spot_img
spot_img

ಮುರುಘಾ ಶ್ರೀಗಳ ಬೆಂಬಲಿಸಿ ಮೌನ ಪ್ರತಿಭಟನೆ

Must Read

ಬೀದರ – ಶರಣರು ಯಾವುದಕ್ಕೂ ಹೆದರುವುದಿಲ್ಲ ಆದರೆ ಮರ್ಯಾದೆಗೆ ಹೆದರುತ್ತಾರೆ ಎಂಬ ದುರುದ್ದೇಶದಿಂದ ಚಿತ್ರದುರ್ಗದ ಮುರುಘಾ ಶರಣರ ವಿರುದ್ಧ ಪಿತೂರಿ ಮಾಡಿ ಅವರ ಮೇಲೆ ಲೈಂಗಿಕ ದೌರ್ಜನ್ಯದ ಕೇಸು ಮಾಡಲಾಗಿದೆ ಎಂದು ಬೀದರ ಶರಣರು ಅಭಿಪ್ರಾಯಪಟ್ಟರು.

ನಗರದ ಬಸವೇಶ್ವರ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಾಡಿನಲ್ಲಿ ಶಾಂತಿ ಸೌಹಾರ್ದವನ್ನು ಸಾರುವ ಧರ್ಮವನ್ನು ಕೆಡಿಸಿ, ಮಠ ಮಾನ್ಯಗಳನ್ನು ಹತ್ತಿಕ್ಕುವ ಹುನ್ನಾರದಿಂದ ಶ್ರೀಗಳ ವಿರುದ್ಧ ಇಂಥ ನೀಚ ಆರೋಪ ಮಾಡಲಾಗಿದೆ. ಇದರಿಂದ ನಾವು ವಿಚಲಿತರಾಗುವುದಿಲ್ಲ. ನಾವು ಶ್ರೀಗಳ ಪರವಾಗಿ ಇದ್ದೇವೆ ಎಂದರು.

ಚಿತ್ರದುರ್ಗದ ಮುರುಘಾ ಶ್ರೀಗಳ ವಿರುದ್ಧ ಬಂದಿರುವ ಆರೋಪದ ವಿರುದ್ಧ ಬಸವ ಪರ ಸಂಘಟನೆಗಳಿಂದ ಮೌನ ಪ್ರತಿಭಟನೆ ಪೂಜ್ಯ ಶ್ರೀ ಬಸವಲಿಂಗ ಪಟ್ಟದ್ದೇವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಗರದ ಬಸವೇಶ್ವರ ವೃತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೂ ನಡೆಯಿತು.

ಕಪ್ಪು ಬಟ್ಟೆ ಧರಿಸಿ ಮೌನ ಪ್ರತಿಭಟನೆ ನಡೆಸಿ ಬಸವಾದಿ ಭಕ್ತರಿಂದ ಹೋರಾಟ ನಡೆಸಲಾಯಿತು. ನಮಗೆ ನ್ಯಾಯ ಬೇಕು, ಮುರುಘಾ ಶರಣರೇ ನಾವು ನಿಮ್ಮೊಂದಿಗಿದ್ದೇವೆ ಎಂಬ ಫಲಕಗಳನ್ನು ಭಕ್ತರು ಪ್ರದರ್ಶನ ಮಾಡಿದರು. ದುರುದ್ದೇಶದ ಆರೋಪದಿಂದ ಶರಣರನ್ನು  ಮುಕ್ತಗೊಳಿಸಬೇಕೆಂದು ಸರ್ಕಾರವನ್ನು ಆಗ್ರಹಿಸಲಾಯಿತು.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ವಿಶೇಷ ಅಗತ್ಯತೆಯುಳ್ಳ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರ

ಯರಗಟ್ಟಿಃ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆಯಲ್ಲಿ ೨೦೨೨-೨೩ ನೇ ಸಾಲಿನ ಯರಗಟ್ಟಿ ಹಾಗೂ ಮುರಗೋಡ ವಲಯಗಳ ವಿಕಲಚೇತನ ಮಕ್ಕಳ ಮೌಲಾಂಕನ ಶಿಬಿರ ಜರುಗಿತು. ಕಾರ‍್ಯಕ್ರಮದ...
- Advertisement -

More Articles Like This

- Advertisement -
close
error: Content is protected !!