spot_img
spot_img

ದಲಿತರಿಗೆ ಸೌಲಭ್ಯಗಳನ್ನು ಸರಿಯಾಗಿ ನೀಡಲು ಸಿದ್ದು ಪೂಜಾರಿ ಆಗ್ರಹ

Must Read

- Advertisement -

ಸಿಂದಗಿ: ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡದ ವರ್ಗದವರ ಮೇಲಿರುವ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಶೀಘ್ರ ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿರುವ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯವರಿಗೆ ಬಿಜೆಪಿ ಎಸ್.ಸಿ ಮೋರ್ಚಾ ಅಧ್ಯಕ್ಷ ಸಿದ್ದು ಪೂಜಾರಿ ದಲಿತರ ಪರವಾಗಿ ಅಭಿನಂದನೆ ಸಲ್ಲಿಸಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಎಸ್ಸಿ ಮೋರ್ಚಾವತಿಯಿಂದ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪರಿಶಿಷ್ಟ ಜಾತಿ, ಪರಿಶಿಷ್ಠ ಪಂಗಡ ಜನಾಂಗದ ಮಕ್ಕಳು ಬಹುದಿನಗಳಿಂದ ಉದ್ಯೋಗ ಸಿಗದೇ ಪರಿತಪ್ಪಿಸುವ ಸಂದರ್ಭ ಬಂದೊಗಿದ್ದು ಕಾರಣ ಶಿಕ್ಷಣ, ಉದ್ಯೋಗ ಮತ್ತು ಸಬಲೀಕರಣಕ್ಕೆ ಆದ್ಯತೆ ನೀಡಬೇಕು.

ಈ ಸಮುದಾಯಗಳ ಕಲ್ಯಾಣ ಕಾರ್ಯಕ್ರಮಗಳನ್ನು ಸಮಯಕ್ಕೆ ಸರಿಯಾಗಿ ಅನುಷ್ಠಾನಗೊಳಿಸುವಂತೆ ಗಂಗಾ ಕಲ್ಯಾಣ ಯೋಜನೆಯಡಿ ಕೊರೆದ ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕ ಒದಗಿಸಲು ಹೆಸ್ಕಾಂ ಸಂಸ್ಥೆಗಳು ನಿರ್ಲಕ್ಷ ತೊರುತ್ತಿದ್ದಾರೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಮತ್ತು ಮೋಟಾರ ಪಂಪ ಸೆಟ್ ಅಳವಡಿಕೆಗೆ ಟೆಂಡರ ಆಗಿದ್ದರು ಕೂಡಾ ೨೦೧೮ ರಿಂದ ಇಲ್ಲಿವರೆಗೆ ಅಳವಡಿಕೆ ಮಾಡಿಲ್ಲ ಹೀಗಾದರೆ ಕೊರೆದ ಬೋರವೆಲ್ಲಗಳಲ್ಲಿ ಅಂರ್ತಜಲ ಕಡಿಮೆಯಾಗಿ ಕೊರೆದ ಬೊರವೆಲ್‌ಗಳು ಕೊರೆದರು ಇಲ್ಲದದಂತಾಗಿದೆ ಇದರಿಂದ ದಲಿತರಿಗೆ ನೆಪಕ್ಕೆ ಮಾತ್ರ ಸೌಲಭ್ಯ ಒದಗಿಸಿ ಕೈತೊಳೆದುಕೊಳ್ಳತ್ತಿದ್ದು ಮಾನ್ಯರವರು ಇದರ ಬಗ್ಗೆ ಗಂಭೀರವಗಿ ಪರಿಗಣಿಸಿ ಸೂಕ್ತ ಕ್ರಮ ವಹಿಸಲು ಸೂಚಿಸಬೇಕು ಅಲ್ಲದೆ ಎಸ್.ಸಿ ಪಿ, ಟಿ ಎಸ್ ಪಿ ಅನುದಾನ ಬಳಕೆ ಮಾಡುವಂತೆ ಹೇಳಿದ್ದಾರೆ.

- Advertisement -

ಎಸ್.ಸಿ.ಪಿ/ ಟಿಎಸ್ ಪಿ ಕಾಯ್ದೆಯನ್ವಯ ಈ ಸಮುದಾಯಗಳಿಗೆ ನಿಗದಿ ಪಡಿಸಿದ ಅನುದಾನ, ಅವರ ಕ್ಷೇಮಾಭಿವೃದ್ಧಿಗೆ ಬಳಕೆಯಾಗುವ ಕುರಿತು ಕಾಯ್ದೆಗೆ ತಿದ್ದುಪಡಿ ಮಾಡಲು ಕ್ರಮ ವಹಿಸುವಂತೆ ಕಾನೂನು ಇಲಾಖೆಗೆ ಸೂಚನೆ ನೀಡಿರುವುದು ಮತ್ತು ನಕಲಿ ಜಾತಿ ಪ್ರಮಾಣ ಪಡೆದು ಎಸ್.ಸಿ ಎಸ್.ಟಿ ಸಮುದಾಯದವರ ಹಕ್ಕನ್ನು ಕಸಿದು ಕೊಳ್ಳುತ್ತಿರುವವರ ಹಾಗೂ ಉದ್ಯೋಗ ವಂಚಿತರನ್ನಾಗಿ ಮಾಡಿದವರ ವಿರುದ್ಧ, ಜಾತಿ ಪ್ರಮಾಣ ನೀಡುವ ಅಧಿಕಾರಿ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವುದು ಮುಖ್ಯಮಂತ್ರಿಗಳ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಎಸ್ ಸಿ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಶಿವು ಸೋಂಪುರ, ಎಸ್ಸಿ-ಎಸ್.ಟಿ ಘಟಕದ ಅಧ್ಯಕ್ಷ ಮಂಜುನಾಥ ನಾಯ್ಕೋಡಿ, ಕೆಡಿಪಿ ಸದಸ್ಯ ಶಿವಾನಂದ ಆಲಮೇಲ, ಪುರಸಭೆ ನಾಮ ನಿರ್ದೇಶನ ಸದಸ್ಯರಾದ ಯಲ್ಲು ಇಂಗಳಗಿ, ರಾಮು ಬೋರಗಿ, ಸುನಂದಾ ಯಂಪೂರೆ. ಆಶ್ರಯ ಕಮಿಟಿ ಸದಸ್ಯ ಕಾಜು ಬಂಕಲಗಿ, ಪುಂಡಲೀಕ ರಾಠೋಡ, ಪರಶುರಾಮ ಕಾಸೆ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group