spot_img
spot_img

ಹರಿದಾಸ ಮಿಲನ ಮತ್ತು ದಾಸೋಪಾಸನ, ಚಿಪ್ಪಗಿರಿ ತಪೋನಿಧಿ ಶ್ರೀ ವಿಜಯದಾಸರ ಸೇವಾ ಬಳಗದ ಮೂರನೇ ವಾರ್ಷಿಕೋತ್ಸವ

Must Read

- Advertisement -

ಬೆಂಗಳೂರು – ಇದೆ ಮೇ ೨೬ ಭಾನುವಾರ, ಪೇಜಾವರ ವಿದ್ಯಾಪೀಠ, ಕತ್ರಿಗುಪ್ಪೆ. ಪರಮಪೂಜ್ಯ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರ,ದಿವ್ಯ ಉಪಸ್ಥಿತಿಯಲ್ಲಿ ಪೇಜಾವರ ಶ್ರೀ ಅಧೋಕ್ಷಜ ಮಠ, ಉಡುಪಿ ಹಾಗೂ ಮುಖ್ಯ ಅತಿಥಿಗಳಾದ ವಿದ್ವಾನ್ ಡಾ|| ಸತ್ಯಧ್ಯಾನಾಚಾರ್ಯ ಕಟ್ಟಿ ಸಮಕ್ಷಮದಲ್ಲಿ ಹರಿದಾಸ ಮಿಲನ. ಮತ್ತು ದಾಸೋಪಾಸನ ಶ್ರೀ ವಿಜಯದಾಸರ ಸೇವಾ ಬಳಗದ ಮೂರನೇ ವಾರ್ಷಿಕೋತ್ಸವ ವಿಜೃಂಭಣೆಯಿಂದ ನಡೆಯಿತು

ಸಮೂಹದಲ್ಲಿ “ನಿತ್ಯ ಗಾಯನ ಸೇವೆ”, ವಾರದ ನೇರ ಪ್ರಸಾರ ಗಾಯನ ಸೇವೆ, ವಿಶೇಷ ದಾಸರ ಮತ್ತು ಯತಿಗಳ “ಗಾಯನ ಸ್ಪರ್ಧೆ”, ತಿಂಗಳಿಗೆ ಎರಡು ಬಾರಿ “ಪಟ್ ಅಂತ ಹೇಳ್ರಿ” ಇನ್ನು ವಿಶೇಷವಾಗಿ ಶ್ರಾವಣಮಾಸದಲ್ಲಿ “ಶ್ರಾವಣೀಯ ಶ್ರಾವಣೋಪಾಸನೆ”, ಪಕ್ಷಮಾಸದಲ್ಲಿ ಪಿತೃಗಳ ಚಿಂತನೆ, ಹಲವಾರು ವೈವಿದ್ಯಮಯ ಸ್ಪರ್ಧೆ, ಚಿಂತನೆ ನಡೆಸುತ್ತಾ ಒಟ್ಟಾರೆ ೧೧ಪ್ರಶಸ್ತಿಗಳನ್ನು ಪ್ರದಾನ  ಮಾಡಲಾಯಿತು.

ಶ್ರೀ ಚಿದಾನಂದ ಕುಲಕರ್ಣಿ ಅವರ “ಪುಣ್ಯಕೋಟಿ ” ರೂಪಕ ಅವರ ತನ್ಮಯತೆಯ ಏಕಪಾತ್ರಾಭಿನಯ
ಎಲ್ಲರ ಮನಸೂರೆಗೊಂಡಿತು. ವಿಶೇಷ ಚೇತನಳಾದ ಕುಮಾರಿ ವೈಭವಿ ಕುಲಕರ್ಣಿ ಇವಳ ಭರತ ನಾಟ್ಯ ಎಲ್ಲರ ಪ್ರೀತಿಗೆ ಪಾತ್ರವಾಯಿತು.

- Advertisement -

ಪ್ರಾಂಶುಪಾಲರು, ಶ್ರೀ ಜಯತೀರ್ಥ ವಿದ್ಯಾಪೀಠ, ಬೆಂಗಳೂರು. ಡಾ|| ಹೆಚ್. ಸತ್ಯನಾರಾಯಣಾಚಾರ್ಯ, ಪ್ರಾಂಶುಪಾಲರು, ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠ, ಬೆಂಗಳೂರು. ಅತಿಥಿಗಳು :ಹೆಚ್.ವಿ.ಗೌತಮ ಶ್ರೀ ವಿ.ಕೆ. ಹರಿದಾಸ ಬೆಳಗ್ಗೆ ೮ ಗಂಟೆಗೆ ಶೋಭಾಯಾತ್ರೆ ಯಿಂದ ಪ್ರಾರಂಭವಾಗಿ ಶ್ರೀಗಳ ಅನುಗ್ರಹ ಸಂದೇಶ, ಪ್ರಶಸ್ತಿ ಪ್ರದಾನ, ಪ್ರವಚನ, ಭರತ ನಾಟ್ಯ, ಸಂಗೀತ ಸೇವೆ ವಿವಿಧ ಕಾರ್ಯಕ್ರಮ ನಡೆಯಿತು.

ಶ್ರೀಪಾದಂಗಳವರು ಇಂದಿನ ಯುವಜನೆತೆಯಲ್ಲಿ ವ್ಯಾಸದಾಸ ಸಾಹಿತ್ಯದ ಅರಿವು ಬರಬೇಕು. ಸಮೂಹದಲ್ಲಿ ಯುವಕರು ಭಾಗವಹಿಸುವಂತೆ ಮಾಡಿ ಎಂದು ಕಿವಿಮಾತು ಹೇಳಿದರು.

ಪಂಡಿತರಾದ ಶ್ರೀ ಸತ್ಯಧ್ಯಾನ ಆಚಾರ್ಯ ಕಟ್ಟಿ ಇವರು ವ್ಯಾಸ ಸಾಹಿತ್ಯದ ಸರಳ ರೂಪವೇ ದಾಸ ಸಾಹಿತ್ಯ ಎಂದು ದಾಸ ಸಾಹಿತ್ಯದ ಸಮಗ್ರ ಸರಳ ರೂಪ ತಿಳಿಸಿದರು. ಪಂಡಿತ ಡಾ /ಸತ್ಯನಾರಾಯಣಾಚಾರ್ಯರು ಶ್ರೀ ವಿಜಯ ದಾಸರ ಕೃತಿಗಳ ಸುಳಾದಿಗಳ ವೈಶಿಷ್ಟತೆಯ ಬಗ್ಗೆ ಉಪನ್ಯಾಸ ನೀಡಿದರು.

- Advertisement -

ಶ್ರೀ ಶ್ರೀಪಾದ ಸಿಂಗನಮಲ್ಲಿ, ಪಂಡಿತ ಶ್ರೀ ಪದ್ಮನಾಭ ವರಖೇಡಿ, ಶ್ರೀ ಸುರೇಶ ಕಲ್ಲೂರ, ಡಾ ಶ್ರೀ ಆರ್. ಪಿ. ಕುಲಕರ್ಣಿ, ಶ್ರೀಮತಿ ರಾಧಿಕಾ ಜೋಶಿ, ಹಾಗೂ ಪ್ರಿಯಾ ಪ್ರಾಣೇಶ ಹರಿದಾಸ ಹೀಗೆ ಸಮೂಹದ ಎಲ್ಲ ಕಾರ್ಯನಿರ್ವಾಹಕರು, ಸದಸ್ಯರ ಉಪಸ್ಥಿತಿಯಲ್ಲಿ ಸಾಂಗೋಪವಾಗಿ ನೆರವೇರಿತು.

- Advertisement -
- Advertisement -

Latest News

ವೇದವ್ಯಾಸರ ಸ್ಮರಣಾರ್ಥ ಗುರು ಪೂರ್ಣಿಮಾ

ಗುರುಪೂರ್ಣಿಮಾ ವಿಶೇಷ ಅರಿವಿಗೆ ಅನಂತ ಶಯನನಾಗಿ ಜ್ಞಾನ ಜ್ಯೋತಿ ಬೆಳಗುತ್ತಿರುವ ಗುರಿತೋರುವ ನೇತಾರ ಬದುಕು ಭವಿಷ್ಯದ ಹಾದಿಯ ದಿಟ್ಟ ಹೆಜ್ಜೆಯಿಡಲು ಗುರಿ ತೋರುವ ದೈವದ ಗುರಿಕಾರ ಜ್ಞಾನದ ತೃಷೆಯನ್ನು ತಣಿಸಿದ ಬದುಕನ್ನು ಹದಗೊಳಿಸುವ ಗುರುಬಲದ ಶಿಲ್ಪಿಗಾರ ಸಕಲ ಜ್ಞಾನವಾಹಿನಿ ಜಾಗೃತಿ ಜಗಕೆ...
- Advertisement -

More Articles Like This

- Advertisement -
close
error: Content is protected !!
Join WhatsApp Group