Homeಕವನಮಿನಿಕವನ

ಮಿನಿಕವನ

ಇತ್ತೀಚೆಗೆ ತಿಳಿದು ಬಂದ

ವಿಶೇಷವಾದ ಮಾಹಿತಿ
ಏನೆಂದರೆ ,
” ಕ್ವಾರಂಟೈನ್ ”
ಮತ್ತು
” ವ್ಹ್ಯಾಲೆಂಟೈನ್ ”
ಇಬ್ಬರೂ ಅವಳಿ
ಸಹೋದರರು ಎಂಬುದು.
” ಕ್ವಾರಂಟೈನ್ ”
ಹದಿನಾಲ್ಕು ದಿನ
ಇರುತ್ತದೆ ಮತ್ತು
” ವ್ಹ್ಯಾಲೆಂಟೈನ್ ”
ಹದಿನಾಲ್ಕು
ತಾರೀಖಿನಂದು
ಇರುತ್ತದೆ !

***********

ಒಂದು ಕಾಲ ಇತ್ತು.
ಯಾರನ್ನಾದರೂ ನೀವು
ಊರಿಗೆ ಕಳಿಸಲು
ಬಸ್ ನಿಲ್ದಾಣಕ್ಕೊ ಅಥವಾ
ರೈಲು ನಿಲ್ದಾಣಕ್ಕೋ
ಹೋದಾಗ,
ಎಲ್ಲರ ಕಣ್ಣುಗಳಲ್ಲಿ
ನೀರಾಡುತ್ತಿದ್ದವು.

ಆದರೆ,

ಇಂದು
ಸ್ಮಶಾನದಲ್ಲಿ ಕೂಡ
ಜನರು ಅಳುವುದಿಲ್ಲ !
ಸದ್ಯದ ಪರಿಸ್ಥಿತಿಯಲ್ಲಿ
ಜನನ ಮತ್ತು ಮರಣ
ಕೂಡ
ಬಲು ತುಟ್ಟಿಯಾಗಿವೆ.

ಸಿಝೇರಿಯನ್ ಇಲ್ಲದೆ
ಜನನವಿಲ್ಲ
ವ್ಹೆಂಟಿಲೇಟರ್
ಇಲ್ಲದೆ
ಸಾವು ಇಲ್ಲ !

ಅಳು ಮತ್ತು ನಗು
ಕೂಡ
ಇಂದು
ನಕಲಿ
ಆಗುತ್ತಿವೆ!


– ನೀಲಕಂಠ ದಾತಾರ.

RELATED ARTICLES

Most Popular

error: Content is protected !!
Join WhatsApp Group