- Advertisement -
ಸಿಂದಗಿ : ವಿಜಯಪುರದಲ್ಲಿ ನಡೆದ ಜಿಲ್ಲಾಮಟ್ಟದ ಪ.ಪೂ. ಕಾಲೇಜುಗಳ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಸಿಂದಗಿ ಪಟ್ಟಣದ ಪಿ.ಇ.ಎಸ್. ಗಂಗಾಧರ ಎನ್. ಬಿರಾದಾರ ಪ.ಪೂ. ಕಾಲೇಜಿನ ವಿದ್ಯಾರ್ಥಿಯಾದ ಕುಮಾರ ಶಿವಕುಮಾರ ಪೂಜಾರಿ ಜಾವೆಲಿನ್ ಥ್ರೋನಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
ವಿದ್ಯಾರ್ಥಿಯ ಸಾಧನೆಗೆ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಬಿ.ಪಿ. ಕರ್ಜಗಿ, ಆಡಳಿತಾಧಿಕಾರಿಗಳಾದ ಆಯ್. ಬಿ. ಬಿರಾದಾರ ಕೆ.ಎಚ್. ಸೋಮಾಪೂರ ಎಸ್.ವಾಯ್. ಬೀಳಗಿ ಪ್ರಾಚಾರ್ಯ ಆರ್.ಬಿ. ಗೋಡಕರ ಹಾಗೂ ಸಿಬ್ಬಂದಿಗಳು ಶುಭಹಾರೈಸಿದ್ದಾರೆ.