ಬೀದರ್‌ನಲ್ಲಿ ರಾಮನವಮಿ ಉತ್ಸವ ಹಿನ್ನೆಲೆ ಭವ್ಯ ಶೋಭಾಯಾತ್ರೆ

0
60

ಬೀದರ – ಶ್ರೀ ರಾಮ ನವಮಿಯ ಹಿನ್ನೆಲೆಯಲ್ಲಿ ಬೀದರ ನಗರದಲ್ಲಿ ರಾಮ ಭಕ್ತರಿಂದ ಬೃಹತ್ ಶೋಭಾಯಾತ್ರೆ ನಡೆಯಿತು.

ಕಾಂಗ್ರೆಸ್ ಸಂಸದ ಸಾಗರ ಖಂಡ್ರೆ ಹಾಗು ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಕೇಸರಿ ಧ್ವಜ ಹಿಡಿದು ರಾಮನ ಹಾಡಿಗೆ ಸಂಭ್ರಮದಿಂದ ಸ್ಟೆಪ್ ಹಾಕಿದರು.

ನಗರದ ಕೆಇಬಿ ಹನುಮಾನ್ ಮಂದಿರದಲ್ಲಿ ರಾಮನ ಭಾವಚಿತ್ರಕ್ಕೆ ಪೂಜೆ ನೆರವೇರಿದ ನಂತರ ಭವ್ಯ ಮೆರವಣಿಗೆ ಆರಂಭವಾಗಿ ಹನುಮಾನ್ ಮಂದಿರದಿಂದ ಹರಳಯ್ಯ ಚೌಕ, ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಓಲ್ಡ್ ಸಿಟಿಯಲ್ಲಿರುವ ರಾಮಮಂದಿರದವರೆಗೆ ನಡೆಯಿತು.

ಮೆರವಣಿಗೆಯಲ್ಲಿ ಮಾಜಿ ವಿಧಾನಪರಿಷತ್ ಸದಸ್ಯ ರಘು‌ನಾಥ್‌ರಾವ್ ಮಲ್ಕಾಪುರೆ, ಸೊಮಶೇಖರ ಪಾಟೀಲ್ ಚಿದ್ರಿ ಸೇರಿದಂತೆ ಹಿಂದೂ ಮುಖಂಡರು ಕಾರ್ಯಕರ್ತರು, ರಾಮಭಕ್ತರು ಭಾಗಿಯಾಗಿ ಸಂಭ್ರಮಪಟ್ಟರು.

ವರದಿ : ನಂದಕುಮಾರ ಕರಂಜೆ, ಬೀದರ

LEAVE A REPLY

Please enter your comment!
Please enter your name here