ಸಣ್ಣ ಕತೆ : ಛಲದ ಮಲ್ಲಿ

0
150

ಛಲದ ಮಲ್ಲಿ

ಅದೊಂದು ಸಣ್ಣ ಹಳ್ಳಿ ಅಲ್ಲಿ ಬಡ ಗುಮಾಸ್ತನಿಗೆ ಮೂವರು ಹೆಣ್ಣುಮಕ್ಕಳು ಎರಡನೇ ಮಗಳು ಮಲ್ಲಿ ಬಹಳ ಚುರುಕು ಓದುವುದರಲ್ಲಿ ಆಟದಲ್ಲಿ ಸಹಪಠ್ಯ ಚಟುವಟಿಕೆಗಳಲ್ಲಿ ಸದಾ ಮುಂದು ಆದರೆ ನೋಡಲು ಸಾದಗೆಂಪಿನ ಹುಡುಗಿ.

ಸಂಬಂಧಿಕರು ಇವರ ಮನೆಯವರಿಗೆ ಮೂವರು ಹೆಣ್ಣುಮಕ್ಕಳು ಎಂದು ಗೇಲಿ ಮಾಡಿದರು ತಂದೆ ತಲೆ ಕೆಡಿಸಿಕೊಳ್ಳದೆ ತಾಯಿಯ ಆತ್ಮೀಯ ಭಾವಕ್ಕೆ ಸಹಾಯದ ಮನೋಭಾವಕ್ಕೆ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕೊಟ್ಟು ಓದಲು ಪ್ರೇರಣೆ ನೀಡಿದರು.

ಅಷ್ಟೇನು ಸುಂದರವಲ್ಲ ಆದರೆ ಒಳ್ಳೆಯ ನಡವಳಿಕೆ ಹೊಂದಿದ್ದು ತೊಂದರೆ ಇದ್ದವರಿಗೆ ಸಹಾಯ ಹಸ್ತ ಚಾಚಿದ ಮನಸು ಹೀಗೆ 5 ನೆಯ ತರಗತಿಯಲ್ಲಿ ಓದುತ್ತಿದ್ದಾಗ ತರಗತಿಯ ಕೊನೆಯ ದಿನದ ತರಗತಿ ಶಿಕ್ಷಕರೊಂದಿಗೆ ಗ್ರುಪ್ ಫೋಟೊ ಕಾರ್ಯಕ್ರಮ ನಡೆದಿತ್ತು ಅವಳ ಗೆಳತಿಯವರನ್ನು ಬೆಂಚ್ ಮೇಲೆ ಕುಳಿಸಿದರು ಇವಳನ್ನು ಕೆಳಗೆ ಕೂಡ್ರಿಸಿ ಫೋಟೋ ತೆಗೆದಿದ್ದರು ಇವಳಿಗೆ ಎಲ್ಲಿಲ್ಲದ ಕೋಪ ನನಗೆ ಕೆಳಗೆ ಕೂಡ್ರಿಸಿದರು ಇಂದಿನಿಂದ ನಾನು ಏನಾದರೂ ಸಾಧನೆ ಮಾಡಿ ಎಲ್ಲರಿಗಿಂತ ಹೆಚ್ಚಿನ ಸಾಧಾನೆ ಮಾಡಬೇಕೆಂಬ ಹಂಬಲ ಹೆಚ್ಚಾಗಿ ಅಧ್ಯಯನ ಮಾಡಲು ಪ್ರಾರಂಭಿಸಿದಳು.

ಹತ್ತನೇ ತರಗತಿಯ ಪರೀಕ್ಷೆ ಯಲ್ಲಿ ಹೆಚ್ಚಿನ ಅಂಕದೊಂದಿಗೆ ಪಾಸಾಗಿ ಪದವಿಯಲ್ಲಿ ಚಿನ್ನದ ಪಡಕದೊಂದಿಗೆ ಕೀರ್ತಿ ಹೆಚ್ಚಿಸಿದಳು.ಸ್ಪರ್ಧಾತ್ಮಕ ಪರೇಕ್ಷೆ ಗಳ ತಯಾರಿ ಮನೆಯಲ್ಲಿ ಮಾಡಿ k AS ನಲ್ಲಿ ಯಶಸ್ವಿ ಗಳಿಸಿದಳು ಊರಿನ ಜನ ಹೆಮ್ಮೆ ಪಟ್ಟು ಅವಳನ್ನು ಸನ್ಮಾನ ಮಾಡಿದರು. ಮನೆಯಲ್ಲಿ ಎಲ್ಲಕಡೆ ಸಂಭ್ರಮ ಪಡುವ ಹಾಗೆ ಮಾಡಿದಳು. ಹಾಗೆ ಛಲದಿಂದ ಪರಿಶ್ರಮ ಪಟ್ಟರೆ ಮೂಗು ಮುರಿಯುವರು ಅವಮಾನ ಮಾಡಿದವರಿಗೆ ತಕ್ಕ ಉತ್ತರ ಕೊಟ್ಟಳು..
ಹೆಣ್ಣೆಂದು ಬೀಳಗಳೆಯದಿರಿ ಹೆಣ್ಣು ಅಲ್ಲವೇ ನಮ್ಮ ಹಡೆದವಳು ಅಬಲೆಯಲ್ಲ ಸಬಲೆ ಎಂಬುದನ್ನು ಮಾಡಿ ತೋರಿಸಿದಳು ಛಲದ ಮಲ್ಲಿ.

ರೇಷ್ಮಾ ಕಂದಕೂರ, ಶಿಕ್ಷಕಿ
ರೆಡ್ಡಿ ಅನುದಾನಿತ ಪ್ರಾಥಮಿಕ ಶಾಲೆ, ಸಿಂಧನೂರು