spot_img
spot_img

ಭಕ್ತರ ಕೋರಿಕೆ ಈಡೇರಿಸುವ ಶ್ರೀ ಲಕ್ಷ್ಮಿ

Must Read

ಧರ್ಮಟ್ಟಿ (ತಾ:ಮೂಡಲಗಿ) : ಈ ಭಾಗದಲ್ಲಿ ಧರ್ಮಟ್ಟಿ ಲಕ್ಷ್ಮೀದೇವಿ ದೇವಸ್ಥಾನವು ಸಕಲ ಭಕ್ತರ ಕೋರಿಕೆಯನ್ನು ಈಡೇರಿಸುವ ಶಕ್ತಿ ದೇವಿ ಎಂದು ಕೆಎಂಎಫ್ ಅಧ್ಯಕ್ಷ, ಮಾಜಿ ಸಚಿವ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.

ಮೂಡಲಗಿ ತಾಲೂಕಿನ ಧರ್ಮಟ್ಟಿ ಗ್ರಾಮದ ಐತಿಹಾಸಿಕ ಲಕ್ಷ್ಮೀದೇವಿಯ ದರ್ಶನ ಪಡೆದು ಮಾತನಾಡಿದ ಅವರು, ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದಾಗಿನಿಂದ ಈ ದೇವಿಯ ದರ್ಶನ ಪಡೆಯುತ್ತ ನಾನು ಕೃತಾರ್ಥನಾಗಿದ್ದೇನೆ ಎಂದು ಅವರು ತಿಳಿಸಿದರು.

ಗ್ರಾಮದ ಕುಂಬಾರ ಓಣಿಯಲ್ಲಿರುವ ಸಿದ್ಧಾರೂಢ ಮಠದ ಜೀರ್ಣೋದ್ಧಾರ ಹಾಗೂ ಎಸ್‍ಸಿ ಕಾಲನಿಯಲ್ಲಿರುವ ದುರ್ಗಾದೇವಿ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ತಲಾ 10 ಲಕ್ಷ ರೂ.ಗಳನ್ನು ನೀಡುವುದಾಗಿ ವಾಗ್ದಾನ ಮಾಡಿದ ಅವರು, ಗ್ರಾಮಸ್ಥರ ಒಗ್ಗಟ್ಟಿನಿಂದ ಗ್ರಾಮವು ಅಭಿವೃದ್ಧಿಯಾಗುತ್ತಿದ್ದು, ಪರಸ್ಪರ ಸಹಕಾರ ಹಾಗೂ ಒಗ್ಗಟ್ಟಿನಿಂದ ಮಾತ್ರ ಗ್ರಾಮಾಭಿವೃದ್ಧಿ ಸಾಧ್ಯವೆಂದು ಅವರು ಹೇಳಿದರು.

ಪ್ರಭಾಶುಗರ ನಿರ್ದೇಶಕ ಶಿದ್ಲಿಂಗಪ್ಪ ಕಂಬಳಿ, ಹಳ್ಳೂರ ಗ್ರಾಮದ ಮುಖಂಡ ಹನಮಂತ ತೇರದಾಳ, ತಾಪಂ ಮಾಜಿ ಸದಸ್ಯ ಬಿ.ಬಿ. ಪೂಜೇರಿ, ಧರ್ಮಟ್ಟಿ ಗ್ರಾಪಂ ಅಧ್ಯಕ್ಷೆ ಮಕ್ತುಮಾ ಜಾತಗಾರ, ಉಪಾಧ್ಯಕ್ಷ ಕೆಂಚಪ್ಪ ತಿಗಡಿ, ಪ್ರಮುಖರಾದ ಪರಶುರಾಮ ಸನದಿ, ಶ್ರೀಕಾಂತ ಮುತಾಲಿಕದೇಸಾಯಿ, ಉದ್ದಪ್ಪ ಬಬಲಿ, ಮಹಾದೇವ ಬಡ್ಡಿ, ಲಕ್ಷ್ಮಣ ತೆಳಗಡೆ, ಲಗಮಣ್ಣಾ ಕುಟ್ರಿ, ಲಕ್ಕಪ್ಪ ತೆಳಗಡೆ, ಷಣ್ಮುಕಪ್ಪ ಕುಂಬಾರ, ಶಿವರುದ್ರಪ್ಪ ಕುಂಬಾರ, ಲಕ್ಷ್ಮಣ ಕುಂಬಾರ, ಮಲ್ಲಿಕಾರ್ಜುನ ಕುಂಬಾರ, ಬಸಪ್ಪ ಕುಂಬಾರ, ಮಹಾದೇವ ಕುಂಬಾರ, ಮಂಜುನಾಥ ಕುಂಬಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಸುಣಧೋಳಿ ಮಹಿಳಾ ಕ್ರೆಡಿಟ್ ಸೌಹಾರ್ದಗೆ ೭೬.೦೭ ಲಕ್ಷ ರೂ ಲಾಭ

ಮೂಡಲಗಿ: ಸುಣಧೋಳಿ ಮಹಿಳಾ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ೨೦೨೩ರ ಮಾರ್ಚ ಅಂತ್ಯಕ್ಕೆ ರೂ.೭೬.೦೭ ಲಕ್ಷ ಲಾಭವನ್ನು ಗಳಿಸಿ ಪ್ರಗತಿಯಲ್ಲಿ  ಸಾಗುತ್ತಿದೆ ಎಂದು ಸಹಕಾರಿಯ ಅಧ್ಯಕ್ಷೆ...
- Advertisement -

More Articles Like This

- Advertisement -
close
error: Content is protected !!