ಸರ್ವ ಜನಾಂಗಕ್ಕೂ ಜಗದ್ಗುರು ಬಸವೇಶ್ವರರು ಮಾದರಿ :ಕಪರಟ್ಟಿ  ಶ್ರೀಗಳು 

Must Read
ಮೂಡಲಗಿ –  ಹನ್ನೆರಡನೆ ಶತಮಾನದಲ್ಲಿ ಬಸವಣ್ಣನವರು ಜಾತಿ ಮತ ಪಂಥವೆನ್ನದೇ ಎಲ್ಲ ಜನಾಂಗದ ಶ್ರೇಯೋಭಿವೃದ್ಧಿಗೆ ಶ್ರಮಿಸಿ ಕಲ್ಯಾಣದಲ್ಲಿ ಕ್ರಾಂತಿ ಮಾಡಿ ಇವತ್ತಿಗೂ ಸಹ ಅವರು ಎಲ್ಲ ಧರ್ಮಧವರಿಗೂ  ಮಾದರಿ ಆಗಿದ್ದಾರೆ ಎಂದು ಕಪರಟ್ಟಿಯ ಶ್ರೀ ಬಸವರಾಜ ಸ್ವಾಮೀಜಿ ಹೇಳಿದರು.
   ತಾಲೂಕಿನ ಶಿವಾಪೂರ(ಹ)  ಕಪರಟ್ಟಿ ಶ್ರೀಗುರು ಮಹಾದೇವ ಆಶ್ರಮ ಗೋಕಾಕ, ಭೀಮವ್ವ ಲಕ್ಷ್ಣಣರಾವ ಜಾರಕಿಹೊಳಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್(ರಿ) ಗೋಕಾಕ ಇವರ ಸಹಯೋಗದೊಂದಿಗೆ ಹಾಗೂ ವೀರಶೈವ ಲಿ೦ಗಾಯತ ಧರ್ಮ ಜಾಗೃತಿ ಬಳಗ ಇವರ ಸಹಕಾರದೊಂದಿಗೆ  ಮೂಡಲಗಿ ತಾಲೂಕಿನ ಶಿವಾಪೂರ(ಹ) ಗ್ರಾಮದಲ್ಲಿ   ಆಷಾಢ ಮಾಸದ ಪ್ರಯುಕ್ತ ಜರುಗಿದ ಪ್ರತಿ ಹಳ್ಳಿ ಹಳ್ಳಿಗೂ ಶ್ರೀ ಬಸವ ಮಹಾಪೂಜೆ ಕಾರ್ಯಕ್ರಮದಲ್ಲಿ  ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
      ಕಾರ್ಯಕ್ರಮದಲ್ಲಿ ಗ್ರಾಮದ ವತಿಯಿಂದ ಶ್ರೀ ಗಳನ್ನು ಸನ್ಮಾನಿಸಲಾಯಿತು ಹಾಗೂ  ಕಾರ್ಯಕ್ರಮಕ್ಕೆ  ಧನ ಸಹಾಯ ಮಾಡಿದ ಜೆ ಜೆ ಆಸ್ಪತ್ರೆ ನಿರ್ದೇಶಕರಾದ ಶಿವನಗೌಡ ಪಾಟೀಲ ಇವರಿಗೆ ನೆನಪಿನ ಕಾಣಿಕೆ ಕೊಟ್ಟು ಗೌರವಿಸಲಾಯಿತು,
    ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಕೆ.ಬಿ. ಮುಧೋಳ,ಎಸ್.ಎಸ್ ಪಾಟೀಲ, ಐ.ಬಿ. ಬೆಳಗಲಿ, ಎಸ್.ವಾಯ್‌ ಜುಂಜರವಾಡ, ಎಸ್.ಡಿ. ಪಾಟೀಲ, ಎಸ್. ಬಿ. ರಡ್ಡೇರಟ್ಟಿ, ಕೆ.ಜಿ ಮುಧೋಳ ಸೇರಿದಂತೆ ಸಂಘ ಸಂಸ್ಥೆಯ ಪದಾಧಿಕಾರಿಗಳು, ಪಂಚಾಯತ್ ಸದಸ್ಯರು,ಗ್ರಾಮಸ್ಥರು ಉಪಸ್ಥಿತರಿದ್ದರು.
Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group