ಸವದತ್ತಿಃ ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಸವದತ್ತಿ ವತಿಯಿಂದ ಇಂದು ಸಂಜೆ ೪ ಗಂಟೆಗೆ ಶ್ರೀ ಚಿದಂಬರೇಶ್ವರ ದೇವಸ್ಥಾನ ಗುರ್ಲಹೊಸೂರಿನಲ್ಲಿ ಅಗಲಿದ ಹಿರಿಯ ಚೇತನಗಳಾದ ನಾಡೋಜ ಚನ್ನವೀರ ಕಣವಿ,ಬಂಡಾಯ ಸಾಹಿತಿ ಚಂದ್ರಶೇಖರ ಪಾಟೀಲ,ಇಬ್ರಾಹಿಂ ಸುತಾರ ಹಾಗೂ ಬಸಲಿಂಗಯ್ಯ ಹಿರೇಮಠ ಇವರುಗಳಿಗೆ ಶೃದ್ಧಾಂಜಲಿ ಹಾಗೂ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತರೂ ಸವದತ್ತಿ ತಾಲೂಕಿನ ಮುನವಳ್ಳಿಯವರಾದ ಡಾ.ಬಸು ಬೇವಿನಗಿಡದ, ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಅಶೋಕ ಮಳಗಲಿ, ಸವದತ್ತಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಯಕ್ಕುಂಡಿಯ ಸರ್ಕಾರಿ ಕಾಲೇಜಿನ ಪ್ರಾಚಾರ್ಯರಾದ ಡಾ.ವೈ.ಎಂ.ಯಾಕೊಳ್ಳಿಯವರಿಗೆ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಚಿದಂಬರೇಶ್ವರ ದೇವಸ್ಥಾನದ ಶ್ರೀ ದಂಡಪಾಣಿ ದೀಕ್ಷಿತರು ವಹಿಸಿಕೊಳ್ಳಲಿದ್ದು. ಅಧ್ಯಕ್ಷತೆಯನ್ನು ಚುಟುಕು ಸಾಹಿತ್ಯ ಪರಿಷತ್ ತಾಲೂಕು ಘಟಕ ಸವದತ್ತಿಯ ಅಧ್ಯಕ್ಷರಾದ ಜಿ.ವಾಯ್.ಕರಮಲ್ಲಪ್ಪನವರ ವಹಿಸುವರು. ಮುಖ್ಯ ಅತಿಥಿಗಳಾಗಿ ಸವದತ್ತಿಯ ಖ್ಯಾತ ವೈದ್ಯರು ಚುಟುಕು ಸಾಹಿತಿಗಳು ಡಾ.ಅಭಿನಂದನ ಕಬ್ಬಿಣ ಹಾಗೂ ಗೌರವಾನ್ವಿತ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಬಿ.ವ್ಹಿ.ಬಿ.ನರಗುಂದ ಉಪಸ್ಥಿತರಿರುವರು ಎಂದು ಚುಟುಕು ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಗಳಾದ ಎಂ.ಎಸ್.ದೊಡಮನಿ ಹಾಗೂ ರಮೇಶ ಮುರಂಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.