ಸಿಂದಗಿ; ಬಸವಣ್ಣನವರ ಅನುಭವ ಮಂಟಪದಲ್ಲಿದ್ದ ಮಹಾಶಿವರಶರಣ ವೃತ್ತಗಳನ್ನು ನಿರ್ಮಾಣ ಮಾಡುವುದರಿಂದ ಅವರ ಜೀವನ ಚರಿತ್ರೆಗಳನ್ನು ಮೆಲುಕು ಹಾಕಿದಂತಾಗುತ್ತದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಶಿವಯೋಗಿ ಸಿದ್ದರಾಮೇಶ್ವರ ೮೫೩ನೇ ಜಯಂತ್ಯುತ್ಸವದ ನಿಮಿತ್ತ ಪಟ್ಟಣದ ಜೆವರ್ಗಿ ರಸ್ತೆಯಲ್ಲಿರುವ ಮೋರಟಗಿ ನಾಕಾ ಹತ್ತಿರ ಶಿವಯೋಗಿ ಸಿದ್ದರಾಮೇಶ್ವರ ವೃತ್ತವನ್ನು ಉದ್ಘಾಟಿಸಿ ಮಾತನಾಡಿ, ಹನ್ನೆರಡನೇ ಶತಮಾನದ ಜಗಜ್ಯೋತಿ ಬಸವೇಶ್ವರರು ಹಾಗೂ ಸಿದ್ದರಾಮೇಶ್ವರರು ಕಾಯಕಯೋಗಿ ಶ್ರೇಷ್ಠ ವಚನಕಾರರಾಗಿದ್ದರು ಅಂತೆಯೆ ಎಲ್ಲ ಶರಣರು ಅವರನ್ನು ಅಪ್ಪಿಕೊಂಡಿದ್ದರು. ೧೨ ನೇ ಶತಮಾನದಲ್ಲಿನ ಸಾಮಾಜಿಕ ಕ್ರಾಂತಿಗೆ ಶಿವಯೋಗಿ ಸಿದ್ದರಾಮೇಶ್ವರರ ಸಮಾಜದಲ್ಲಿನ ಅಂಧಕಾರವನ್ನು ತೊಳೆಯಲು ವಚನಗಳನ್ನು ಮೂಲಕ ನಿವಾರಿಸಲು ಪ್ರಯತ್ನಿಸಿದ್ದಾರೆ. ಅಂತವರ ತತ್ವಾಧರ್ಶಗಳನ್ನು ನಾವೆಲ್ಲರೂ ಮೈಗೂಡಿಕೊಳ್ಳಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ, ಉಪಾದ್ಯಕ್ಷ ರಾಜಣ್ಣಿ ನಾರಾಯಣಕರ, ಮಾಜಿ ಅದ್ಯಕ್ಷ ಬಾಷಾಸಾಬ ತಾಂಬೋಳಿ, ಎಂ.ಎ.ಖತೀಬ, ದಸಂಸ ಜಿಲ್ಲಾ ಸಂಚಾಲಕ ವೈ.ಸಿ.ಮಯೂರ, ಯೋಜನಾ ಪ್ರಾಧಿಕಾರ ಸದಸ್ಯ ಅಂಬ್ರೀಶ ಚೌಗಲೆ, ಪಂಚಮಸಾಲಿ ಸಮಾಜದ ಅಧ್ಯಕ್ಷ ಎಂ.ಎಂ.ಹಂಗರಗಿ, ಲಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅದ್ಯಕ್ಷ ಅಶೋಕ ಅಲ್ಲಾಪುರ, ಮಹಾನಂದ ಬಮ್ಮಣ್ಣಿ, ಶಾಮಲಾ ಮಂದೇವಾಲಿ, ಶೈಲಜಾ ಸ್ತಾವರಮಠ, ಪ್ರತಿಭಾ ಚಳ್ಳಗಿ, ಭೋವಿ ಸಮಾಜದ ತಾಲೂಕು ಅಧ್ಯಕ್ಷ ಪಂಡಿತ ಯಂಪೂರೆ, ಪತ್ರಕರ್ತ ಆನಂದ ಶಾಬಾದಿ, ಭೋವಿ ಸಮಾಜದ ಮುಖಂಡರಾದ, ಕೊಳ್ಳಪ್ಪ ಚಾಕರೆ, ಭೀಮಾಶಂಕರ ಯಂಪೂರೆ, ದಿಲೀಪ ಆಲಕುಂಟೆ, ಬಾಲಪ್ಪ ಶಿರವಾಳ, ತಿರುಪತಿ ಬಂಡಿವಡ್ಡರ, ರವಿ ಬಂಡಿವಡ್ಡರ, ಪರಸುರಾಮ ಯಂಪೂರೆ, ರವಿ ಚಾಕರೆ, ಶಿವಾಜಿ ಗೊಳಸಾರ, ಮುತ್ತು ಆಲಕುಂಟೆ, ರಾಮು ಬಂಡಿವಡ್ಡರ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಶಿಕ್ಷಕ ಮುತ್ತಪ್ಪ ಪಾತ್ರೋಟಿ ಸ್ವಾಗತಿಸುವ ಕೊನೆಯಲ್ಲಿ ವಂದಿಸಿದರು.