spot_img
spot_img

ಸಿದ್ದರಾಮಯ್ಯ ಹಾಗೂ ಡಿಕೆಶಿ ಡ್ರಾಮಾ ಬಾಜಿಗಳು – ಶ್ರೀರಾಮುಲು ಆಕ್ರೋಶ

Must Read

spot_img
- Advertisement -

ಬೀದರ: ಭ್ರಷ್ಟಾಚಾರದ ರಾಯಬಾರಿಗಳು ಅಂದ್ರೆ ಅದು ಡಿಕೆ ಶಿವಕುಮಾರ. ಮೊದಲು ನೀವು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಆಮೇಲೆ ಸಿಎಂ ರಾಜೀನಾಮೆ ಕೇಳಿ ಎಂದು ಡಿಕೆಶಿಗೆ ಶ್ರೀ ರಾಮುಲು ಸವಾಲ್ ಹಾಕಿದ್ದಾರೆ.

ಔರಾದ್ ನಲ್ಲಿ ಸಾರಿಗೆ ಸಚಿವ ಶ್ರೀರಾಮುಲು ಸಿದ್ದು ಹಾಗೂ ಡಿಕೆಶಿ ವಿರುದ್ಧ ಕೆಂಡಾಮಂಡಲವಾಗಿ ಮಾತನಾಡುತ್ತ, ಕಾಂಗ್ರೆಸ್ ನ ಭ್ರಷ್ಟಾಚಾರದ ಬಗ್ಗೆ ಒಂದು ಸಿನೆಮಾ  ಮಾಡಬಹುದು. ಮೊದಲು ನಿಮ್ಮ ನಾಟಕ ಕಂಪನಿ ಬಂದ್ ಮಾಡಿ ಎಂದರು.

ಸಿದ್ದರಾಮಯ್ಯ ಭ್ರಷ್ಟಾಚಾರದ ಸೂತ್ರದಾರ ಇದ್ದಂತೆ ಆದರೆ ಇವತ್ತು ಭ್ರಷ್ಟಾಚಾರದ ವಿರುದ್ದ ಕಾಂಗ್ರೆಸ್ ಪ್ರತಿಭಟನೆ ಮಾಡುತ್ತಿದೆ. ಪ್ರತಿಭಟನೆ ಮಾಡುವ ಯಾವುದೇ ನೈತಿಕತೆಯ ಕಾಂಗ್ರೆಸ್ ಗೆ ಇಲ್ಲ ನಮ್ಮ ಸಿಎಂ ರಾಜೀನಾಮೆ ಕೇಳೋ ಕಿಂಚಿತ್ತೂ ಅಧಿಕಾರ ಕೂಡ ಕಾಂಗ್ರೆಸ್ ಗೆ ಇಲ್ಲ ಎಂದರು.

- Advertisement -

ಶಾಸಕ ಮಾಡಾಳ ವಿರೂಪಾಕ್ಷಪ್ಪ ಅವರ ಮಗನ  ಪ್ರಕರಣವನ್ನು ಬಹಳ ಸೂಕ್ಷ್ಮವಾಗಿ ನೋಡುತ್ತಿದ್ದೇವೆ. ಲೋಕಾಯುಕ್ತ ನಮ್ಮ ಒಂದು ಅಂಗ. ತಪ್ಪಿಸರನ್ನು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ. ಆದರೆ ಇವತ್ತು ಕಾಂಗ್ರೆಸ್ ನಾಯಕರು ನಾಟಕ ಮಾಡುತ್ತಿದ್ದಾರೆ.ಸಿದ್ದರಾಮಯ್ಯ ಡ್ರಾಮಾ ಕಂಪನಿಯಲ್ಲಿ ನಕಲಿ ವೇಷಧಾರಿ ಇದ್ದಂತೆ. ಕಮಿಷನ್ ವಿಷಯ ಮಾತನಾಡುವ ಕಾಂಗ್ರೆಸ್ ಇನ್ನೂವರೆಗೂ ಒಂದೇ ಒಂದು ಪುರಾವೆ ಕೊಡಲು ಆಗಿಲ್ಲ ಎಂದು ಶ್ರೀರಾಮುಲು ವಾಗ್ದಾಳಿ ನಡೆಸಿದರು.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ಕಿವುಡ ಮಕ್ಕಳ ಸಂಸ್ಥೆಗೆ ರಾಜ್ಯ ಪ್ರಶಸ್ತಿ

ಕರ್ನಾಟಕ ಸರ್ಕಾರವು ವಿಕಲಚೇತನ ಸೇವಾ ಕ್ಷೇತ್ರದಲ್ಲಿ ಅನುಪಮ ಸೇವೆಯನ್ನು ಪರಿಗಣಿಸಿ ಪ್ರಸ್ತುತ 2023ನೇ ಸಾಲಿನ ಉತ್ತಮ ಸಂಸ್ಥೆಯ ವಿಭಾಗದಡಿ ಪೇರೆಂಟ್ಸ್ ಅಸೋಸಿಯೇಷನ್ ಆಫ್ ಡೆಫ್ ಚಿಲ್ಡ್ರನ್,...
- Advertisement -

More Articles Like This

- Advertisement -
close
error: Content is protected !!
Join WhatsApp Group