spot_img
spot_img

ಮೌನ ಅತಿ ಮುಖ್ಯ ಎನ್ನುತ್ತಾರೆ ಆಧ್ಯಾತ್ಮ ಸಾಧಕರು

Must Read

- Advertisement -

ಭಾರತ ಆಧ್ಯಾತ್ಮ ಸಾಧಕರ ತವರೂರಾಗಿತ್ತು. ಆದರೆ ಇಂದಿನ ಸಾಧನೆ ಹಿಂದಿನ ಸಾಧಕರನ್ನು ಮಧ್ಯೆ ಇಟ್ಟು ತಮ್ಮ ತಮ್ಮ ಅಭಿಪ್ರಾಯ ,ಸಲಹೆ,ಸೂಚನೆಗಳ ಮೂಲಕ ಜನರಿಗೆ ಅರ್ಥ ಮಾಡಿಸುವುದಾಗಿದೆ. ಆದರೆ ಆಧ್ಯಾತ್ಮ ಎಂದರೆ ಆದಿ ಆತ್ಮ.

ಎಲ್ಲರೊಳಗೂ ಇರುವ ಆ ಪರಮಾತ್ಮನ ಅಂಶವನ್ನು ‌ ಗುರುತಿಸಿಕೊಳ್ಳಲು ತಮ್ಮ ತಮ್ಮ ಮೂಲದ ಧರ್ಮ ಕರ್ಮದ ಕಡೆಗೆ ನಡೆಯುತ್ತಿದ್ದವರನ್ನು ತಡೆದು ನಿಲ್ಲಿಸಿ ಬಡವರೆನ್ನುವ ಪಟ್ಟಿ ಕಟ್ಟಿ ಸರಿಯಾದ ವಿದ್ಯೆ ನೀಡದೆ, ಪುರಾಣವನ್ನು ತಿರುಚಿಕೊಂಡು ದೇವರನ್ನು ಹೊರಗೆ ತೋರಿಸಿದರೆ ದೇವರು ಕಾಣುವರೆ? ಇಲ್ಲಿ ಹೊರಗೆ ಒಳಗೆ ಹರಡಿರುವ ಅಸಂಖ್ಯಾತ ಅಣು ಪರಮಾಣುಗಳ ಒಕ್ಕೂಟವೆ ಒಂದು ಶಕ್ತಿಯಾಗಿದೆ.

ಅದು ಅಸುರರದ್ದಾಗಬಹುದು.ದೇವರದ್ದಾಗಬಹುದು. ದೈವ. ಶಕ್ತಿ ಮುಕ್ತಿಯ ಮಾರ್ಗ ತೋರಿಸುವ ಕಾರಣಕ್ಕಾಗಿಯೇ ಕಷ್ಟಗಳನ್ನು ಸಹಿಸಿಕೊಂಡು ಮಹಾತ್ಮರು ಆಧ್ಯಾತ್ಮದ ಕಡೆಗೆ ನಡೆದು ದೈವ ಸಾಕ್ಷಾತ್ಕಾರ ಪಡೆದರು. ಅಸುರ ಶಕ್ತಿ ಭೂಮಿಯ ಸುಖವನ್ನಷ್ಟೇ ಬಳಸಿಕೊಂಡು ಧರ್ಮ, ಸತ್ಯ ಬಿಟ್ಟು ನಡೆಯುವಾಗ ಯಾವುದರಿಂದ ಆತ್ಮರಕ್ಷಣೆ ಆಗುವುದು ಆತ್ಮಹತ್ಯೆ ಆಗುವುದೆನ್ನುವುದರ ಅರಿವಿಗೆ ಬರದೆ ಕೊನೆಯಲ್ಲಿ ಸಮಸ್ಯೆಗಳಿಂದ ಜೀವ ನರಳುತ್ತದೆ. ಎರಡೂ ಕಡೆ ಕಷ್ಟವಿದೆ.

- Advertisement -

ದೇವರಾಗಲು ಮೊದಲು ಸತ್ಯ ಧರ್ಮದಕಡೆ ನಡೆಯುತ್ತಾ ಜೀವ ಕಷ್ಟ ಅನುಭವಿಸುತ್ತದೆ. ಅಸುರರಾಗಲು ಮೊದಲು ಅಸತ್ಯ ಅನ್ಯಾಯ, ಅಧರ್ಮದಿಂದ ಮುಂದೆ ನಡೆದು ಹಣಗಳಿಸಿ ಜನರನ್ನು ಆಳಿದರೂ ಕೊನೆಯಲ್ಲಿ ಎಲ್ಲಾ ಕಳೆದುಕೊಂಡು ಕಷ್ಟ ಅನುಭವಿಸುತ್ತದೆ. ಆದರೆ, ಭೌತಿಕದಲ್ಲಿ ಜನರ ಕಣ್ಣಿಗೆ ಬೀಳೋದು ಅಧಿಕಾರ, ಹಣ ಸ್ಥಾನಮಾನ ಮಾತ್ರ ಹೀಗಾಗಿ ಹೆಚ್ಚು ಜನರ ಸಹಕಾರ ಸಿಕ್ಕಿದ ಜೀವಕ್ಕೆ ತಾನು ಸರಿಯಾದ ದಾರಿಯಲ್ಲಿ ನಡೆಯುತ್ತಿದ್ದೇನೆ ಎಂಬ ಭ್ರಮೆಯಲ್ಲಿ ಮುಂದೆ ಮುಂದೆ ನಡೆದು ಭ್ರಷ್ಟಾಚಾರ ಬೆಳೆಯುತ್ತದೆ.

ಭ್ರಷ್ಟಾಚಾರದಿಂದ ಮುಕ್ತಿ ಸಿಗೋದಿಲ್ಲ.ಹೀಗಾಗಿ ಜನರು ಭ್ರಷ್ಟರ ವಿರುದ್ದ ಮಾತನಾಡಲು ಹೆದರಿ ಮೌನವಾಗುತ್ತಾರೆ. ಸಹಕಾರ ನೀಡದೆ ಇದ್ದಿದ್ದರೆ ಇಷ್ಟು ಭ್ರಷ್ಟಾಚಾರ ಬೆಳೆಯುತ್ತಿರಲಿಲ್ಲ ಎನ್ನುವ ಸತ್ಯ ನಾವೀಗ ಗಮನಿಸಬೇಕಷ್ಟೆ. ಎಲ್ಲಾ ಸಮಸ್ಯೆಗೂ ನಮ್ಮ ಮೌನವೂ ಕಾರಣವಾಗುತ್ತದೆ. ನಮ್ಮ ಸಹಕಾರ ಆಧ್ಯಾತ್ಮದ ಕಡೆಗೆ ನಡೆಯುವಾಗಲೂ ನಮ್ಮ ನಮ್ಮ ಆತ್ಮಪರಿಶೀಲನೆ ಪ್ರತಿಕ್ಷಣವೂ ಮಾಡಿಕೊಂಡರೆ ನಮ್ಮಲ್ಲಿರುವ‌ ದೇವರ ದರ್ಶನ ಸಾಧ್ಯ. ಇಲ್ಲವಾದರೆ ಪರರ ದೇವರ ದರ್ಶನ. ಪರಮಾತ್ಮ ಎಲ್ಲರೊಳಗೂ ಇದ್ದು ನಡೆಸೋ ಮಹಾಶಕ್ತಿ. ಹೀಗಿರುವಾಗ ಯಾರೋ ಒಬ್ಬರ ಹಿಂದೆ ನಡೆದು ನಮ್ಮ ಒಳಗಿನ ದೇವರನ್ನು ಮರೆತರೆ ಕಷ್ಟವೆ. ಹುಟ್ಟು ಸಾವು ಜೀವನದಲ್ಲಿ ಎಲ್ಲರಿಗೂ ಇದೆ.

ಇದರ ಮಧ್ಯೆ ನಮ್ಮ ಜೀವನದಲ್ಲಿ ಬರುವ ಮಧ್ಯವರ್ತಿಗಳಲ್ಲಿ ಸತ್ಯ ಧರ್ಮ ಇದ್ದರೆ ಸದ್ಗತಿ. ಇಲ್ಲವಾದರೆ ಅಧೋಗತಿ. ಹೀಗಾಗಿ ಹಿಂದೂಧರ್ಮದವರ ಮೌನವು ಪರರಿಗೆ ದೊಡ್ಡ ವರವಾಗಿದೆ. ಹೀಗಾಗಿ ಅವರ ಧರ್ಮದೇವರು ಮಧ್ಯೆ ಪ್ರವೇಶ ಮಾಡಿ ಆಳುತ್ತಿರುವುದಾಗಿದೆ. ಈಗಲೂ ಹಿಂದೂಗಳಿಗೆ. ನಮ್ಮವರ ಸತ್ಯ ಕಹಿ,ಪರರ ಸತ್ಯ ಸಿಹಿಯೆ? ಸಿಹಿ ತಿನ್ನಿಸಿ ಕಹಿ ತಿನ್ನಿಸುವುದರ ಹಿಂದಿನ ಮರ್ಮ ತಿಳಿದವರು ಬುದ್ದಿವಂತರು.

- Advertisement -

ಅದೇ ಕಹಿ ತಿನ್ನಿಸಿ ಆರೋಗ್ಯದ ಕಡೆ ನಡೆಸುವವರು ಜ್ಞಾನಿಗಳು. ಸತ್ಯ ಯಾವತ್ತೂ ಕಹಿಯಾಗಿರುತ್ತದೆ. ಅತಿಯಾದ ಸಿಹಿ ತಿಂದು ಬಂದ ಸಕ್ಕರೆ ಖಾಯಿಲೆಗೆ ಕಹಿ ಮದ್ದಾಗಬಹುದು. ಮೌನವಾಗಿದ್ದು ಆತ್ಮಾವಲೋಕನ  ಮಾಡಿಕೊಂಡವರಿಗೆ ಇದು ಸತ್ಯವಾಗಿರುತ್ತದೆ. ವಿರೋಧಿಸಿ ನಡೆದವರಿಗೆ ಅಸತ್ಯವೆ. ಒಂದು ರಾಜಯೋಗದ ಕಡೆಗೆ ನಡೆಸಿದರೆ, ಇನ್ನೊಂದು ರಾಜಕೀಯಕ್ಕೆಳೆದು ಆಳುತ್ತದೆ. ರಾಜಯೋಗಕ್ಕೆ ಆಧ್ಯಾತ್ಮ ಮೌನ ಬೇಕು.ರಾಜಕೀಯಕ್ಕೆ ಭೌತಿಕ ಜ್ಞಾನ ಸಾಕು. ಜೀವ ಯಾವ‌ಕಡೆ ನಡೆದರೆ ಮುಕ್ತಿ ಸಿಗುತ್ತದೆ?

ಈ ಸತ್ಯ ಮಾನವ ತಿಳಿಯಬೇಕು.ಇದಕ್ಕೆ ನಾವು ಮೌನದಿಂದ ಮನೆಯೊಳಗಿದ್ದೇ ಸಾಧಕರಾದರೆ ಉತ್ತಮ. ನಮ್ಮ ಒಳ ಸತ್ಯ ನಮ್ಮನ್ನು ಸರಿದಾರಿಗೆ ತರಲು ನಮ್ಮನ್ನು ನಾವು ತಿದ್ದಿ ನಡೆಯಬೇಕಿದೆ. “ಮೌನಂ ಸಮ್ಮತಿ ಲಕ್ಷಣಂ” ಮಕ್ಕಳ ತಪ್ಪನ್ನು ನೋಡಿಯೂ ಮೌನವಾಗಿದ್ದು ಬೆಳೆದುನಿಂತಾಗ ಮಾತಾಡಿ ಏನೂ ಪ್ರಯೋಜನವಿಲ್ಲ. ಯಾವಾಗ ಮಾತಾಡಬೇಕು ಬೇಡ ಎನ್ನುವ ಜ್ಞಾನ ನಮಗಿರಬೇಕಷ್ಟೆ. ಆಧ್ಯಾತ್ಮ ಸಾಧಕರು ಯಾರೂ ಮೌನವಾಗಿಲ್ಲ.ವಾದ ವಿವಾದಗಳಲ್ಲಿದ್ದಾರೆ.

ಆದರೆ, ಯಾವುದಕ್ಕೆ ಮಾತಾಡಬೇಕು ಎನ್ನುವುದನ್ನು ತಿಳಿದು, ತಿಳಿಸಿದರೆ ಭಾರತೀಯತೆ ಉಳಿಸಬಹುದು. ಪರಕೀಯರ ಜೊತೆಗೆ ಸೇರಿ ನಮ್ಮವರನ್ನೇ ಹಿಂದುಳಿಸಿದರೆ ನಾವೇ ಹಿಂದುಳಿದವರಾಗುತ್ತೇವೆ. ಹಾಗೆ ನಮ್ಮವರ ಸತ್ಯವನ್ನು ಮೌನದಿಂದ ಕೇಳಿಸಿಕೊಂಡು ಪರಕೀಯರಿಗೆ ಮಣೆ ಹಾಕಿದರೆ ಅಧರ್ಮವೆ ಬೆಳೆಯೋದು. ಮಾತು ಬೆಳ್ಳಿ ಮೌನ ಬಂಗಾರ ನಿಜ. ಆದರೆ ಈಗ ಬೆಳ್ಳೆ ಬಂಗಾರಗಳು ವ್ಯವಹಾರಕ್ಕಷ್ಟೆ. ಸೀಮಿತವಾಗಿರೋದು ಸಮಸ್ಯೆಗೆ ಕಾರಣವಾಗುತ್ತಿದೆ. ಮಾ ತುಬಲ್ಲವನಿಗೆ ಜಗಳವಿಲ್ಲ. ಊಟಬಲ್ಲವನಿಗೆ ರೋಗವಿಲ್ಲ. ಜಗಳವೇ ದೊಡ್ಡ ರೋಗಕ್ಕೆ ದಾರಿಮಾಡಿಕೊಟ್ಟರೆ ಎಲ್ಲಾ ಇದ್ದೂ ಯಾರೂ ಇಲ್ಲ.


ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group