spot_img
spot_img

ಸಿದ್ದೇಶ್ವರ ಶ್ರೀ ನಿಧನ ; ಬಾಲಚಂದ್ರ ಜಾರಕಿಹೊಳಿ ಸಂತಾಪ

Must Read

- Advertisement -

ಗೋಕಾಕ – ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ನಿಧನಕ್ಕೆ ಅರಭಾವಿ ಶಾಸಕ, ಕೆಎಮ್ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸಂತಾಪ ವ್ಯಕ್ತಪಡಿಸಿದ್ದಾರೆ.

“ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮಿಗಳ ನಿಧನರಾದ ಸುದ್ದಿ ಕೇಳಿ ದಿಗ್ಭ್ರಮೆಯಾಯಿತು. ನಮ್ಮ ಶ್ರೀ ಗಳ ನಿಧನದಿಂದ ಇಡೀ ನಾಡೇ ಶೋಕ ಸಾಗರದಲ್ಲಿ ಮುಳುಗಿದೆ. ಅತ್ಯಂತ ಸರಳ ಸಜ್ಜನಿಕೆಯ ಸಾಕಾರಮೂರ್ತಿಯಾಗಿದ್ದರು. ದೇಶವಲ್ಲದೇ ಜಾಗತಿಕವಾಗಿಯೂ ಹಲವಾರು ರಾಷ್ಟಗಳಲ್ಲಿ ಪ್ರವಚನಗಳನ್ನು ನೀಡಿದ್ದರು. ಕನ್ನಡವಲ್ಲದೇ ಇಂಗ್ಲಿಷ್ ಭಾಷೆಯಲ್ಲಿಯೂ ಅಪಾರ ಪಾಂಡಿತ್ಯವನ್ನು ಪಡೆದಿದ್ದರು. ಇವರೊಬ್ಬ ಈ ಶತಮಾನದ ಮಹಾನ್ ಸಂತ. ಕನ್ನಡ ನಾಡು ಕಂಡ ಅತೀ ಶ್ರೇಷ್ಠ ವಾಗ್ಮಿ. ತುಮಕೂರು ಸಿದ್ಧಗಂಗಾಮಠದ ಹಿಂದಿನ ಪೀಠಾಧಿಪತಿಯಾಗಿದ್ದ ಲಿಂ. ಶಿವಕುಮಾರ್ ಸ್ವಾಮೀಜಿಗಳಂತೆಯೇ ನಮ್ಮ ಹೆಮ್ಮೆಯ ಉ.ಕ ಭಾಗದಲ್ಲಿ ನಡೆದಾಡುವ ದೇವರು. ಶ್ರೀ ಗಳ ಆತ್ಮಕ್ಕೆ ಪರಮಾತ್ಮನು ಚಿರಶಾಂತಿಯನ್ನು ನೀಡಲಿ. ಲಕ್ಷಾಂತರ ಭಕ್ತರ ದುಃಖವನ್ನು ಸಹಿಸುವ ಶಕ್ತಿಯನ್ನು ನೀಡಲಿ” ಎಂದು ಬಾಲಚಂದ್ರ ಜಾರಕಿಹೊಳಿ ನುಡಿದಿದ್ದಾರೆ

- Advertisement -
- Advertisement -

Latest News

ಎಸ್ ಎಸ್. ಎಲ್ ಸಿ ಪರೀಕ್ಷೆಯಲ್ಲಿ ಸಾಧನೆ ಗೈದ ವಿದ್ಯಾರ್ಥಿಗೆ ಸತ್ಕಾರ

ಮುಧೋಳ:  ನಗರ ಶಾಮೇಲ್ಸ್ ಪ್ರೌಢ ಶಾಲೆಯ  ಸಹನಾ ಶ್ರೀಶೈಲ್ ಚಿಕಲಕ್ಕಿ ವಿದ್ಯಾರ್ಥಿ ಕಳೆದ ಮಾರ್ಚ-ಏಪ್ರಿಲ್ ತಿಂಗಳಲ್ಲಿ ಜರುಗಿದ ಎಸ್.ಎಸ್. ಎಲ್. ಸಿ ಪರೀಕ್ಷೆಯ ಮರು ಮೌಲ್ಯ...
- Advertisement -

More Articles Like This

- Advertisement -
close
error: Content is protected !!
Join WhatsApp Group