ದಾಸ ವಿಜಯ ಸಮ್ಮಿಲನದಿಂದ ಶ್ರೀವಿಜಯದಾಸರ ಆರಾಧನಾ ಮಹೋತ್ಸವ

Must Read

ದಾಸ ವಿಜಯ ಸಮ್ಮಿಲನ ಮುಖಪುಟದ ಸಮೂಹವು ಲಗ್ಗೆರೆಯ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಮಠ, ಶ್ರೀ ಸತ್ಯಬೋಧ ತೀರ್ಥರು ಮತ್ತು ಶ್ರೀ ರಾಘವೇಂದ್ರ ಸ್ವಾಮಿಗಳ ವೃಂದಾವನ ಸನ್ನಿಧಾನದಲ್ಲಿ ಶ್ರೀ ವಿಜಯದಾಸರ ಆರಾಧನಾ ಮಹೋತ್ಸವವನ್ನು ಹಮ್ಮಿಕೊಂಡಿತ್ತು.

ಖ್ಯಾತ ಹರಿದಾಸ ವಿದ್ವಾಂಸರಾದ ವಿದ್ಯಾವಾಚಸ್ಪತಿ ಡಾ. ಅರಳುಮಲ್ಲಿಗೆ ಪಾರ್ಥಸಾರಥಿಯವರು ಶ್ರೀವಿಜಯದಾಸರ ಜೀವನ ಅವರ ಕೀರ್ತನೆಗಳು, ಸುಳಾದಿಗಳು, ರಚನೆಗಳು, ಅವರ ಅಪರೋಕ್ಷ ಜ್ಞಾನ, ಸಾಧನೆ ಮತ್ತು ಅವರು ಅಂಕಿತವನ್ನು ಕೊಟ್ಟು ಪೋಷಿಸಿ, ಬೆಳೆಸಿದ ಬಹಳಷ್ಟು ದಾಸರ ಬಗ್ಗೆ ಸುದೀರ್ಘ ಉಪನ್ಯಾಸ ನೀಡಿದರು.

ಮುಖ್ಯ ಅತಿಥಿಗಳಾದ ತಿರುಪತಿ ತಿರುಮಲ ದೇವಸ್ಥಾನ (ಟಿಟಿಡಿ) ಹಿಂದೂಧರ್ಮ ಪ್ರಚಾರ ಪರಿಷತ್ ಆಯೋಜಕರಾದ ಡಾ. ಪಿ ಭುಜಂಗರಾವ್ ರವರು ಮಾತನಾಡಿ ಸನಾತನ ಧರ್ಮ ಉಳಿದು ಶ್ರೀಮಂತವಾಗಿ ಬೆಳೆಯಬೇಕಾದರೆ ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು, ಮುಂದಿನ ನಮ್ಮ ಪರಂಪರೆಗೆ ಇದೇ ನಾವು ಕೊಡುವ ಅತ್ಯಮೂಲ್ಯ ಕೊಡುಗೆ ಎಂದು ತಿಳಿಸಿದರು.

ಶ್ರೀಮತಿ ಡಾ. ರಾಜಲಕ್ಷ್ಮೀ ಪಾರ್ಥಸಾರಥಿಯವರು ಮಾತನಾಡಿ ಸಂಘ, ಸಂಸ್ಥೆ, ಸಂಘಟನೆಗಳ ಶಕ್ತಿಯ ಕುರಿತಾಗಿ ತಿಳಿಸಿದರು. ಇಂದಿನ ಕಾಲಕ್ಕೆ ಇದೆಲ್ಲ ಎಷ್ಟು ಮುಖ್ಯ ಎಂಬುದನ್ನೂ ತಿಳಿಸಿದರು. ಹಯವದನ ವಿದ್ಯಾಲಯದ ಕೀರ್ತನಾ ಪ್ರವೀಣೆಯಾದ ವೇದವತಿ ರವಿಚಂದ್ರರವರು ಮಾತನಾಡಿ ಯತಿಗಳು, ದಾಸರು, ನಮ್ಮ ಪರಂಪರೆ ಹಾಗೂ ಇಂದಿನ ಮುಖಪುಟದ ಸಮೂಹಗಳ ಸಂವಹನದ ಕುರಿತಾಗಿ ಶ್ಲಾಘನೆ ವ್ಯಕ್ತಪಡಿಸಿದರು.

ಶ್ರೀ ಮಠದ ಕಾರ್ಯದರ್ಶಿ ಶ್ಯಾಮಸುಂದರ್ ರವರು ಮಾತನಾಡಿ ಇಂತಹ ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು ಸುತ್ತಮುತ್ತಲಿನ ಪರಿಸರದ ಜನರಿಗೆ ಇದರ ಮಹತ್ವ ಗೊತ್ತಾಗಬೇಕು ಎಂದು ತಿಳಿಸಿದರು. ಹಯವದನ ವಿದ್ಯಾಲಯದ ಸಂಸ್ಥಾಪಕರಾದ ಗೋಪಾಲಕೃಷ್ಣ ವರ್ಣ ಮತ್ತು ದಾಸ ವಿಜಯ ಸಮ್ಮಿಲನದ ಸಂಸ್ಥಾಪಕರಾದ ಸುಬ್ರಹ್ಮಣ್ಯ ಆಚಾರ್ಯ ಉಪಸ್ಥಿತರಿದ್ದರು.

ದಾಸ ವಿಜಯ ಸಮ್ಮಿಲನದ ಸದಸ್ಯರಿಂದ ವಿಜಯದಾಸರ ಕೀರ್ತನೆಗಳ ಗಾಯನ ಕಾರ್ಯಕ್ರಮವು ನೆರವೇರಿತು. ಗಾಯನ ಕಾರ್ಯಕ್ರಮವನ್ನು ಕುಮಾರಿ ಹೆಚ್. ಎಸ್. ಶ್ರೀ ಗೌರಿ ಆಚಾರ್ಯ ಮತ್ತು ಕುಮಾರಿ ಎಚ್.ಎಸ್. ಶ್ರೀನಿಧಿ ಆಚಾರ್ಯ ನಡೆಸಿಕೊಟ್ಟರು. ರಾಧಾ ಕೇಶವ ಹೆಬ್ಬಾರ ನಿರೂಪಣೆಯಲ್ಲಿ ಕಾರ್ಯಕ್ರಮ ಅಚ್ಚುಕಟ್ಟಾಗಿ ಮೂಡಿಬಂದಿತು.

ದಾಸ ವಿಜಯ ಸಮ್ಮಿಲನದ ಅಡ್ಮಿನ್ ಪದ್ಮಾ ಎಸ್ ಆಚಾರ್ಯ ವಂದನಾರ್ಪಣೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಭಜನೆ ಹಾಡುಗಳು ಪುಸ್ತಕಕ್ಕೆ ಸಹಕರಿಸಿದವರಿಗೆ ಗೌರವ ಸಮರ್ಪಣೆಯ ಕಾರ್ಯಕ್ರಮವನ್ನು ನಡೆಸಲಾಯಿತು. ಮುಖಪುಟದ ಮತ್ತೊಂದು ಸಮೂಹವಾದ ದಾಸನಮನದ ದೀಪಾವಳಿ ಸ್ಪರ್ಧೆ ವಿಜೇತರಿಗೆ ಬಹುಮಾನವನ್ನು ಸಹ ನೀಡಲಾಯಿತು.

LEAVE A REPLY

Please enter your comment!
Please enter your name here

Latest News

ವಿದ್ಯಾರ್ಥಿಗಳು ತಂತ್ರಜ್ಞಾನದಿಂದಾಗಿ ದಾರಿ ತಪ್ಪಬಾರದು – ಲಕ್ಷ್ಮಿ ಸಾಲೊಡಗಿ

ಸಿಂದಗಿ - ಇಂದಿನ ಯುವ ಜನಾಂಗ ಮೊಬೈಲ್ ಅವಲಂಬಿತ ಜಗತ್ತಿನಲ್ಲಿದೆ. ಎಲ್ಲವೂ ಅಂಗೈನಲ್ಲಿಯೇ ಹಿಡಿದಿಟ್ಟುಕೊಳ್ಳುವ ಮನೋಭಾವದ ವಯಸ್ಸಿನ ಹದಿ ಹರೆಯದವರು ತಂತ್ರಜ್ಞಾನಗಳ ಪ್ರಭಾವಕ್ಕೆ ಒಳಗಾಗಿ ಹಾದಿ...

More Articles Like This

error: Content is protected !!
Join WhatsApp Group