spot_img
spot_img

ಡಾ.ಸಿದ್ಧಲಿಂಗಯ್ಯ ಅವರಿಗೆ ಶ್ರದ್ಧಾಂಜಲಿ

Must Read

- Advertisement -

ಸಿಂದಗಿ – ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಯು ಸ್ಥಳೀಯ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತದಲ್ಲಿ ಅಗಲಿದ ಮಹಾನ್ ಚೇತನ,ಸ್ವಾಭಿಮಾನಿ ಕವಿ,ಬಂಡಾಯ ಸಾಹಿತಿ,ಡಾ.ಸಿದ್ದಲಿಂಗಯ್ಯ ನವರಿಗೆ ಭಾವ ಪೂರ್ಣ ಶೃದ್ಧಾಂಜಲಿ ಸಲ್ಲಿಸಲಾಯಿತು.

ವೇದಿಕೆಯನ್ನು ಉದ್ದೇಶಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯು ಜಿಲ್ಲಾ ಸಮಿತಿ ವಿಜಯಪುರ ದ ಸಂಘಟನಾ ಸಂಚಾಲಕರಾದ ಆಯುಷ್ಮಾನ ವೈ ಸಿ ಮಯೂರ ರವರು ಮಾತನಾಡಿ, ಡಾ ಸಿದ್ದಲಿಂಗಯ್ಯ ನವರು ಕನ್ನಡ ಸಾರಸತ್ವ ಲೋಕದ ಮಿನಗುತಾರೆ ಯಾಗಿದ್ದರು. ಅವರ ಮೊನಚಾದ ಬರಹ ಮತ್ತು ಭಾಷಣಗಳ ಮೂಲಕ ಭಾರತೀಯ ಸಾಮಾಜಿಕ ಬದಲಾವಣೆಗೆ ಪ್ರೇರೆಪಿಸಿದ ಮಹಾನ್ ಚಿಂತಕರು.

ಎರಡು ಬಾರಿ MLC ಗಳಾಗಿ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕನ್ನಡ ನಾಡು ನುಡಿಗಾಗಿ ಅಪಾರ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ಕರ್ನಾಟಕದಲ್ಲಿ ದಲಿತ ಚಳವಳಿಗೆ ಪ್ರೇರಕ ಶಕ್ತಿಯಾಗಿ, ಮಾರ್ಗದರ್ಶಕರಾಗಿ ಪ್ರತಿ ಮನೆ ಮನೆಯಲ್ಲಿ ಹೋರಾಟದ ಹಣತೆ ಹಚ್ಚಿದವರು ಡಾ//ಸಿದ್ದಲಿಂಗಯ್ಯನವರು. ಅವರು ನಮ್ಮನ್ನು ಅಗಲಿದರೂ ಅವರ ಬರಹಗಳು ನಮ್ಮೊಂದಿಗೆ ಇವೆ. ಹೀಗಾಗಿ ಅವರ ಬರಹ ಮತ್ತು ಭಾಷಣಗಳನ್ನು ಸರ್ಕಾರ ಎಲ್ಲಾ ಭಾಷೆಗಳಿಗೆ ಅನುವಾದಿಸಲಿ ಎಂದು ಆಗ್ರಹಿಸಿದರು.

- Advertisement -

ಅವರ ಅಗಲಿಕೆಯ ನೋವನ್ನು ನೀಗಿಸಿಕೊಳ್ಳುವ ಶಕ್ತಿ ಅವರ ಕುಟುಂಬಕ್ಕೆ ಮತ್ತು ರಾಜ್ಯದ ಜನತೆಗೆ ತಥಾಗತ ಗೌತಮ್ ಬುದ್ಧ ಕರುಣಸಲಿ ಎಂದು ಪ್ರಾಥಿಸಿದರು.

ಈ ಸಂದರ್ಭದಲ್ಲಿ ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದ ಆರ್.ಎಂ.ಚೌರ ರವರು ಡಾ.ಸಿದ್ದಲಿಂಗಯ್ಯ ನವರು ದಲಿತ ಕವಿಗಳಲ್ಲ ಬಂಡಾಯ ಸಾಹಿತಿಗಳು ಯಾರಿಗೆ ಬಂತು ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ, ಇಕ್ರಲಾ ಎಬ್ಬರಲಾ ಈ ಸುಳೇ ಮಕ್ಕಳ ಮೂಳೆ ಮುರಿರಲಾ ಎಂಬ ಕವನಗಳನ್ಮು ಗಮನಿಸಿದ್ದಾಗ ಬಂಡಾಯದ ಬಾವುಟಗಳಾಗಿವೆ ಎಂದರು.

ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಬಿ.ಡೊಡಮನಿ ವಕೀಲರು ಮತ್ತು ಎಸ್.ಬಿ.ಖಾನಾಪೂರ ವಕೀಲರು ಮಾತನಾಡಿದರು.

- Advertisement -

ಹಿರಿಯ ನ್ಯಾಯವಾದಿಗಳಾದ ಕೆ.ಬಿ ಜನಗೊಂಡ, ಜಿ.ವಾಯ್.ಬಾಣಿ , ಆರ್.ಎಸ್.ಹೊಸಮನಿ , ಬಿ.ಬಿ ಕುಮಸಗಿ , ಎ.ಎಸ್.ದಂಗಾಪೂರ ಹಾಗೂ ದ.ಸಂ‌.ಸ ದ ಪದಾಧಿಕಾರಿಗಳಾದ ಶಿವಪುತ್ರ ಮೇಲಿನಮನಿ, ಶರಣು ಚಲವಾದಿ,ಜೈಭೀಮ ತಳಕೇರಿ,ಪ್ರದೀಪ ಹಜೇನವರ , ಪ್ರವೀಣ ಸುಲ್ಪಿ, ಹರ್ಷವರ್ಧನ ಪೂಜಾರಿ, ಪ್ರವೀಣ ಅಲಹಳ್ಳಿ , ಅನೀಲ ಜಾಬನವರ ಭಾಗಿಯಾಗಿದ್ದರು

- Advertisement -
- Advertisement -

Latest News

ಭತ್ತದ ನಾಡು ಕೆ.ಆರ್.ನಗರ ಕಾವೇರಿ ತೀರದ ಅರ್ಕೇಶ್ವರ

ನಾವು ಕಪ್ಪಡಿ ದರ್ಶನ ಮಾಡಿಕೊಂಡು ಕೆ.ಆರ್.ನಗರದ ಅರ್ಕೇಶ್ವರ ದೇವಸ್ಥಾನ ನೋಡಲು ಪ್ರಯಾಣ ಮುಂದುವರೆಸಿದೆವು. ಕೆ.ಆರ್.ನಗರದಿಂದ ಹಾಸನ ರಸ್ತೆಯಲ್ಲಿ ಮೂರ್ನಾಲ್ಕು ಕಿ.ಮೀ. ದೂರದಲ್ಲಿ ಕಾವೇರಿ ನದಿಯ ದಂಡೆಯಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group