spot_img
spot_img

ಸಾಂಸ್ಕೃತಿಕ ಪರಂಪರೆಯನ್ನು ಪ್ರತಿನಿಧಿಸುವ ಶ್ರೀ ವಿವೇಕಾನಂದ ಕಲಾ ಕೇಂದ್ರ ಸುವರ್ಣ ಸಂವತ್ಸರದತ್ತ

Must Read

- Advertisement -

ವಿಶ್ವವಿಜೇತ ಸ್ವಾಮಿ ವಿವೇಕಾನಂದರ ರಾಷ್ಟ್ರ ಜಾಗೃತಿ ಹಾಗೂ ಸಂಸ್ಕೃತಿ ಜಾಗೃತಿಗಳ ಸಂದೇಶಗಳನ್ನು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ರಾಷ್ಟ್ರವ್ಯಾಪಿ ಸಂಚರಿಸಿ, ಪಸರಿಸುತ್ತಿರುವುದು ಶ್ರೀ ವಿವೇಕಾನಂದ ಕಲಾ ಕೇಂದ್ರದ ಹೆಗ್ಗಳಿಕೆ. ಒಂದು ಕಲಾಸಂಸ್ಥೆಯನ್ನು ಕಟ್ಟುವುದು, ಮುನ್ನಡೆಸುವುದು, ಸುಲಭದ ಮಾತಲ್ಲ. ಕಳೆದ 50 ವರ್ಷಗಳಿಂದ ಅಹಿರ್ನಿಶಿ ಭಾರತದ ಸಾಂಸ್ಕೃತಿಕ ಪರಂಪರೆಯ ಮಹತ್ವವನ್ನು ಜನಮಾನಸದಲ್ಲಿ ಮೂಡಿಸುವ ನಿಟ್ಟಿನಲ್ಲಿ ಇಡೀ ಕುಟುಂಬವನ್ನು ತೊಡಗಿಸಿಕೊಂಡಿರುವುದು ಶ್ಲಾಘನೀಯ. ಸಾಹಿತ್ಯ, ಸಂಗೀತ, ನೃತ್ಯ, ನಾಟಕ, ಯೋಗ, ಸಮಾಜಸೇವೆ, ಪರಿಸರ ಸಂರಕ್ಷಣೆ, ರಾಷ್ಟ್ರಭಕ್ತಿ, ಸಂಸ್ಕೃತಿ ಜಾಗೃತಿಯ ಏಳಿಗೆಗಾಗಿ ಹಲವಾರು ಮೌಲ್ಯಾಧಾರಿತ ಯೋಜನೆಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿರುವುದು ಶ್ರೀ ವಿವೇಕಾನಂದ ಕಲಾಕೇಂದ್ರದವರ ನಿಸ್ಪೃಹ ಹಾಗೂ ನಿಸ್ವಾರ್ಥಸೇವೆಯ ದ್ಯೋತಕವೆಂದು ಕರ್ನಾಟಕ ನೀರಾವರಿ ಇಲಾಖೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಶಂಕರ್ ಅವರು ಕಲಾಕೇಂದ್ರದ ಸಂಸ್ಥಾಪಕರಾದ ಡಾ. ವಿ.ನಾಗರಾಜ್, ಶ್ರೀಮತಿ ಎಂ.ಕೆ.ಜಯಶ್ರೀ, ಡಾ. ಶ್ವೇತಾ ಹಾಗೂ ಕಲಾಕೇಂದ್ರದ ಕುಡಿ ಮಾ. ದೈವಿಕ ಅವರ ಪರಿಶ್ರಮವನ್ನು ಅಭಿನಂದಿಸಿದರು.

ಕಳೆದ 50 ಸಂವತ್ಸರಗಳಿಂದ ವಿದ್ಯಾಪೀಠದಲ್ಲಿ ಹಾಗೂ ತ್ಯಾಗರಾಜನಗರ ಬಡಾವಣೆಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರ ಜೊತೆಗೆ, ಸಹಸ್ರಾರು ಬಾಲ ಹಾಗೂ ಯುವಕಲಾವಿದರುಗಳಿಗೂ ಹಲವಾರು ರಾಜ್ಯಮಟ್ಟ, ರಾಷ್ಟ್ರಮಟ್ಟ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಉತ್ಸವಗಳಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸುತ್ತಿರುವುದು ಈ ಸಂಸ್ಥೆಯ ವಿಶೇಷತೆ. ಹಳ್ಳಿಯಿಂದ ದಿಲ್ಲಿಯವರೆಗೆ’ ಎಂಬಂತೆ ರಾಷ್ಟ್ರಾದ್ಯಂತ ಸಂಚರಿಸಿ ಸಂಸ್ಕೃತಿ ಜಾಗೃತಿ ಹಾಗೂ ರಾಷ್ಟ್ರಜಾಗೃತಿಗಳನ್ನು ಮೂಡಿಸುತ್ತಿರುವುದು ಈ ಕಲಾಕುಟುಂಬದ ಸಾಮಾಜಿಕ ಕಳಕಳಿಗೆ ಸಾಕ್ಷಿಯಾಗಿದೆಯೆಂದು ಶ್ರೀಕೃಷ್ಣ ವಿದ್ಯಾಸಂಸ್ಥೆಯ ಸಂಸ್ಥಾಪಕರಾದ ಡಾ. ರುಕ್ಮಾಂಗದನಾಯ್ಡುರವರು ಮೆಚ್ಚುಗೆ ಸೂಚಿಸಿದರು.

- Advertisement -

ಸಾಂಸ್ಕೃತಿಕ ಕಲಾಲೋಕಕ್ಕೆ 50 ಯುವ ಕಲಾವಿದರು ಪಾದಾರ್ಪಣೆ ಮಾಡಿ ತಮ್ಮ ಪ್ರತಿಭೆಯ ಪ್ರದರ್ಶನವನ್ನು ಅನಾವರಣಗೊಳಿಸುವ ಉದ್ದೇಶದಿಂದ ಅತಿಥಿಗಳು 50 ಜ್ಯೋತಿಯನ್ನು ಬೆಳಗ್ಗಿದ್ದು ಅರ್ಥಪೂರ್ಣವಾಗಿತ್ತು. ಡಿ.ವಿ.ಜಿ. ಯವರ ನುಡಿಯಂತೆ ಹೊಸ ಚಿಗುರು ಹಳೆ ಬೇರು’ ಎಂಬಂತೆ ಹಿರಿಯ ಪ್ರಸಿದ್ಧ ಸುಗಮಸಂಗೀತ ಗಾಯಕಿ ಕರ್ನಾಟಕ ಕಲಾಶ್ರೀ ಶ್ರೀಮತಿ ಎಂ. ಕೆ. ಜಯಶ್ರೀ ಹಾಗೂ ಕಲಾಕೇಂದ್ರದ ಕಿರಿಯ ಕುಡಿ ಮಾ. ದೈವಿಕ್, ಜೊತೆಗೆ ಎಲ್ಲ ಕಲಾವಿದರು ಹಾಗೂ ಉತ್ಸವಕ್ಕೆ ಆಗಮಿಸಿದ ಅತಿಥಿಗಳೆಲ್ಲರೂ ಸೇರಿ ಸುಶ್ರಾವ್ಯವಾಗಿ ಹಾಡಿದ ನಿತ್ಯೋತ್ಸವ ಗೀತೆ ಸಮಯೋಚಿತವಾಗಿ ಎಲ್ಲರಲ್ಲೂ ನವೋತ್ಸಾಹವನ್ನು ಮೂಡಿಸಿದ್ದು ವಿಶೇಷವಾಗಿತ್ತೆಂದು ಖ್ಯಾತ ಪತ್ರಿಕೋದ್ಯಮಿ ಶ್ರೀ ಸುಧೀಂದ್ರ ರಾವ್ ರವರು ಸಂತಸ ವ್ಯಕ್ತಪಡಿಸಿದರು.

ಸಂಸ್ಥೆಯ ಸುವರ್ಣ ಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ವಂದೇ ಭಾರತ’ ವೆಂಬ ರಂಗರೂಪದ ಪ್ರಥಮ ಪ್ರದರ್ಶನವಾಯಿತು. ಕಲಾಕೇಂದ್ರವು ಈ ವರ್ಷ ಸುವರ್ಣ ರಂಗಸಂಭ್ರಮ’ ನಾಟಕೋತ್ಸವವನ್ನು ವಿವಿಧೆಡೆ ಆಯೋಜಿಸಿ 50 ದೇಶಭಕ್ತಿ ಆಧಾರಿತ ನಾಟಕಗಳನ್ನ ಪ್ರದರ್ಶಿಸುವ ಹಂಬಲದಿಂದ ಸಂಸ್ಥಾಪಕರಾದ ಡಾ. ವಿ. ನಾಗರಾಜ್‍ರವರ ಪರಿಕಲ್ಪನೆ, ಮಾರ್ಗದರ್ಶನದಲ್ಲಿ ಹಾಗೂ ನೃತ್ಯ ವಿದೂಷಿ ಡಾ. ಶ್ವೇತಾರವರ ನಿರ್ದೇಶನ, ನೃತ್ಯಸಂಯೋಜನೆಯಲ್ಲಿ 50 ಕಲಾವಿದರಿಂದ ಮೂಡಿ ಬಂದ “ವಂದೇಭಾರತ’’ ರಂಗರೂಪಕ ಮನೋಜ್ಞವಾಗಿ ಮೂಡಿಬಂತು.

ರಾಷ್ಟ್ರಭಕ್ತಿ, ರಾಷ್ಟ್ರಪ್ರೇಮವನ್ನು ಜನಮಾನಸದಲ್ಲಿ ಮೂಡಿಸುವ ನಿಟ್ಟಿನಲ್ಲಿ ಇದೊಂದು ಯಶಸ್ವಿ ಪ್ರಯತ್ನವಾಗಿದೆ.

- Advertisement -
- Advertisement -

Latest News

ಭತ್ತದ ನಾಡು ಕೆ.ಆರ್.ನಗರ ಕಾವೇರಿ ತೀರದ ಅರ್ಕೇಶ್ವರ

ನಾವು ಕಪ್ಪಡಿ ದರ್ಶನ ಮಾಡಿಕೊಂಡು ಕೆ.ಆರ್.ನಗರದ ಅರ್ಕೇಶ್ವರ ದೇವಸ್ಥಾನ ನೋಡಲು ಪ್ರಯಾಣ ಮುಂದುವರೆಸಿದೆವು. ಕೆ.ಆರ್.ನಗರದಿಂದ ಹಾಸನ ರಸ್ತೆಯಲ್ಲಿ ಮೂರ್ನಾಲ್ಕು ಕಿ.ಮೀ. ದೂರದಲ್ಲಿ ಕಾವೇರಿ ನದಿಯ ದಂಡೆಯಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group