ಶಿವಾಪೂರ(ಹ): ಷೇರುದಾರರ ಹಾಗೂ ಸಿಬ್ಬಂದಿಗಳ ಸಹಕಾರದಿಂದ ಸೊಸೈಟಿಯು ಉನ್ನತ ಮಟ್ಟಕ್ಕೆ ಬೆಳೆದು 2025 ಮಾರ್ಚ್ ಅಂತ್ಯಕ್ಕೆ 22.04 ಲಕ್ಷ ಲಾಭಗಳಿಸಿ ಪ್ರಗತಿ ಹೊಂದುತ್ತಿದೆ ಎಂದು ಸೊಸೈಟಿ ಅಧ್ಯಕ್ಷ ಸಿದ್ದಪ್ಪ ಗಿಡ್ಡನ್ನವರ ಹೇಳಿದರು.
ಶಿವಾಪೂರ ಅರ್ಬನ್ ಸೊಸೈಟಿಯ ಸಭಾ ಭವನದಲ್ಲಿ ಜರುಗಿದ 2024-25 ನೇ ಸಾಲಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು 2025ನೇ ಮಾರ್ಚ ಅಂತ್ಯಕ್ಕೆ ಸೊಸಾಯಿಟಿಯು ರೂ.30.32 ಲಕ್ಷ ಶೇರು ಬಂಡವಾಳ ಹೊಂದಿದ್ದು, ಒಟ್ಟು ನಿಧಿಗಳು. 88.77 ಲಕ್ಷ ರೂಗಳು, 14.06 ಕೋಟಿ ರೂ ಸಂಘದ ಠೇವು ಸಂಗ್ರಹಿಸಿ,ಇತರ ಬ್ಯಾಂಕ್ ಗಳಲ್ಲಿ ಸಂಘದ ಠೇವು 3 ಕೋಟಿ 11 ಲಕ್ಷ ಹೊಂದಿದ್ದು, 9.11 ಕೋಟಿ ವಿವಿಧ ರೀತಿಯ ಸಾಲಗಳನ್ನು ವಿತರಿಸಿ,15.77 ಕೋಟಿ ದುಡಿಯುವ ಬಂಡವಾಳ ಹೊಂದಿ ಮಾರ್ಚ್ ಅಂತ್ಯಕ್ಕೆ ನಮ್ಮ ಸೊಸೈಟಿಯು 22.04 ಲಕ್ಷ ಉಳಿತಾಯ ಮಾಡಿ ಪ್ರಗತಿಯತ್ತ ಸಾಗುತ್ತಿದೆ ಎಂದು ಹೇಳಿದರು.
ಮುಖ್ಯ ಕಾರ್ಯನಿರ್ವಾಹಕರಾದ ಧರೆಪ್ಪಾ ಸುಣದೋಳಿ ಮಾತನಾಡಿ, ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಗ್ರಾಹಕರು ಉತ್ತಮ ರೀತಿಯ ವ್ಯವಹಾರ ಹಾಗೂ ಸಹಕಾರದಿಂದ ನಮ್ಮ ಸೊಸೈಟಿಯು ಪ್ರಗತಿಯತ್ತ ಸಾಗುತ್ತಿದೆ ಎಂದು ಹೇಳಿದರು.
ಈ ಸಮಯದಲ್ಲಿ ಸೊಸೈಟಿಯ ಉಪಾಧ್ಯಕ್ಷ ಉಮೇಶ ಮುಧೋಳ, ನಿರ್ದೇಶಕರಾದ ಕಲ್ಲಪ್ಪ ಬೆಂಡವಾಡ, ಶಿವಬಸು ಶೆಕ್ಕಿ,ಮಲ್ಲಪ್ಪ ಜುಂಜರವಾಡ, ಈಶ್ವರ ಗೊರಗುದ್ದಿ,ಮಲ್ಲಪ್ಪ ಪಾಟೀಲ, ಈರಪ್ಪ ಜುಂಜರವಾಡ, ಎಲ್ ಎಂ. ಪಾಟೀಲ, ಎಚ್. ಎಂ ಶೀಳನ್ನವರ, ಸಂಸ್ಥೆಯ ಮಾರ್ಗದರ್ಶಕರಾದ ಮಹಾದೇವ ಶೀಳನವರ, ಸಿಬ್ಬಂದಿವರ್ಗದವರು ಸೇರಿದಂತೆ ಸಂಘದ ಸದಸ್ಯರು ಉಪಸ್ಥಿತರಿದ್ದರು.