ಶ್ರೀ ಪುಂಡಲೀಕ ಶ್ರೀಗಳ ಶಿಲಾಮಂದಿರ ಮತ್ತು ಆಂಗ್ಲ ಮಾಧ್ಯಮ ಶಾಲೆ ಹಾಗೂ ಕಟ್ಟಡ ಉದ್ಘಾಟನೆ
ತೊಂಡಿಕಟ್ಟಿ: ರಾಮದುರ್ಗ ತಾಲೂಕಿನ ತೊಂಡಿಕಟ್ಟಿ ಗ್ರಾಮದಲ್ಲಿ ಡಿ.೨೮ ರಿಂದ ಜ.೩ ರವರೆಗೆ ಶ್ರೀ ಅವಧೂತ ಗಾಳೇಶ್ವರ ಮಹಾಸ್ವಾಮಿಗಳ ೮೦ನೇ ಪುಣ್ಯಾರಾಧನೆ ಮತ್ತು ಶ್ರೀ ಪುಂಡಲೀಕ ಮಹಾರಾಜರ ಶಿಲಾಮಂದಿರದ ಉದ್ಘಾಟನೆ, ಮೂರ್ತಿಪ್ರಾಣಪ್ರತಿಷ್ಠಾಪನೆ ಕುಂಭಾಭಿಷೇಕ ಹಾಗೂ ಎಐಎಂ ಪಾರ ಸೇವಾ ಆಂಗ್ಲ ಮಾಧ್ಯಮ ಶಾಲಾ ಕಟ್ಟಡ ಉದ್ಘಾಟನೆ ಮತ್ತು ಲಕ್ಷದೀಪೋತ್ಸವ, ಶ್ರೀಗಳ ತುಲಾಭಾರ ಕಾರ್ಯಕ್ರಮ ಶ್ರೀ ಗಾಳೇಶ್ವರ ಮಠದ ಪೀಠಾಧಿಪತಿಗಳಾದ ಶ್ರೀ ಅಭಿನವ ವೆಂಕಟೇಶ್ವರ ಮಹಾರಾಜರ ನೇತೃತ್ವದಲ್ಲಿ ಜರುಗಲಿದೆ.
ಡಿ.೨೮ ರಿಂದ ಪ್ರತಿ ದಿನ ಶ್ರೀಗಳ ಮೂರ್ತಿಗಳಿಗೆ ರುದ್ರಾಭಿಷೇಕ ಶ್ರೀಮದ್ಭಗವದ್ಗೀತಾ ಪಾರಾಯಣ. ಸುಮಿತ ಭಟ್ಟ ಮೈಸೂರ ಹಾಗೂ ಸಂಗಡಿಗರಿಂದ ಹೋಮ, ಹವನ, ಪೂಜಾ ಕಾರ್ಯಕ್ರಮ ಜರುಗುವವು. ಡಿ.೨೮ ರಂದು ಮುಂಜಾನೆ ೧೦ಕ್ಕೆ ಪ್ರಣವ ಧ್ವಜಾರೋಹಣ, ಮಹಾರಥದ ಕಳಸಾರೋಹಣ ನಂತರ ಜರುಗುವ “ಅವಧೂತ ವೇದಾಂತ ವೇದಿಕೆ ಉದ್ಘಾಟನೆ” “ಧರ್ಮಂ ಕುರು” ಪ್ರವಚನದ ಸಾನ್ನಿಧ್ಯವನ್ನು ಇಂಚಲದ ಡಾ.ಶಿವಾನಂದ ಭಾರತಿ ಸ್ವಾಮಿಜಿ, ನಿಡಸೋಸಿಯ ಶ್ರೀ ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಜಿ ವಹಿಸುವರು. ಹರಿಹರಪುರದ ಗೌರೀಗದ್ದೆ ಆಶ್ರಮದ ಶ್ರೀ ಅವಧೂತ ವಿನಯ ಗುರೂಜಿ ಅಧ್ಯಕ್ಷತೆ ವಹಿಸುವರು.
ಸಂಜೆ ೪ಕ್ಕೆ ವಿವಿಧ ಸಾಂಸ್ಕೃತಿಕ ವಾದ್ಯಮೇಳ ಮತ್ತು ಕುಂಭಮೇಳಗಳೊಂದಿಗೆ ರಜತರಥೋತ್ಸವ, ಬೆಳಗಾವಿ ಎಐಎಂ ಪಾರ ಸೇವಾದ ಸ್ವಾಮಿ ಚಿತ್‌ಪ್ರಕಾಶಾನಂದ ಸರಸ್ವತಿ ಹಾಗೂ ಉಪಸ್ಥಿತ ಸರ್ವ ಪೂಜ್ಯರ ಭವ್ಯ ಮೆರವಣಿಗೆ ಜರುಗುವುದು. ಸಂಜೆ ೭ಕ್ಕೆ ಜರುಗುವ “ಸುವಿಚಾರ ಚಿಂತನೆ”ಯ ಸಾನ್ನಿಧ್ಯವನ್ನು ಮುಗಳಖೋಡದ ಡಾ.ಮುರುಘರಾಜೇಂದ್ರ ಮಹಾಸ್ವಾಮಿಜಿಗಳು ವಹಿಸುವರು. ಶ್ರೀ ಸ್ವಾಮಿ ಚಿತ್‌ಪ್ರಕಾಶಾನಂದ ಸರಸ್ವತಿ ಅಧ್ಯಕ್ಷತೆವಹಿಸುವರು, ಮಲ್ಲಾಪೂರದ ಶ್ರೀ ಚಿದಾನಂದ ಮಹಾಸ್ವಾಮಿಗಳ ನೇತೃತ್ವ ವಹಿಸುವರು ಮತ್ತು ವಿವಿಧ ಪೂಜ್ಯರು ಭಾಗವಹಿಸುವರು.
ಡಿ.೨೯ ರಂದು ೧೦ ಶ್ರೀ ಪುಂಡಲೀಕ ಮಹಾರಾಜರ ಸಮಾಧಿ ಮಂದಿರದ ಲೋಕಾರ್ಪಣೆ ಸಮಾರಂಭದ ಸಾನ್ನಿಧ್ಯವನ್ನು ಬೀದರದ ಡಾ.ಶಿವಕುಮಾರ ಮಹಾಸ್ವಾಮಿಗಳು ವಹಿಸುವರು, ಹುಕ್ಕೇರಿಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸುವರು ಮತ್ತು ವಿವಿಧ ಮಠಾಧಿಶರು ಉಪಸ್ಥಿತರಿರುವರು.
ಸಂಜೆ೭ ಗಂಟೆಗೆ ಜರುಗುವ “ಶರಣರ ಅನುಭವಾಮೃತ” ಕಾರ್ಯಕ್ರಮದ ಸಾನ್ನಿಧ್ಯವನ್ನು ಡಾ.ಶಿವಕುಮಾರ ಮಹಾಸ್ವಾಮಿಗಳು ವಹಿಸುವರು. ಬೆಳಗಾವಿಯ ಶ್ರೀ ಗುರುಸಿದ್ಧ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸುವರು. ಹಂದಿಗುಂದ ಶ್ರೀ ಶಿವಾನಂದ ಮಹಾಸ್ವಾಮಿಗಳು ನೇತೃತ್ವವಹಿಸುವರು ಹಾಗೂ ವಿವಿಧ ಮಠಾಧಿಶರು ಉಪಸ್ಥಿತರಿರುವರು.
ಡಿ.೩೦ ರಂದು ಮುಂಜಾನೆ ೧೦ ಗಂಟೆಗೆ ಜರುಗುವ ಎಐಎಂ ಪಾರ ಸೇವಾ ಆಂಗ್ಲ ಮಾಧ್ಯಮ ಶಾಲಾ ಉದ್ಘಾಟನೆಯ ಸಾನ್ನಿಧ್ಯವನ್ನು ಧಾರವಾಡದ ಮಾತೋಶ್ರೀ ಸ್ವಾಮಿ ಸ್ವಾತ್ಮನಿಷ್ಠಾನಂದ ಸರಸ್ವತಿ ಪೂಜ್ಯರು ವಹಿಸುವರು, ಬೆಳಗಾವಿಯ ಶ್ರೀ ಸ್ವಾಮಿ ಚಿತ್‌ಪ್ರಕಾಶಾನಂದ ಸರಸ್ವತಿ ಅಧ್ಯಕ್ಷತೆ ವಹಿಸುವರು, ಚನೈ ಎಐಎಂ ಪಾರ ಸೇವಾ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಶೀಲಾಬಾಲಾಜಿ ಹಾಗೂ ಎಐಎಂ ಪಾರ ಸೇವಾ ಸಂಸ್ಥೆಯ ಶ್ರೀ ಸ್ವಾಮಿ ಬ್ರಹ್ಮಪರಾನಂದ ಸರಸ್ವತಿ ಪೂಜ್ಯರು (ಜೈಪೂರ), ಶ್ರೀ ಸ್ವಾಮಿ ಐಶ್ವರ್ಯಾನಂದ ಸರಸ್ವತಿ ಪೂಜ್ಯರು (ಇಂದೋರ), ಶ್ರೀ ವಿಷ್ಣುಸ್ವರೂಪಾನಂದ ಸರಸ್ವತಿ ಪೂಜ್ಯರು (ನಾಗಪೂರ), ಶ್ರೀ ಸ್ವಾಮಿ ಮೋಕ್ಷಾನಂದ ಸರಸ್ವತಿ ಪೂಜ್ಯರು (ಉಡುಪಿ), ಶ್ರೀ ಸತ್ಯಾತ್ಮಾನಂದ ಸರಸ್ವತಿ ಪೂಜ್ಯರು(ತೆಲಣಗಾಣ), ಶ್ರೀ ಸ್ವಾಮಿ ಶುಧ್ಧವಿದ್ಯಾನಂದ ಸರಸ್ವತಿ ಪೂಜ್ಯರು(ತಮಿಳುನಾಡು) ಹಾಗೂ ಚನೈ ಎನ್.ಎಸ್ ದೋಸಿ ಕಂಪನಿಯ ಭರತ ದೋಸಿ ಉದ್ಘಾಟಿಸುವರು.
ಸಂಜೆ ೭ಗಂಟೆಗೆ ಜರುಗುವ “ಅಧ್ಯಾತ್ಮತತ್ವ ಚಿಂತನೆ” ಕಾರ್ಯಕ್ರಮದ ಸಾನ್ನಿಧ್ಯವನ್ನು ಧಾರವಾಡದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಮಂಟೂರದ ಶ್ರೀ ಸದಾನಂದ ಸ್ವಾಮಿಗಳು ವಹಿಸುವರು, ಪಿ.ಜಿ.ಹುಣಶ್ಯಾಳದ ಶ್ರೀ ನಿಜಗುಣದೇವರು ಅಧ್ಯಕ್ಷತೆ ವಹಿಸುವರು. ಪರಮಾನಂದವಾಡಿಯ ಡಾ.ಬ್ರಹ್ಮಾನಂದ ಸ್ವಾಮಿಗಳು ನೇತೃತ್ವ ವಹಿಸುವರು ಹಾಗೂ ವಿವಿಧ ಮಠಾಧಿಶರು ಉಪಸ್ಥಿತರಿರುವರು.
ಡಿ.೩೧ರಂದು ಮುಂಜಾನೆ ೧೦ ಗಡೆಗೆ ಜರುಗುವ ಕುಂಭಾಭಿಷೇಕ ಹಾಗೂ ಸತ್ಸಂಗ ಸಮ್ಮೇಳನದ ಪಾವನ ಸಾನ್ನಿಧ್ಯವನ್ನು ಆದಿಚುಂಚನಗಿರಿಯ ಡಾ.ನಿರ್ಮಲಾನಂದನಾಥ ಮಹಾಸ್ವಾಮಿಗಳು ವಹಿಸುವರು, ಚಿತ್ರದುರ್ಗದ ಶ್ರೀ ಶಿವಲಿಂಗಾನAದ ಮಹಾಸ್ವಾಮಿಗಳು ಅಧ್ಯಕ್ಷತೆವಹಿಸುವರು. ಹಾಸನದ ಶ್ರೀ ಶಂಭುನಾಥ ಸ್ವಾಮೀಜಿ ನೇತೃತ್ವ ವಹಿಸುವರು, ಶೃಂಗೇರಿಯ ಗುಣನಾಥ ಸ್ವಾಮೀಜಿ ಸಮ್ಮುಖ ವಹಿಸುವರು ಹಾಗೂ ವಿವಿಧ ಮಠಾಧಿಶರು ಉಪಸ್ಥಿತರಿರುವರು. ಸಂಜೆ ೫-೩೦ಕ್ಕೆ ಶ್ರೀ ಅವಧೂತ ಗಾಳೇಶ್ವರ ಮಹಾರಥೋತ್ಸವ ಜರುಗುವುದು.
ಸಂಜೆ.೭ ಗಂಟೆಗೆ ಜರುಗುವ ವೇದಾಂತ ಸುವಿಚಾರ ಚಿಂತನಗೋಷ್ಠಿಯ ಪಾವನ ಸಾನ್ನಿಧ್ಯವನ್ನು ಹುಬ್ಬಳ್ಳಿಯ ಶ್ರೀ ಅಭಿನವ ಸಿದ್ಧಾರೂಢ ಮಹಾಸ್ವಾಮಿಗಳು, ಸಾನ್ನಿಧ್ಯವನ್ನು ಕಾಡರಕೊಪ್ಪದ ಶ್ರೀ ದಯಾನಂದ ಸರಸ್ವತಿ ಸ್ವಾಮಿಗಳು ವಹಿಸುವರು. ಕುಳ್ಳೂರುದ ಶ್ರೀ ಬಸವಾನಂದ ಭಾರತಿ ಸ್ವಾಮಿಗಳು ಅಧ್ಯಕ್ಷತೆ ವಹಿಸುವರು, ಬಾಗೋಜಿಕೊಪ್ಪದ ಡಾ.ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮಿಜಿಗಳು ಸಮ್ಮುಖದಲ್ಲಿ ವಿವಿಧ ಮಠಾಧಿಶರು ಉಪಸ್ಥಿತರಿರುವರು.
ಜ.೧ ರಂದು ಮುಂಜಾಣೆ ೧೦ ಘಂಟೆಗೆ ಜರುಗುವ “ಪ್ರವಚನಸುಧೆ”ಯ ಕಾರ್ಯಕ್ರಮದ ಪಾವನ ಸಾನ್ನಿಧ್ಯವನ್ನು ಅಂಕಲಿಯ ಬ್ರಹ್ಮಶ್ರೀ ವೀರಭದ್ರ ಮಹಾಸ್ವಾಮಿಗಳು, ಸಾನ್ನಿಧ್ಯವನ್ನು ಮಹಾಲಿಂಗಪೂರದ ಸಹಜಯೋಗಿ ಸಹಜಾನಂದ ಸ್ವಾಮಿಗಳು ವಹಿಸುವರು, ಕಟಕೋಳದ ಶ್ರೀ ಸಚ್ಚಿದಾನಂದ ಸ್ವಾಮಿಗಳು ಅಧ್ಯಕ್ಷತೆ ವಹಿಸುವರು. ಚಿಪ್ಪಲಕಟ್ಟಿಯ ಶ್ರೀ ಶಿವಾನಂದ ಸ್ವಾಮಿಗಳ ಸಮ್ಮುಖದಲ್ಲಿ ಹಾಗೂ ವಿವಿಧ ಮಠಾಧಿಶರು ಉಪಸ್ಥಿತರಿರುವರು.
ಸಂಜೆ೬-೩೦ಕ್ಕೆ ಲಕ್ಷದೀಪೋತ್ಸವಕ್ಕೆ ಕನ್ನೇರಿ ಸಿದ್ಧಗಿರಿಮಠದ ಶ್ರೀ ಅದೃಶ್ಯಕಾಡಸಿದ್ದೇಶ್ವರ ಮಹಾಸ್ವಾಮಿಗಳು ಪಾವನ ಸಾನ್ನಿಧ್ಯ ವಹಿಸಿ ದೀಪಪ್ರಜ್ವಲನೆ ಮಾಡುವರು, ಶಿರೋಳದ ಶ್ರೀ ಶಂಕರಾರೂಢ ಸ್ವಾಮಿಗಳು ಅಧ್ಯಕ್ಷತೆ ವಹಿಸುವರು. ರೂಗಿಯ ಶ್ರೀ ನಿತ್ಯಾನಂದ ಸ್ವಾಮಿಗಳ ಸಮ್ಮುಖ ವಹಿಸುವರು ಹಾಗೂ ವಿವಿಧ ಮಠಾಧಿಶರು ಉಪಸ್ಥಿತರಿರುವರು.
ಜ.೨ ಮತ್ತು ೩ ರಂದು ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮಗಳು, ಟಗರಿನ ಕಾಳಗ ಸೇರಿದಂತೆ ವಿವಿಧಶರತ್ತಗಳು ಮತ್ತು ಬಯಲಾಟಗಳು ಜರುಗಲಿವೆ.
ಜ.೩ ರಂದು ಸಂಜೆ ೬ ಗಂಟೆಗೆ ಕಳಸ ಅವರೋಹಣದೊಂದಿಗೆ ಕಾರ್ಯಕ್ರಮ ಮಹಾಮಂಗಲಗೊಳ್ಳಲಿದೆ