spot_img
spot_img

ಫೆ.11 ರಂದು ಸಿದ್ಧರಾಮಯ್ಯ ಸಿಂದಗಿಗೆ ; ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ಕಾರ್ಯಕರ್ತರಿಗೆ ಕರೆ

Must Read

- Advertisement -

ಸಿಂದಗಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಆದೇಶದಂತೆ 2023 ರ ವಿಧಾನಸಭಾ ಚುನಾವಣೆಯ ಪ್ರಚಾರ ಪ್ರಯುಕ್ತ ಪ್ರಜಾ ಧ್ವನಿ ಬಸ್ ಯಾತ್ರೆಯಿಂದ ಸಿಂದಗಿ ನಗರಕ್ಕೆ ಫೆ. 11 ರಂದು ಬೆಳಿಗ್ಗೆ 11.00 ಗಂಟೆಗೆ ಮಾಜಿ ಮುಖ್ಯಮಂತ್ರಿ ಹಾಗೂ ವಿರೋದ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಆಗಮಿಸಲಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿಠ್ಠಲ ಜಿ. ಕೊಳ್ಳೂರ ತಿಳಿಸಿದರು.

ಪಟ್ಟಣದ ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯಾಲಯದಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖರು ಹಾಗೂ ಪದಾಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಅನೇಕ ಯೋಜನೆಗಳನ್ನು ಈ ನಾಡಿಗೆ ಕೊಡುಗೆಯಾಗಿ ನೀಡಿದೆ, ಆದರೆ ಈಗಿನ ಭ್ರಷ್ಟ ಬಿಜೆಪಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಬಡವರಿಗೆ ಕೂಲಿ ಕಾರ್ಮಿಕರಿಗೆ ಕೈಗೆಟಕದಷ್ಟು ಬೆಲೆ ಏರಿಕೆ ಮಾಡಿ ದುಬಾರಿ ಜೀವನ ನಡೆಸುವಂತೆ ಮಾಡಿದೆ ಅದರ ವಿರುದ್ದ ಬೆಲೆ ಏರಿಕೆ, ಭ್ರಷ್ಟಾಚಾರ, 40% ಕಮಿಷನ್, ಜನ ವಿರೋಧಿ ನೀತಿ ಹೀಗೆ ಹತ್ತು ಹಲವಾರು ವೈಫಲ್ಯ ಗಳನ್ನು ಮಾಡಿ ಜನರನ್ನು ಅವಸಾನದ ಹಂತಕ್ಕೆ ದೂಡಿದ್ದಾರೆ. ಆದರಿಂದ ಈ ಎಲ್ಲಾ ವಿಷಯಗಳನ್ನು ಗಮನದಲ್ಲಿ ಇಟ್ಟುಕೊಂಡು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಸಿಂದಗಿಗೆ ಆಗಮಿಸಲಿರುವ ಹಿನ್ನೆಲೆಯಲ್ಲಿ ಬೃಹತ್ ಪ್ರಜಾಧ್ವನಿ ಕಾರ್ಯಕರ್ತರ ಸಮಾವೇಶವನ್ನು ಏರ್ಪಡಿಸಲಾಗಿದ್ದು ಕಾಂಗ್ರೆಸ್ ಪಕ್ಷದ ಅಭಿಮಾನಿಗಳು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಎಲ್ಲ ಭೂತ್ ಮಟ್ಟದ ಅಧ್ಯಕ್ಷರು ಪ್ರಚಾರ ನಡೆಸಿ ಮನವರಿಕೆ ಮಾಡುವಂತೆ ಸೂಚಿಸಿದರು.

ಅಶೋಕ ಮನಗೂಳಿ ಮಾತನಾಡಿ, ಈ ಸಮಾವೇಶಕ್ಕೆ ಸುಮಾರು 20 ರಿಂದ 25 ಸಾವಿರ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

- Advertisement -

ಟಿಕೆಟ್ ಆಕಾಂಕ್ಷಿಗಳಾದ ಅಶೋಕ ಶಾಬಾದಿ, ರಾಕೇಶ ಕಲ್ಲೂರ್, ಚನ್ನು ವಾರದ, ವಿದ್ಯಾವತಿ ಅಂಕಲಗಿ, ಚಂದ್ರಕಾಂತ ಕೋಳಿ, ರವರು ಮಾತನಾಡಿದರು

ಈ ಸಂದರ್ಭದಲ್ಲಿ ಎಂ.ಎನ್.ಸಾಲಿ, ಆಲಮೇಲ ಘಟಕ ಅಧ್ಯಕ್ಷ ಆಯುಬ ದೇವರಮನಿ, ಮಹಿಳಾ ಘಟಕ ಅಧ್ಯಕ್ಷೆ ಶಾರದಾ ಬೇಟಗೇರಿ, ಮುಸ್ತಾಕ ಮುಲ್ಲಾ, ಶಿವನಗೌಡ ಬಿರಾದಾರ, ಗೋಲ್ಲಾಳಪ್ಪಗೌಡ ಮಾಗಣಗೇರಿ, ಸಂಗನಗೌಡ ಪಾಟೀಲ, ಶಿವು ಹತ್ತಿ, ಭೀಮರಾಯ ಅಮರಗೋಳ, ಯಲ್ಲು ಕೆರಕಿ, ರಮೇಶ ಗುಬ್ಬೆವಾಡ, ದೇವಿಂದ್ರ ಪೂಜಾರಿ, ಮಾಂತೇಶ ಅಮ್ಮಾಗೊಳ, ಅಮಿತ ಚವ್ಹಾಣ, ಭೀಮು ವಾಲಿಕಾರ, ಸಂತೋಷ ಹರನಾಳ, ವೀರೆಂದ್ರ ಕೋಟರಗಸ್ತಿ, ಪರಸು ಕಾಂಬ್ಳೆ, ರವಿ ದೇವರಮನಿ ಸೇರಿದಂತೆ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group