spot_img
spot_img

ಭಕ್ತರ ಮನದಲ್ಲಿ ಸಿದ್ಧೇಶ್ವರ ಶ್ರೀ ಚಿರಸ್ಥಾಯಿಯಾಗಿದ್ದಾರೆ- ಸಸಾಲಟ್ಟಿ

Must Read

- Advertisement -

ಮೂಡಲಗಿ: ಭಾರತೀಯ ಸಂಸ್ಕೃತಿಯಲ್ಲಿ ಶರಣರು, ಸಂತರು, ದಾಸರು ಅತ್ಯಂತ ವಿಶೇಷ ಸ್ಥಾನವನ್ನು ಪಡೆದ್ದಾರೆ. ಅಂತಹ ಸಾಲಿನಲ್ಲಿ ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳು ಒಬ್ಬರು, ಆಧ್ಯಾತ್ಮಿಕ ಪ್ರವಚನೊಂದಿಗೆ ಜನರಿಗೆ ಚಿರಂತನ ಬೆಳಕನ್ನು ತುಂಬಿ ಅವರ ಹೃದಯದಲ್ಲಿ ಚಿರಸ್ಥಾಯಿಯಾಗಿದ್ದಾರೆ. ಅವರ ಅಗಲಿಕೆಯಿಂದ ನಮ್ಮ ನಾಡಿಗೆ ತುಂಬಲಾರದ ನಷ್ಟವಾಗಿದೆ ಎಂದು ಶಿಕ್ಷಕ ಬಸವರಾಜ ಸಸಾಲಟ್ಟಿ ಹೇಳಿದರು.

ಮಂಗಳವಾರದಂದು ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಶ್ರೀ ಕಲ್ಮೇಶ್ವರ ಕಮಿಟಿ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ  ಮೂಡಲಗಿ ತಾಲೂಕಾ ಘಟಕ ಮತ್ತು ಮೂಡಲಗಿ ತಾಲೂಕಾ ಕನ್ನಡ ರಾಜ್ಯೋತ್ಸವ ಸಮಿತಿಯ ಆಶ್ರಯದಲ್ಲಿ ಲಿಂಗೈಕ್ಯರಾದ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳಿಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶ್ರೀಗಳು ಕಳೆದ 13 ವರ್ಷಗಳ ಹಿಂದೆ ಪಟ್ಟಣದಲ್ಲಿ ಒಂದು ತಿಂಗಳ ಕಾಲ ಪ್ರವಚನ ನೀಡಿ, ಅನೇಕ ಸರ್ಕಾರಿ ಕನ್ನಡ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳಿಗೆ ಶಿಕ್ಷಣದ ಬಗ್ಗೆ ಅರಿವು ಮೂಡಿಸಿದ್ದರು ಎಂದರು.

ನಿವೃತ್ತ ಶಿಕ್ಷಕ ಬಿ ಆರ್ ತರಕಾರ ಹಾಗೂ ಮನೋಹರ ಸಣ್ಣಕ್ಕಿ ಮಾತನಾಡರು.

- Advertisement -

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಹಣಮಂತ, ಅರಭಾಂವಿ ಬಿಜೆಪಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ, ಜಿಲ್ಲಾ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಈರಪ್ಪ ಢವಳೇಶ್ವರ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೃಷ್ಣಪ್ಪಾ ಗಿರೆನ್ನವರ, ಉಪಾಧ್ಯಕ್ಷ ಎಲ್ ಸಿ ಗಾಡವಿ ಹಾಗೂ ಪದಾಧಿಕಾರಿಗಳು ಮತ್ತು ಕಲ್ಮೇಶ್ವರ ಕಮಿಟಿಯ ಪದಾಧಿಕಾರಿಗಳು, ಪುರಸಭೆ ಸದಸ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಎಸ್ ಎಸ್. ಎಲ್ ಸಿ ಪರೀಕ್ಷೆಯಲ್ಲಿ ಸಾಧನೆ ಗೈದ ವಿದ್ಯಾರ್ಥಿಗೆ ಸತ್ಕಾರ

ಮುಧೋಳ:  ನಗರ ಶಾಮೇಲ್ಸ್ ಪ್ರೌಢ ಶಾಲೆಯ  ಸಹನಾ ಶ್ರೀಶೈಲ್ ಚಿಕಲಕ್ಕಿ ವಿದ್ಯಾರ್ಥಿ ಕಳೆದ ಮಾರ್ಚ-ಏಪ್ರಿಲ್ ತಿಂಗಳಲ್ಲಿ ಜರುಗಿದ ಎಸ್.ಎಸ್. ಎಲ್. ಸಿ ಪರೀಕ್ಷೆಯ ಮರು ಮೌಲ್ಯ...
- Advertisement -

More Articles Like This

- Advertisement -
close
error: Content is protected !!
Join WhatsApp Group