ಸಿಂದಗಿ : ರಮಜಾನ್ ಮತ್ತು ಬಕ್ರೀದ್ ಹಬ್ಬಗಳು ಬಂದರೆ ಮುಸ್ಲಿಮ್ ಬಾಂಧವರಲ್ಲಿ ಎಲ್ಲಿಲ್ಲದ ಸಡಗರದ ಸಂಭ್ರಮ ಸಂತೋಷ ಉಕ್ಕೇರುತಿತ್ತು ಪ್ರತಿ ವರ್ಷ ಬಹಳಷ್ಷು ವಿಜೃಂಭಣೆಯಿಂದ ಆಚರಿಸುತ್ತಿದ್ದ ಹಬ್ಬಗಳು ಈ ವರ್ಷ ಕರೋನಾ ಕರಿನೆರಳಿನಿಂದ ಸರಕಾರ ನಮ್ಮೆಲ್ಲರ ಹಿತದೃಷ್ಟಿಯಿಂದ ಕಟ್ಟುನಿಟ್ಟಾಗಿ ಹಬ್ಬಹರಿದಿನಗಳು ಇಂತಿಷ್ಟೇ ಜನಸೇರಿ ಆಚರಿಸಬೇಕು ಎಂದು ಆದೇಶ ಹೊರಡಿಸಿದ್ದರಿಂದ ಕರೋನಾ ನಿಯಮ ಉಲ್ಲಂಘನೆಯಾಗದಂತೆ ಬಕ್ರೀದ್ ಹಬ್ಬವನ್ನು 50 ಜನರು ಸೇರಿ ಸರಳವಾಗಿ ಆಚರಿಸಲಾಗಿದೆ ಎಂದು ಅಂಜುಮನ್ ಕಮೀಟಿ ಅಧ್ಯಕ್ಷ ಮೈಬೂಬಸಾಬ ಕಣ್ಣಿ ಹೇಳಿದರು.
ತಾಲೂಕಿನ ಮೋರಟಗಿ ಗ್ರಾಮದಲ್ಲಿ ಬುಧವಾರ ಮುಸ್ಲಿಂ ಬಾಂಧವರು ಬಕ್ರೀದ ಹಬ್ಬದ ಪ್ರಯುಕ್ತ ಹಮ್ಮಿಕೊಂಡ ಸಾಮೂಹಿಕ ಪ್ರಾರ್ಥನೆಯಲ್ಲಿ ಮಾತನಾಡಿದ ಅವರು, ತ್ಯಾಗ ಮತ್ತು ಬಲಿದಾನದ ಸಂಕೇತವೆ ಬಕ್ರೀದ ಹಬ್ಬ ಇಂದು ನಾವೇಲ್ಲರು ಕರೋನಾ ಸಂಕಷ್ಟಕ್ಕೆ ಸಿಲುಕಿದ್ದರೂ ಕೂಡಾ ಬಡವರಿಗೆ ನಿರ್ಗತಿಕರಿಗೆ ದಾನ ಧರ್ಮ ಮಾಡಬೇಕು ಎಂದು ಸಮಾಜದ ಜನರಿಗೆ ತಿಳಿಹೇಳಿ ಹಿಂದೂ ಮತ್ತು ಮುಸ್ಲಿಮ್ ಭಾಂದವರು ಒಂದೇ ತಾಯಿಯ ಮಕ್ಕಳಂತೆ ನನ್ನ ಎಲ್ಲ ಸಮುದಾಯದ ಬಾಂಧವರು ಸಹಾಯ ಸಹಕಾರದಿಂದ ಜೀವನ ಮಾಡಬೇಕು ಎಂದರು.
ಪ್ರಾರ್ಥನೆ ಸಂದರ್ಭದಲ್ಲಿ ಹಸನಸಾಬ ಶಿರಶ್ಯಾಡ, ನಬಿಸಾಬ ಬಾಸಗಿ, ಹಸನ ಅವಟಿ, ಎಂ.ಕೆ.ಮುಲ್ಲಾ, ದಾವಲಸಾಬ್ ಮುಲ್ಲಾ, ಇನಾಯತ್ ದೊಡಮನಿ, ಅನ್ವರ ನೇದಲಗಿ ಫೀರೋಜ ಸಾತಖೇಡ, ಶಾಬೂದ್ದೀನ ಗೋಗಾಡಿ, ಮಹಮದಸಾಬ ಶಾಬಾದಿ, ಇಬ್ರಾಹಿಮ ಭಾಸಗಿ, ರಫೀಕ ಮುಡ್ಡಿ, ಫಾರೂಕ,ಸಲೀಮ ಕಣ್ಣಿ, ಸೌದಾಗರ, ಕಾಶೀಮ ಗೊರಗುಂಡಗಿ, ಸಲೀಮ ಹಣಗಿಕಟ್ಟಿ ಸೇರಿದಂತೆ ಹಲವರು ಇದ್ದರು.