spot_img
spot_img

ಸಿದ್ಧರಾಮಯ್ಯ ಎಮೋಷನಲ್ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ – ಶರಣು ಸಲಗರ

Must Read

- Advertisement -

ಬೀದರ – ಮುಖ್ಯಮಂತ್ರಿ ಸಿದ್ಧರಾಮಯ್ಯ ಒಬ್ಬರು ರಾಜೀನಾಮೆ ಕೊಟ್ಟರೆ ಇಡೀ ದೇಶದಲ್ಲಿ ಕಾಂಗ್ರೆಸ್ಸೇ ಮುಳುಗಿ ಹೋಗುತ್ತದೆ ಎಂಬ ಭಯದಲ್ಲಿ ಕಾಂಗ್ರೆಸ್ಸಿಗರು ಇದ್ದಾರೆ ಎಂದು ಬಿಜೆಪಿ ಶಾಸಕ ಶರಣು ಸಲಗರ ಹೇಳಿದರು.

ಇಷ್ಟೆಲ್ಲ ಆದರೂ ನಾನು ರಾಜೀನಾಮೆ ಕೊಡುವುದಿಲ್ಲ ಎಂದು ಹಠ ಹಿಡಿದಿರುವ ಸಿದ್ಧರಾಮಯ್ಯನವರದು ಭಂಡತನ ಎಂದು ಜರಿದ ಅವರು, ನೀವು ನೋಡ್ತಾ ಇರಿ ಕೆಲವೇ ದಿನಗಳಲ್ಲಿ ಸಿದ್ಧರಾಮಯ್ಯ ಖಂಡಿತವಾಗಿಯೂ ರಾಜೀನಾಮೆ ಕೊಟ್ಟು ಜೈಲಿಗೆ ಹೋಗಲಿದ್ದಾರೆ ಎಂದು ಭವಿಷ್ಯ ನುಡಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರ ಹಿಂದೆಯೇ ಎಲ್ಲ ಭ್ರಷ್ಟರು ನಾಚಿಕೆ, ಮಾನ ಮರ್ಯಾದೆ ಬಿಟ್ಟು ನಿಂತಿದ್ದಾರೆ. ಈಡಿ ತನಿಖೆಗೆ ಬರುತ್ತಲೇ ನಿವೇಶನಗಳನ್ನು ಮರಳಿಕೊಡುವ ನಾಟಕವಾಡಿ ಎಮೋಷನಲ್ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಸಲಗರ ಆಕ್ರೋಶ ವ್ಯಕ್ತಪಡಿಸಿದರು.

- Advertisement -

ಯತ್ನಾಳ ತಮ್ಮ ವರ್ತನೆ ಬದಲಾಯಿಸಿಕೊಳ್ಳಲಿ :

ಬಿಜೆಪಿಯ ಸ್ವಪಕ್ಷದವರೇ ಆದ ಯತ್ನಾಳ ಅವರು ಪಕ್ಷದ ವಿರುದ್ಧ ಹೇಳಿಕೆ ನೀಡುತ್ತಿರುವ ಬಗ್ಗೆ ಪ್ರಸ್ತಾಪಿಸಿದಾಗ ಅದಕ್ಕೆ ಪ್ರತಿಕ್ರಿಯೆ ನೀಡಿದ ಶರಣು ಅವರು, ಯತ್ನಾಳ ಅವರ ವರ್ತನೆಯಿಂದ ನಮಗೆ ಹಾಗೂ ಪಕ್ಷಕ್ಕೆ ಮುಜುಗರವಾಗಿದೆ ಎಂಬುದನ್ನು ನಾನು ಒಪ್ಪುತ್ತೇನೆ ಎಂದ ಅವರು, ಯತ್ನಾಳ ಅವರಿಂದ ಮಾತ್ರ ಬಿಜೆಪಿ ಅಭಿವೃದ್ಧಿ ಯಾಗಿಲ್ಲ ಇದರ ಹಿಂದೆ ಅಡ್ವಾನಿ, ವಾಜಪೇಯಿಯಂಥವರು, ಯಡಿಯೂರಪ್ಪರಂಥವರು ಇದ್ದಾರೆ ಆದ್ದರಿಂದ ಅವರು ಯೋಚನೆ ಮಾಡಿ ಮಾತನಾಡಬೇಕು. ಅವರು ಬುದ್ಧಿ ಹೇಳುವ ಸ್ಥಾನದಲ್ಲಿರುವವರು ಅವರ ವರ್ತನೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಎಂದು ಕಿಡಿಕಾರಿದರು.

ವರದಿ : ನಂದಕುಮಾರ ಕರಂಜೆ, ಬೀದರ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಸಮುದ್ರ ವಿಹಾರ ತಂದಿತು ಜೀವಕ್ಕೆ ಕುತ್ತು; ನೋಡನೋಡುತ್ತಲೇ ಮುಳುಗಿದ ಬೋಟ್

ಗೋವಾದಂಥ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಭೇಟಿ ಕೊಟ್ಟಾಗ ಅಲ್ಲಿನ ಸಮುದ್ರದಲ್ಲಿ ವಿಹಾರ ಮಾಡುವುದು ಅತ್ಯಂತ ಹೆಚ್ಚಿನ ಬೇಡಿಕೆಯಾಗಿರುತ್ತದೆ. ಹಾಗೆಯೇ ಗೋವಾದಲ್ಲಿ ನಡೆದಿದೆಯೆಂದು ಹೇಳಲಾದ ಬೋಟ್ ಪಯಣ ಅದರ...
- Advertisement -

More Articles Like This

- Advertisement -
close
error: Content is protected !!
Join WhatsApp Group