spot_img
spot_img

ಕಾಯಕದ ಕಲ್ಪನೆ ಸಾರಿದ ಸಿದ್ಧರಾಮೇಶ್ವರರು – ಪಂಡಿತ್ ಯಂಪೂರೆ

Must Read

- Advertisement -

ಸಿಂದಗಿ– ಕೆರೆ ಬಾವಿಗಳನ್ನು ನಿರ್ಮಾಣ ಮಾಡುವ ಮೂಲಕ ಪ್ರಾಣಿ, ಪಕ್ಷಿ, ಮಾನವರಿಗೆ ನೀರಿನ ಮಹತ್ವ ಸಾರಿದ ಪವಾಡ ಪುರುಷ ಸಿದ್ದರಾಮೇಶ್ವರರು. ಕಾಯಕದ ಕಲ್ಪನೆಯನ್ನು ಜಗತ್ತಿಗೆ ಸಾರಿ ಸ್ವಾವಲಂಬನೆಯ ನೀತಿಯನ್ನು ಪ್ರಸಾರ ಮಾಡಿದವರಲ್ಲಿ ಅಗ್ರಗಣ್ಯರು ಎಂದು ತಾಲೂಕಾ ಭೋವಿ ಸಮಾಜದ ಅಧ್ಯಕ್ಷ ಪಂಡಿತ ಯಂಪೂರೆ ಹೇಳಿದರು.

ಅವರು ಪಟ್ಟಣದ ಭೋವಿ ಕಾಲೋನಿಯಲ್ಲಿ (ಓಐಸಿಸಿ) ತಾಲೂಕಾ ಭೋವಿ ವಡ್ಡರ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಶಿವಯೋಗಿ ಸಿದ್ದರಾಮೇಶ್ವರ 850 ನೆಯ ಜಯಂತ್ಯುತ್ಸವದಲ್ಲಿ ಮಾತನಾಡಿ, 12 ನೇ ಶತಮಾನದಲ್ಲಿ ಕಾಯಕ ಹಾಗೂ ವಚನ ರಚನೆಯ ಮೂಲಕ ಸಾಮಾಜಿಕ ಕ್ರಾಂತಿ ಮಾಡಿ ಅನಿಷ್ಠ ಪದ್ದತಿಗಳನ್ನು ತೊಡೆದು ಹಾಕಿ ಸಾಮಾಜಿಕ ಚಳವಳಿಯನ್ನು ಮಾಡಿ ಹೆಣ್ಣು ಮಕ್ಕಳಿಗೆ ಸಮಾನತೆ ಅವಕಾಶ ಕಲ್ಪಿಸಿಕೊಟ್ಟವರು ಶಿವಯೋಗಿ ಸಿದ್ದರಾಮರು ಅನುಭವ ಮಂಟಪಕ್ಕೆ ಮೂರನೇಯ ಅಧ್ಯಕ್ಷರಾಗಿ ಶರಣ ತತ್ವವನ್ನು ಮೈಗೂಡಿಸಿಕೊಂಡು ಗುರು ಚನ್ನಬಸವಣ್ಣನವರಿಂದ ಲಿಂಗ ದೀಕ್ಷೆ ಪಡೆದುಕೊಂಡು ಕಾಯಕದೊಂದಿಗೆ ವಚನ ಕ್ರಾಂತಿ ಮಾಡಿ ಸುಮಾರು 68 ಸಾವಿರ ವಚನಗಳನ್ನು ರಚಿಸಿ 770 ಅಮರಗಣಂಗಳಲ್ಲಿ ಜೀವಂತ ಸಮಾಧಿಯಾಗಿದ್ದವರು ಸಿದ್ದರಾಮರ ಅವರ ತತ್ವ ಆದರ್ಶಗಳು ಮುಂದಿನ ಪೀಳಿಗೆಗೆ ಪೂರಕವಾಗಬೇಕು ಎಂದ ಅವರು, ಕಾಯಕದಿಂದ ಬಂದ ಹಣದಿಂದ ಸಿದ್ದರಾಮನ ಜನ್ಮ ಭೂಮಿ ಸೊನ್ನಲಗಿಯಲ್ಲಿ ಪ್ರತಿನಿತ್ಯ ಜ್ಞಾನ ದಾಸೋಹ, ಅನ್ನ ದಾಸೋಹಗಳೆಂಬ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡಿ ಬರಗಾಲದ ಸಂದರ್ಭದಲ್ಲಿ ರೈತರ, ಬಡವರ ಕಂದಾಯದ ಹಣವನ್ನು ಪಾವತಿಸುವ ಕಾರ್ಯ ಮಾಡುತ್ತಿದ್ದರು ಅಂತಹ ಮಹಾನ್ ಶರಣರನ್ನು ನೆನೆಯಲು ಅವರ ಜಯಂತಿ ನಿಮಿತ್ತ ಅನೇಕ ಗ್ರಾಮಗಳಲ್ಲಿ ಕೆಟ್ಟುನಿಂತ ಬೋರವೆಲ್‍ಗಳನ್ನು ದುರಸ್ಥಿಗೊಳಿಸಿ ನೀರು ಕೊಡುವ ಕಾರ್ಯಕ್ಕೆ ಮುಂದಾದರೆ ಈ ಜಯಂತಿಗೆ ಅರ್ಥ ಬರುತ್ತದೆ ಎಂದರು.

ಈ ಸಂದರ್ಭದಲ್ಲಿ ಶಿಕ್ಷಕ ಮುತ್ತಪ್ಪ ಪಾತ್ರೋಟಿ, ದಿಲೀಪ ಆಲಕುಂಟೆ, ತಿರುಪತಿ ಬಂಡಿವಡ್ಡರ, ಸಾಗರ ವಡ್ಡರ, ಭೀಮಾಶಂಕರ ಯಂಪೂರೆ, ಪರಶುರಾಮ ಯಂಪೂರೆ, ಬಸವರಾಜ ಬಂಡಿವಡ್ಡರ, ದಯಾನಂದ ಗೊಳಸಾರ, ಮುತ್ತು ಆಲಕುಂಟೆ, ತಿಮ್ಮಣ್ಣ ಆಲಕುಂಟೆ, ರವಿ ಚಾಕರೆ, ಬಸವರಾಜ ಬನಪಟ್ಟಿ, ಮುಕ್ತಾಬಾಯಿ ಯಂಪೂರೆ, ರೇಣುಕಾ ಯಂಪೂರೆ, ಚೆನ್ನು ಯಂಪೂರೆ, ಕಿರಣ ಯಂಪೂರೆ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಭತ್ತದ ನಾಡು ಕೆ.ಆರ್.ನಗರ ಕಾವೇರಿ ತೀರದ ಅರ್ಕೇಶ್ವರ

ನಾವು ಕಪ್ಪಡಿ ದರ್ಶನ ಮಾಡಿಕೊಂಡು ಕೆ.ಆರ್.ನಗರದ ಅರ್ಕೇಶ್ವರ ದೇವಸ್ಥಾನ ನೋಡಲು ಪ್ರಯಾಣ ಮುಂದುವರೆಸಿದೆವು. ಕೆ.ಆರ್.ನಗರದಿಂದ ಹಾಸನ ರಸ್ತೆಯಲ್ಲಿ ಮೂರ್ನಾಲ್ಕು ಕಿ.ಮೀ. ದೂರದಲ್ಲಿ ಕಾವೇರಿ ನದಿಯ ದಂಡೆಯಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group