ಜಗತ್ತಿನ ಮೊದಲ ಪ್ರೇಮಿ ಶ್ರೀಕೃಷ್ಣ, ಆರಾಧನೆಗೆ ಇನ್ನೊಂದು ಹೆಸರೇ ರಾಧಾ
ಪ್ರೇಮಿಗಳು ಎಂದಾಗ ಹೊಳೆಯುವ ಅಪ್ಪಟ ಜೋಡಿ ಅಂದರೆ “ರಾಧಾಕೃಷ್ಣ” ರುಕ್ಮಿಣಿ ಕೃಷ್ಣ ಪರಮಾತ್ಮನ ಹೆಂಡತಿಯಾದರೂ ಕೂಡ, ರಾಧೆ ಕೃಷ್ಣನನ್ನು ನಾವು ಆರಾಧಿಸುತ್ತೇವೆ. ಯುಗ ಯುಗಗಳಿಂದಲೂ ಕೇಳಿಬರುವ ಪ್ರೇಮಿಗಳ ಪಟ್ಟಿಯಲ್ಲಿ ಮೊದಲನೆಯ ಸ್ಥಾನ ರಾಧಾ ಕೃಷ್ಣನದು.
ಕೃಷ್ಣ ಜಗದೊದ್ಧಾರಕ, ಜಗದ್ರಕ್ಷಕ,ರಾಧೆ ಯುಗ ಯುಗಗಳವರೆಗೂ ಕೃಷ್ಣನ ಬರುವಿಕೆಗಾಗಿ ಕಾಯುತ್ತಾಳೆ, ಆರಾಧಿಸುತ್ತಾಳೆ, ಪೂಜಿಸುತ್ತಾಳೆ, ಕೃಷ್ಣನನ್ನು ಪ್ರೇಮಿಸುತ್ತಾಳೆ.
ಕೃಷ್ಣನಿಗೂ ಕೂಡ ರಾಧೆಯ ಮೇಲೆ ಅಷ್ಟೆ ಪ್ರೀತಿ. ಎಷ್ಟು ದೂರ ಇದ್ದರೂ ಕೂಡ ರಾಧೆಯ ಪ್ರೀತಿಯ ಅನುಭವ ಆಗುತ್ತದೆ. ಪ್ರೀತಿ ಎಂದರೆ “ಎಲ್ಲೋ ಇದ್ದರೂ ಕೂಡ, ನಮ್ಮೊಂದಿಗೆ ಇದಾರೆ ಎನ್ನುವ ಸುಂದರ ಅನುಭವ ” ಎಂದು ಶ್ರೀಕೃಷ್ಣ ಪರಮಾತ್ಮ ಹೇಳುತ್ತಾನೆ.
ಒಬ್ಬರಿಗೊಬ್ಬರು ಪ್ರೀತಿ, ವಿಶ್ವಾಸ, ನಂಬಿಕೆ,ಗೌರವಗಳನ್ನು ಕೊಡುವುದು ನಿಜವಾದ ಪ್ರೀತಿ, ಪ್ರೀತಿಯನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಂಡರೆ ಅದಕ್ಕೆ ಮೋಹ ಎನ್ನುತ್ತಾರೆ, ಅದಕ್ಕೆ ನೋವಾಗುತ್ತದೆ. ಪ್ರೀತಿಗೆ ಸ್ವತಂತ್ರವಾಗಿ ಇರಲು ಬಿಡಬೇಕು. ಒತ್ತಾಯದಿಂದ ಪಡೆಯಬಾರದು
ಪ್ರೀತಿ ನಿನ್ನ ಬಳಿಗೆ ಬಂದರೆ ಸ್ವೀಕರಿಸು, ಇಲ್ಲ ಅಂದರೆ ದೂರ ಸರಿ ಆದರೆ ಹಿಂದಿರುಗಿ ಹೋದ ಪ್ರೀತಿ ಮರಳಿ ಬರಲು ಸಾಧ್ಯ ಇಲ್ಲ.ಪ್ರೀತಿ ಪ್ರೀತಿಯಾಗಿಯೇ ಇರಲಿ, ದೈಹಿಕ ಸುಖ, ವ್ಯಾಮೋಹ, ಹಿಡಿತ, ಇದು ಕ್ಷಣಿಕ ಸುಖ ಮಾತ್ರ ಆಗಿರುತ್ತದೆ. ಅಂತೆಯೇ ರಾಧೆ ಶ್ರೀಕೃಷ್ಣನ ಬರುವಿಕೆಗಾಗಿ ಕಾಯುತ್ತಾಳೆ, ಪೂಜಿಸುತ್ತಾಳೆ, ಆರಾಧಿಸುತ್ತಾಳೆ. ರಾಧೆಯ ಭಕ್ತಿಗೆ ಇನ್ನೊಂದು ಹೆಸರೇ “ಕಲಿಯುಗದ ಮೀರಾಬಾಯಿ”. ಇವಳು ಕೂಡ ಕೃಷ್ಣಪರಮಾತ್ಮನಲ್ಲಿ ಅಪಾರ ಭಕ್ತಿ ಉಳ್ಳವಳು. ಮೀರಾಬಾಯಿಯ ಒಂದೊಂದು ಆರಾಧನೆಲ್ಲಿಯೂ ಕೂಡ ಕೃಷ್ಣನ ಮೇಲೆ ಇರುವ ಪ್ರೀತಿ, ಭಕ್ತಿಯ ಆಳವನ್ನು ತೋರಿಸುತ್ತದೆ. ನಮ್ಮ ಪ್ರೀತಿ ರಾಧಾಕೃಷ್ಣರ ಪ್ರೀತಿಯ ಹಾಗೆ ಇರಬೇಕು,ಯಾವುದಕ್ಕೂ ಸಂಬಂಧಗಳು ಗಟ್ಟಿಯಾಗಿ ಇರಬೇಕು ಎನ್ನುವ ಸಂದೇಶ ಶ್ರೀಕೃಷ್ಣ ಪರಮಾತ್ಮನದು.
” ಬಾಗುವುದರಿಂದ ಸಂಬಂಧಗಳು ಉಳಿಯುತ್ತವೆ ಎಂದರೆ ಬಾಗಿ ಬಿಡು, ಆದರೆ ಪ್ರತಿ ಸಾರಿ ನೀನೇ ಬಾಗುವುದಾದರೆ, ಬಾಗುವುದನ್ನು ಬಿಟ್ಟುಬಿಡು ” ಎನ್ನುತಾನೆ ಶ್ರೀ ಕೃಷ್ಣ ದೇವಾ.ಕಾಮಕ್ಕಾಗಿ ಪ್ರೀತಿ ಮಾಡಬಾರದು. ಕೃಷ್ಣ ಪರಮಾತ್ಮ ಕೇವಲ ಪ್ರೇಮಿಯಲ್ಲ, ಜಗದೊದ್ಧಾರಕ, ಚೆಲುವ, 16 ಸಾವಿರ ಗೋಪಿಕೆಯರನ್ನು ಮದುವೆ ಮಾಡಿಕೊಂಡಿಲ್ಲ, 16 ಸಾವಿರ ಸ್ತ್ರೀಯರು ಇವನನ್ನು ಆರಾಧಿಸುತ್ತಿದರು, ಕೃಷ್ಣನ ಕೊರಳಿನ ನಾದಕ್ಕೆ ಮೈ ಮರೆಯುತ್ತಿದ್ದರು , ಕೃಷ್ಣನ ಸೇವೆ, ಮನುಕುಲದ ಒಳಿತನ್ನು ಬಯಸುವ ಇವನನ್ನು ಹೃದಯದಲ್ಲಿಟ್ಟು ಪೂಜಿಸುತ್ತಿದ್ದರು.
“ಕೃಷ್ಣ ಪರಮಾತ್ಮ ಕುಚೇಲರ ಗೆಳೆತನ ಎಲ್ಲ ಎಲ್ಲೆಗಳನ್ನು ಮೀರಿ ನಿಂತಿದೆ , ಇವರ ಗೆಳೆತನಕ್ಕೆ ಸಾಟಿ ಯಾರು. ?
ಕೃಷ್ಣ ಪರಮಾತ್ಮ ಒಳ್ಳೆಯ ಸಾರಥಿ, ಮಾರ್ಗದರ್ಶಕ ಕೂಡ ತನಗೆ ಎಲ್ಲ ಗೊತ್ತಿದ್ದರೂ, ತನ್ನಲ್ಲಿ ಜಗತ್ತಿನ ಎಲ್ಲ ಶಕ್ತಿ ಇದ್ದರೂ ಕೂಡ ಅರ್ಜುನನಿಗೆ ಕೇವಲ ಸಾರಥಿಯಾಗಿಯೇ ಕೆಲಸ ಮಾಡಿದನು ಹೊರತು,ಯಾವುದೇ ಗುಟ್ಟು ಬಿಟ್ಟು ಕೊಡಲಿಲ್ಲ, ಯುದ್ಧವನ್ನು ಹೋರಾಡಿಯೇ ಗೆಲ್ಲಬೇಕು ಎನ್ನುವ ಮನೋಭಾವನೆಯು ಸ್ವಾರ್ಥಕ್ಕೆ ವಿರುದ್ಧ ಆಗಿರುವುದು. ದುಷ್ಟ ಕಂಸನನ್ನು ಕೊಲೆ ಮಾಡಿ, ಅನ್ಯಾಯ ಅರಾಜಕತೆಯನ್ನು ನಾಶ ಮಾಡಿದನು.
ತಂದೆ ತಾಯಿಯ ಮುದ್ದಿನ ಮಗ, ಹಡೆದ ತಾಯಿಯಂತೆ ಪ್ರೀತಿಸುವ ಯಶೋಧಮ್ಮಳನ್ನು ಗ ತುಂಬಾ ಗೌರವಿಸುತ್ತಿದ್ದನು.
ನಮ್ಮ ಕರ್ಮಕ್ಕೆ ತಕ್ಕ ಫಲ ಸಿಗುತ್ತದೆ ಎನ್ನುವ ಉಪದೇಶ ನೀಡುವ ಕೃಷ್ಣ ಪರಮಾತ್ಮ “ಒಳ್ಳೆಯ ಕಾರ್ಯಕ್ಕೆ ಪ್ರಯತ್ನ ಹೆಚ್ಚಿದಾಗ, ಕಾರ್ಯ ಸಫಲವಾಗುತ್ತೆ ” ಎನ್ನುವ ಶ್ರೀಕೃಷ್ಣನ ಉಪದೇಶ ನಿಜಕ್ಕೂ ಸತ್ಯ.ನೀನು ಕುಚೇಲನಾಗಿದ್ದರೆ ಶ್ರೀಕೃಷ್ಣನಂತಹ ಗೆಳೆಯನನ್ನು ಹುಡುಕು
ನೀನು ಪ್ರೇಮಿಯಾಗುವ ಬಯಕೆ ಇದ್ದರೆ ರಾಧೆಯನ್ನು ಹುಡುಕು, ನೀನು ಅಮ್ಮನಾಗುವ ಬಯಕೆ ಇದ್ದರೆ ಶ್ರೀಕೃಷ್ಣನನ್ನು ಮುದ್ದಿಸುವ ಯಶೋಧಮಯ್ಯ ಆಗು
ನೀನು ಸಮಾಜ ಸೇವಕ ಜಗದೊದ್ಧಾರಕ ಆಗಬೇಕಾದರೆ ಶ್ರೀಕೃಷ್ಣನಂತಹ ಸಾರಥಿಯಾಗು
ನೀನು ಅನ್ಯಾಯದ ವಿರುದ್ಧ ಹೋರಾಡಬೇಕಾದರೆ ಕಂಸನ್ನನ್ನು ಸಂಹರಿಸು. ಜೈ ಶ್ರೀಕೃಷ್ಣ
ನಂದಿನಿ ಸುರೇಂದ್ರ ಸನಬಾಳ್
ಶಿಕ್ಷಕಿ, ಕಲಬುರಗಿ.