಹಾಕಿದರು.

ಮುಂಜಾನೆ ನೂತನ ಪೀಠಾಧಿಪತಿಗಳಾದ ದತ್ತಾತ್ರೇಯ ಬೋಧ ಸ್ವಾಮೀಜಿ ಹಾಗೂ ಶ್ರೀಧರ ಬೋಧ ಸ್ವಾಮೀಜಿಗಳ ನೇತೃತ್ವದಲ್ಲಿ ಮೇಲಿನ ಮಠದಲ್ಲಿ ವೇದ ಪಠಣಗಳೊಂದಿಗೆ ವಿಶೇಷ ಪೂಜೆ ಜರುಗಿತು.

ಮಧ್ಯಾಹ್ನ ಮೇಲಿನ ಮಠದಿಂದ ಶ್ರೀ ಶಿವಭೋದರಂಗನ ಪಲ್ಲಕಿಯು ವಿವಿಧ ವಾದ್ಯಮೇಳದೊಂದಿಗೆ ಮೈನವಿರೇಳಿಸುವ ನೃತ್ಯದ ಜೊತೆಗೆ ಯುವಕರು ಪರಸ್ಪರ ಗುಲಾಲ ಎರಚಿಕೊಂಡು ಶ್ರೀ ಶಿವಬೋಧರಂಗ ಮಹಾರಾಜಕಿ ಜೈ ಎಂಬ ಘೋಷಣೆ ಕೂಗುತ್ತಾ ಬಿಸಿಲನ್ನು ಲೆಕ್ಕಿಸದೇ ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಂಡರು.

ಪಲ್ಲಕಿಯು ಕೆಳಗಿನ ಮಠಕ್ಕೆ ಸಾಗಿದಂತೆ ನೆರೆದಿದ್ದ ಸಹಸ್ರಾರು ಭಕ್ತರು ಪಲ್ಲಕಿಯ ಮೇಲೆ ಬೆಂಡು ಬತ್ತಾಸು, ಖಾರೀಕ ಹಾಗೂ ಹೂ ಹಾರಿಸಿ ಕೃತಾಥ೯ರಾದರು. ನಂತರ ಭಕ್ತರಿಗೆ ಅನ್ನ ಪ್ರಸಾದ ಜರುಗಿತು.

ಶ್ರೀ ಶಿವಬೋಧರಂಗನ ಜಾತ್ರಾ ಮಹೋತ್ಸವದ ಅಂಗವಾಗಿ ದಿ. 13 ರಂದು ಸಾಯಂಕಾಲ ಮಹತ್ವದ ಸಕ್ಕರೆ ಹಂಚುವ ಕಾರ್ಯಕ್ರಮ ಜರುಗಲಿದೆ. ಭಕ್ತರು ತಮ್ಮ ತಮ್ಮ ಹರಕೆಗಳನ್ನು ತೀರಿಸಲು ಶಕ್ತ್ಯಾನುಸಾರ ಸಕ್ಕರೆ ದಾನ ಮಾಡುವುದಾಗಿ ಬೇಡಿಕೊಂಡು ಸಕ್ಕರೆ ಹಂಚುತ್ತಾರೆ.

Latest News

ವಿದ್ಯಾರ್ಥಿಗಳು ತಂತ್ರಜ್ಞಾನದಿಂದಾಗಿ ದಾರಿ ತಪ್ಪಬಾರದು – ಲಕ್ಷ್ಮಿ ಸಾಲೊಡಗಿ

ಸಿಂದಗಿ - ಇಂದಿನ ಯುವ ಜನಾಂಗ ಮೊಬೈಲ್ ಅವಲಂಬಿತ ಜಗತ್ತಿನಲ್ಲಿದೆ. ಎಲ್ಲವೂ ಅಂಗೈನಲ್ಲಿಯೇ ಹಿಡಿದಿಟ್ಟುಕೊಳ್ಳುವ ಮನೋಭಾವದ ವಯಸ್ಸಿನ ಹದಿ ಹರೆಯದವರು ತಂತ್ರಜ್ಞಾನಗಳ ಪ್ರಭಾವಕ್ಕೆ ಒಳಗಾಗಿ ಹಾದಿ...

More Articles Like This

error: Content is protected !!
Join WhatsApp Group