spot_img
spot_img

ಜಾತಿಗಳಲ್ಲಿ ಸಂಘರ್ಷ ತಂದ ಸಿದ್ಧರಾಮಯ್ಯ – ಶೋಭಾ ಕರಂದ್ಲಾಜೆ ಆರೋಪ

Must Read

- Advertisement -

ಬೀದರ: ರಾಜ್ಯದಲ್ಲಿ ಹಿಂದೂ ಮುಸ್ಲಿಮ್ ಸಂಘರ್ಷ ತಂದಿಟ್ಟಿದ್ದೇ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು. ತಮ್ಮ ಯೋಜನೆಗಳನ್ನು ಬರೀ ಮುಸಲ್ಮಾನರಿಗೆ ಕೊಟ್ಟರು, ವೀರಶೈವ ಲಿಂಗಾಯತರಲ್ಲಿ ಒಡಕು ತಂದಿಟ್ಟರು. ಮೂರ್ತಿ ಪೂಜೆ ಮುಸಲ್ಮಾನರು ಮಾಡುವುದಿಲ್ಲ ಆದರೂ ಟಿಪ್ಪುಜಯಂತಿ ಮಾಡಿ ಸಮಾಜಗಳಲ್ಲಿ ಒಡಕು ತಂದರು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ  ವಾಗ್ದಾಳಿ ನಡೆಸಿದರು.

ಭಾಲ್ಕಿಯಲ್ಲಿ ಸಮಾರಂಭವೊಂದರಲ್ಲಿ ಮಾತನಾಡಿದ ಅವರು ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತ, ಯಾವುದೇ ಮುಸ್ಲಿಮರು ಮೂರ್ತಿ ಹಾಗೂ ವ್ಯಕ್ತಿ ಪೂಜೆ ಒಪ್ಪಲ್ಲ. ಇದು ಕುರಾನ್ ನಲ್ಲಿ ಇಲ್ಲ. ಆದ್ರೆ ಸಿದ್ದರಾಮಯ್ಯ ಯಾರೂ ಕೇಳದ ಟಿಪ್ಪು ಜಯಂತಿಯನ್ನು ಆಚರಣೆ ಮಾಡಿದರು. ಹಿಂದೂ – ಮುಸ್ಲಿಮರ ಮಧ್ಯೆ ಸಂಘರ್ಷ ತಂದರು. ಇದಕ್ಕೆ ಹಲವಾರು ಜನರು ಬಲಿಯಾದರು. ಮಡಿಕೇರಿಯಲ್ಲಿ ಕುಟ್ಟಪ್ಪ ಅವರನ್ನು ಟಿಪ್ಪು ಜಯಂತಿ ಹೆಸರಿನಲ್ಲಿ ಕಲ್ಲು ಹೊಡೆದು ಕೊಲ್ಲಲಾಯಿತು.

ಇದು ಸಿದ್ದರಾಮಯ್ಯ ನವರು ಮಾಡಿದ್ದು ಎಂದರು.

- Advertisement -

ಯಾವುದೆ ಅಹಿಂದದವರಿಗೆ ಶಾದಿಭಾಗ್ಯ ಸಿಗಲಿಲ್ಲ. ಶಾದಿ ಭಾಗ್ಯ ಕೇವಲ ಮುಸ್ಲಿಮರಿಗೆ ಮಾತ್ರ ಕೊಟ್ಟರು. ಶಾಲೆಯ ಮಕ್ಕಳಿಗೆ ಪ್ರವಾಸ ಯೋಜನೆ ತಂದರೂ ಅದ್ರಲ್ಲೂ ಸಿದ್ದರಾಮಯ್ಯ ಜಾತಿ ತಂದ್ರು‌‌‌. ವೀರಶೈವ – ಲಿಂಗಾಯತ ಜಾತಿ ಒಡೆಯವ ಕೆಲಸ ಮಾಡಿದರು. 

ಯಡಿಯೂರಪ್ಪನವರ ಯೋಜನೆಗಳಲ್ಲಿ ಜಾತಿ ಇರಲಿಲ್ಲ. ಲಕ್ಷ್ಮೀ ಭಾಗ್ಯ ಮುಂತಾದ ಯೋಜನೆಗಳನ್ನು ಯಾವುದೇ ಜಾತಿಯ ತಾರತಮ್ಯವಿಲ್ಲದೆ ಯಡಿಯೂರಪ್ಪ ನೀಡಿದರು. ಇನ್ನೂ ಕೂಡ ಎಲ್ಲ ಜಾತಿಯ ಜನರು ಯಡಿಯೂರಪ್ಪ ಅವರನ್ನು ನೆನೆಸುತ್ತಾರೆ ಎಂದು ಕರಂದ್ಲಾಜೆ ಹೇಳಿದರು.

ಅಮಾಯಕ ಜನರನ್ನು ಕೊಲ್ಲುತ್ತಿದ್ದ ಪಿಎಫ್ಐ ಜನರನ್ನು ನಾವು ಜೈಲನಲ್ಲಿ ಇಟ್ಟಿದ್ದೆವು. ಆದರೆ ಅಂಥ 1700 ಜನರನ್ನು ಸಿದ್ದರಾಮಯ್ಯ ಬಿಡುಗಡೆ ಮಾಡಿದರು. ಜನರ ಜೀವದ ಕಾಳಜಿ ಇಲ್ಲ ಸಿದ್ಧರಾಮಯ್ಯ ಅವರಿಗೆ ಎಂದು ಆರೋಪಿಸಿದ ಅವರು, ನಾನು ಬಂದ್ರೆ 10 ಕೆಜಿ ಅಕ್ಕಿ ಕೊಡುತ್ತೇನೆ ಎನ್ನುತ್ತಾರೆ. ಆದರೆ ಸಿದ್ಧರಾಮಯ್ಯನವರೆ, ನಿಮ್ಮ ಸರ್ಕಾರ ಇದ್ದಾಗ ನೀವು ಕೊಟ್ಟಿದ್ದು ಬರಿ 5 ಕೆಜಿ ಅಕ್ಕಿ ಮಾತ್ರ ನೆನಪಿಡಿ ಎಂದು 

- Advertisement -

ಬೀದರ್ ನ ಭಾಲ್ಕಿಯಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಚೆ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ಅಹಂಕಾರದಿಂದ ಸರ್ವನಾಶ: ಡಾ. ಶ್ರೇಯಾ ಮಹೀಂದ್ರಕರ್

ಬೀದರ: ಪ್ರತಿ ವರ್ಷ ಶ್ರೀ ರಾಮನವಮಿಗೆ ಶ್ರೀ ರಾಮಜನ್ಮೋತ್ಸವವನ್ನು ನಾವು ಆಚರಿಸುತ್ತೇವೆ. ಶ್ರೀರಾಮ ನಮ್ಮ ಆದರ್ಶದ ಪ್ರತೀಕವಾಗಿದ್ದಾನೆ. ಮರ್ಯಾದಾ ಪುರುಷೋತ್ತಮ ರಾಮ ಮತ್ತು ರಾವಣರ ಮಧ್ಯೆ...
- Advertisement -

More Articles Like This

- Advertisement -
close
error: Content is protected !!
Join WhatsApp Group