spot_img
spot_img

ಶ್ರೀ ಸಿದ್ಧರಾಮ ಶಿವಯೋಗಿಗಳು

Must Read

- Advertisement -

ಸಿದ್ಧರಾಮ ಶಿವಯೋಗಿಗಳು 12 ನೆಯ ಶತಮಾನದ
ಸೊನ್ನಲಿಗೆಯಲ್ಲಿದ್ದ ಪ್ರಸಿದ್ದ ವಚನಕಾರರು. ಅವರ ಅಂಕಿತನಾಮ ” ಕಪಿಲಸಿದ್ಧ ಮಲ್ಲಿಕಾರ್ಜುನ “. ಇವರ ಜೀವನಚರಿತ್ರೆಗೆ ಸಂಬಂಧಿಸಿದ ಅನೇಕ ಆಧಾರಗಳು ವಚನ, ಕಾವ್ಯ, ಶಾಸನ, ಐತಿಹ್ಯಗಳಲ್ಲಿ ದೊರೆಯುತ್ತವೆ. ಅವರ ತಂದೆ ಮುದ್ದುಗೌಡ, ತಾಯಿ ಸುಗ್ಗಲೆ. ರೇವಣಸಿದ್ಧರ ವರದಿಂದ ಸಿದ್ದರಾಮರ ಜನನವಾಯಿತು. ಅನಂತರ ನಾಥಸಿದ್ಧ ಪರಂಪರೆಯಿಂದ ಸಿದ್ಧರಾಮರೆಂದು ಪ್ರಸಿದ್ದರಾದರು. ಬಾಲ್ಯದಲ್ಲಿ ಮುಗ್ದಭಕ್ತರಾಗಿದ್ದರು. ಶ್ರೀಶೈಲಕ್ಕೆ ಹೋಗಿ ಮಲ್ಲಿಕಾರ್ಜುನನ ದರ್ಶನ ಪಡೆದರು ಎಂದು ಹೇಳುತ್ತಾ ಮಧ್ಯ ಮಧ್ಯ ಅವರ ವಚನಗಳನ್ನು ಉಲ್ಲೇಖಿಸುತ್ತಾ ಡಾ. ಗುರುಲಿಂಗ ದಬಾಲೆಯವರು ಸಿದ್ದರಾಮರನ್ನು ಸ್ಮರಿಸಿದರು.

ವಚನ ಅಧ್ಯಯನ ವೇದಿಕೆ, ಬಸವಾದಿ ಶರಣರ ಚಿಂತನಕೂಟ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ಶರಣೆ ಸುಧಾ ಪಾಟೀಲ ಅವರ ತಂದೆಯವರಾದ ಲಿಂ. ಶರಣ ಬಿ. ಎಂ. ಪಾಟೀಲ ಮತ್ತು ತಾಯಿಯವರಾದ ಲಿಂ. ಶರಣೆ ಅಕ್ಕಮಹಾದೇವಿ ಪಾಟೀಲ ಅವರ ಸ್ಮರಣಾರ್ಥ ನಡೆದ ಶ್ರಾವಣ ಮಾಸದ ದತ್ತಿ ಉಪನ್ಯಾಸದ 26 ನೆಯ ದಿವಸ ಅವರು ಮಾತನಾಡಿದರು.

ನಂತರ ಸಿದ್ದರಾಮರು ಸೊನ್ನಲಿಗೆಯ ಉದ್ಧಾರದ ಚಿಂತೆಯಲ್ಲಿ ತೊಡಗುತ್ತಾರೆ. ಮಲ್ಲಯ್ಯನ ಗುಡಿ ಕಟ್ಟಿಸುತ್ತಾರೆ
ಅಲ್ಲಿಯ ಗೌಡತಿ ಔದಾರ್ಯ ಸ್ತ್ರೀಯಾದ ಚಾಮಲಾದೇವಿ ದಾನವಾಗಿ ಕೊಟ್ಟ ಭೂಮಿಯಲ್ಲಿ ಕೆರೆ ಕಟ್ಟಿಸುತ್ತಾರೆ. ಅದು ದೇಶದ ಎರಡನೆಯ ದೊಡ್ಡ ಕೆರೆ ಎಂದು ಪ್ರಸಿದ್ದವಾಗಿದೆ, ಎಂದು ಹೇಳುತ್ತಾ ,ಕೆರೆಯನ್ನು ನಿರ್ಮಾಣ ಮಾಡುವಾಗ, ರಾಜರು, ಅಧಿಕಾರಿಗಳು, ಸಾಮಾನ್ಯರು, ಮಹಿಳೆಯರು ಎಲ್ಲರೂ ಗುದ್ದಲಿ, ಸಲಿಕೆ ಹಿಡಿದು ಮಣ್ಣು ಅಗೆಯಲು ಸ್ವಯಂಪ್ರೇರಿತರಾಗಿ ಬಂದ ದ್ದನ್ನು ಅಭಿಮಾನದಿoದ ಹೇಳಿದರು.

- Advertisement -

ಸಿದ್ಧರಾಮರ ಬಗೆಗೆ ಡೊಳ್ಳಿನ ಪದ, ಲಾವಣಿ, ಆರತಿ ಹಾಡುಗಳು, ಹೀಗೆ ಜಾನಪದದ ಪ್ರತಿಯೊಂದು ಪ್ರಕಾರದಲ್ಲಿ ಅವರ ಮಹಿಮೆ ಕಾಣಲು ಸಿಗುತ್ತದೆ, ಎಂದು ಹೇಳುತ್ತಾ ಸಿದ್ಧರಾಮರು ಅರವಟ್ಟಿಗೆ, ಅನ್ನಛತ್ರ, ಗೋಶಾಲೆ, ಭೂದಾನ, ಗೋದಾನ, ಉದ್ಯಾನ,ಸಾಮೂಹಿಕ ವಿವಾಹ ದಾನಧರ್ಮ,ಮುಂತಾದ ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ದೊಡ್ಡದಾದ ಸಾಮಾಜಿಕ ಚಳವಳಿ ಮಾಡಿದ ಶ್ರೇಯ ಸಿದ್ಧರಾಮರಿಗೆ ಸಲ್ಲುತ್ತದೆ ಎಂದು ಹಂಚಿಕೊಂಡರು.

ನಂತರ ಅಲ್ಲಮಪ್ರಭುಗಳು ಸೊಲ್ಲಾಪುರಕ್ಕೆ ಬಂದಾಗ ಇಬ್ಬರ ಭೆಟ್ಟಿ, ವಾದ -ವಿವಾದಗಳು, ಆಮೇಲೆ ಅವರ ಜೊತೆಗೆ ಅನುಭವ ಮಂಟಪಕ್ಕೆ ಹೋಗಿದ್ದು, ಚೆನ್ನಬಸವಣ್ಣನವರಿಂದ ಲಿಂಗ ದೀಕ್ಷೆ ಪಡೆದದ್ದು, ಶೂನ್ಯ ಸಿಂಹಾ ಸನದ ಅಧ್ಯಕ್ಷರಾಗಿದ್ದನ್ನು ಹೇಳುತ್ತಾ, ಸೊಲ್ಲಾಪುರವು ಧಾರ್ಮಿಕ ಕೇಂದ್ರವಾಗಿ, ಸಾಂಸ್ಕೃತಿಕ ನಗರಿಯಾಗಿ ಬೆಳೆಯಿತು, ವೀರವೈರಾಗ್ಯನಿಧಿ, ಜಂಗಮಜ್ಞಾನಿ, ಲಿಂಗಾಯತ ಧರ್ಮದ ಅನುಭಾವಿ, ಕ್ರಿಯಾ ಜ್ಞಾನಿಯಾದ ಸಿದ್ದರಾಮರ ಬಗೆಗೆ ಮೂವತ್ತಕ್ಕಿಂತ ಹೆಚ್ಚು ಕಾವ್ಯಗಳಲ್ಲಿ ಪ್ರಸ್ತಾಪವಾಗಿದೆ.ಎಂದು ಹೇಳುತ್ತಾ ತಮ್ಮ ಉಪನ್ಯಾಸ ಮುಗಿಸಿದರು.

ಪ್ರೊ. ಬಿ. ಅರ್. ಪೊಲೀಸ ಪಾಟೀಲ ಅವರು ಸಿದ್ಧರಾಮ ಶಿವಯೋಗಿಗಳು ಮೂಢನಂಬಿಕೆಯನ್ನು ಒಪ್ಪಲಿಲ್ಲ, ಅವರು ಕರ್ಮಯೋಗಿಯಾಗಿದ್ದರು, ಅವರ ಯೋಗದಿಂದ ಹೊರಹೊಮ್ಮಿದ ವಚನಗಳು ಹೆಚ್ಚು ಪರಿಣಾಮಕಾರಿಯಾಗಿವೆ ಮತ್ತು ಉಪಯುಕ್ತವಾಗಿವೆ ಎಂದು ಹೇಳುತ್ತಾ, ಸಂಯಮ ಅಂದರೆ ಸಿದ್ಧರಾಮ ಶ್ರೀಗಳು ಎನ್ನುವುದನ್ನು ಒತ್ತಿ ಹೇಳಿದರು. ಅದು ಅವರ ಗಟ್ಟಿಯಾದ ಯೋಗತತ್ವದಿಂದ ಒಲಿದಿತ್ತು. ಈಗ ಸಧ್ಯ ವಚನ ಅಧ್ಯಯನ ವೇದಿಕೆ ಆ ನಿಟ್ಟಿನಲ್ಲಿ ಎಲ್ಲ ಶರಣೆಯರಿಗೆ ಉಪನ್ಯಾಸ ಕೊಡಲು, ವಚನಗಳ ಅಧ್ಯಯನ ಮಾಡಲು ಕಲಿಸುತ್ತಿರುವುದು ಡಾ. ಶಶಿಕಾಂತ ಪಟ್ಟಣ ನೇತೃತ್ವದಲ್ಲಿ ನಡೆಯುತ್ತಿರುವ ಅತ್ಯಂತ ಶ್ಲಾಘನೀಯ ಕಾರ್ಯ
ಎಂದು ನಮ್ಮ ವೇದಿಕೆಯ ಬಗೆಗೆ ಮೆಚ್ಚುಗೆಯ ಮಾತುಗಳನ್ನು ತಮ್ಮ ಮಾರ್ಗದರ್ಶನದ ನುಡಿಗಳಲ್ಲಿ ನಮ್ಮೆಲ್ಲರ ಜೊತೆಗೆ ಹಂಚಿಕೊಂಡರು. ಈ ಸಂದರ್ಭದಲ್ಲಿ ಡಾ. ಶಶಿಕಾಂತ ಪಟ್ಟಣ ಸರ್ ಅವರು ಉಪಸ್ಥಿತರಿದ್ದರು.

- Advertisement -

ಪೂಜಾ ಹಿರೇಮಠ ಅವರ ವಚನ ಪ್ರಾರ್ಥನೆ, ಡಾ. ಗೀತಾ ಡಿಗ್ಗೆ ಅವರ ಸ್ವಾಗತ -ಪ್ರಾಸ್ತಾವಿಕ-ಪರಿಚಯ, ತ್ರಿವೇಣಿ ವಾರದ ಅವರ ಶರಣು ಸಮರ್ಪಣೆ, ಸವಿತಾ ಕುಂಬಾರಿ ಅವರ ವಚನ ಮಂಗಳದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಶರಣೆ ಜಯದೇವಿ ಯಾದಲಾಪುರೆ ಅವರು ಕಾರ್ಯಕ್ರಮ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.

ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರ
ಪುಣೆ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಶಿಕ್ಷಕರಾದ ಮೆಟ್ಯಾಲಮಠ ರವರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ

ಬೆಳಗಾವಿ:-ತಾಲೂಕಿನ ಹಿಂಡಲಗಾ ವಿಜಯನಗರ ದ ಸರಕಾರಿ ಪ್ರಾಥಮಿಕ ಮರಾಠಿ ಶಾಲೆಯ ಕ್ರಿಯಾಶೀಲ ಕನ್ನಡ ಶಿಕ್ಷಕರಾದ ರುದ್ರಯ್ಯ ಈರಯ್ಯ ಮೆಟ್ಯಾಲಮಠ ರವರಿಗೆ ತಾಲೂಕು ಆದರ್ಶ ಶಿಕ್ಷಕ ಪ್ರಶಸ್ತಿ...
- Advertisement -

More Articles Like This

- Advertisement -
close
error: Content is protected !!
Join WhatsApp Group