spot_img
spot_img

ಸಿಂದಗಿ: ಅಲ್ಲಲ್ಲಿ ಸಂಭ್ರಮದ ಧ್ವಜಾರೋಹಣ

Must Read

spot_img

ಸಿಂದಗಿ: ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಭವನದ ಆವರಣದಲ್ಲಿ ತಾಲೂಕು ಗೌರವ ಸಲಹೆಗಾರ ಅಶೋಕ ಗಾಯಕವಾಡ ವಕೀಲರು 75ನೇ ಸ್ವಾತಂತ್ರೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಹಲವಾರು ಗಣ್ಯ ಮಹನೀಯರು ಗಳಿಸಿಕೊಟ್ಟ ಸ್ವಾತಂತ್ರ್ಯವನ್ನು ಉಳಿಸಿ-ಬೆಳೆಸಿಕೊಂಡು ಹೋಗುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ರಾಜೇಶೇಖರ ಕೂಚಬಾಳ, ಮಾಧ್ಯಮ ಪ್ರತಿನಿಧಿ ಪಂಡಿತ ಯಂಪೂರೆ, ಎನ್.ಎಂ.ಚಪ್ಪರಬಂದ, ಶಿವು ಬಡಾನವರ, ಖಾದರಬಾಷಾ ಬಂದಾಳ ಸೇರಿದಂತೆ ಅನೇಕರಿದ್ದರು.

ಎಚ್.ಜಿ.ಪಪೂ ಕಾಲೇಜು:

ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ಎಚ್.ಜಿ.ಪಪೂ ಕಾಲೇಜಿನಲ್ಲಿ ಹಮ್ಮಿಕೊಂಡಿರುವ 75ನೇ ಸ್ವಾತಂತ್ರೋತ್ಸವದ ಧ್ವಜಾರೋಹಣವನ್ನು ಚೇರಮನ್ ಅಶೋಕ ಮನಗೂಳಿ ನೇರವೇರಿಸಿದರು.

ಈ ಸಂಧರ್ಭದಲ್ಲಿ 2022-23 ನೇ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ ಹಾಗೂ ದ್ವೀತಿಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಕಾಲೇಜಿನ ಪ್ರಥಮ, ದ್ವಿತೀಯ ಸ್ಥಾನ ಬಂದಿರುವ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ನಿರ್ದೇಶಕ ಶಿವಪ್ಪಗೌಡ ಬಿರಾದಾರ ಸಂಸ್ಥೆಯ ಕಾರ್ಯದರ್ಶಿ ಬಿ.ಎಸ್.ಪಾಟೀಲ(ಡಂಬಳ) ಹಾಗೂ ವಿವಿಧ ಅಂಗಸಂಸ್ಥೆಗಳ ಪ್ರಾಚಾರ್ಯರಾದ ಡಾ.ಎ.ಬಿ.ಸಿಂದಗಿ, ಪ್ರಾಚಾರ್ಯ ಎ.ಆರ್.ಹೆಗ್ಗಣದೊಡ್ಡಿ, ಎನ್.ವಿ.ಆಲಗೂರ. ಎಸ್.ವಾಯ್.ಮೇಲಿನಮನಿ, ಪ್ರೊ: ಎಂ.ಎಸ್.ಕಿರಣಗಿ, ಆರ್.ವಾಯ್.ಪರೀಟ್ ವೇದಿಕೆ ಮೇಲೆ ಉಪಸ್ಥಿತರಿದ್ದರು.

ತಾಪಂ ಸಿಂದಗಿ- ಪಟ್ಟಣದ ತಾಪಂ ಕಛೇರಿಯಲ್ಲಿ ತಾಪಂ ಇಓ ಬಾಬು ರಾಠೋಡ ಅವರು ಧ್ವಜಾರೋಹಣ ನೇರವೇರಿಸಿದರು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ 75ನೇ ಅಮೃತ ಮಹೋತ್ಸವವನ್ನು ಎಪಿಎಂಸಿ ಕಾರ್ಯದರ್ಶಿ ಬಿ.ಎಲ್ ಜುಮನಾಳ ಧ್ವಜಾರೋಹಣವನ್ನು ನೆರವೇರಿಸಿದರು. ವರ್ತಕರುಗಳು ಮತ್ತು ಸಮಿತಿಯ ಸಿಬ್ಬಂದಿ ವರ್ಗದವರು ಹಾಜರಿದ್ದರು.

ಸಂಗಮೇಶ್ವರ ಫಾರ್ಮಶಿ:

ಪಟ್ಟಣದ ಸಂಗಮೇಶ್ವರ ಫಾರ್ಮಸಿ ಹಾಗೂ ಕಾವ್ಯ ಸಮೂಹ ಮಾದ್ಯಮ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಿವೃತ್ತ ಪ್ರಾಧ್ಯಾಪಕ ಪಿ.ಎಂ.ಮಡಿವಾಳರ ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಚಂದ್ರಕಾಂತ ನಾಗರಬೆಟ್ಟ, ಕಾರ್ಯದರ್ಶಿ ಕಾಮಚನಾ ನಾಗರಬೆಟ್ಟ, ಪತ್ರಕರ್ತರ ಸಂಘದ ಅಧ್ಯಕ್ಷ ಆನಂದ ಶಾಬಾದಿ, ಉಪಾಧ್ಯಕ್ಷ ಮಲ್ಲಿಕಾರ್ಜೂನ ಅಲ್ಲಾಪುರ, ಪತ್ರಕರ್ತರಾದ ಪಂಡಿತ ಯಂಪೂರೆ, ಸಲೀಮ್‍ಪಟೇಲ ಮರ್ತೂರ, ಆರೀಫ ಅಂತರಗಂಗಿ, ಬೋಜರಾಜ ದೇಸಾಯಿ, ಸುದರ್ಶನ ಜಿಂಗಾಣಿ ಸೇರಿದಂತೆ ಅನೇಕರಿದ್ದರು.

ಸರಕಾರಿ ಆದರ್ಶ ವಿದ್ಯಾಲಯ:

ಪಟ್ಟಣದ ಸರಕಾರಿ ಆದರ್ಶ ವಿದ್ಯಾಲಯದ ಆವರಣದಲ್ಲಿ ಎಸ್‍ಡಿಎಂಸಿ ಅಧ್ಯಕ್ಷ ರವಿ ಬಮ್ಮಣ್ಣಿ 75ನೇ ಸ್ವಾತಂತ್ರ್ಯೋತ್ಸವದ ಧ್ವಜಾರೊಹಣ ನೇರವೇರಿಸಿದರು.

ಈ ಸಂದರ್ಭದಲ್ಲಿ ಪ್ರಭಾರಿ ಮುಖ್ಯೋಪಾಧ್ಯಾಯ ರಮೇಶ ಚಟ್ಟರಕಿ,ಎಸ್‍ಡಿಎಂಸಿ ಉಪಾಧ್ಯಕ್ಷೆ ಬೀಬಿ ಪಾತೀಮಾ ಯಾಳಗಿ, ಶ್ರೀಶೈಲ ಕಡಣಿ, ಸಲೀಮ್ ನದಾಫ್, ಜಯಶ್ರೀ ತಳವಾರ, ದುದ್ದನಿ, ಅಬ್ದುಲ್‍ಖರೀಮ ಮಕಾನದಾರ ಸೇರಿದಂತೆ ಸಿಬ್ಬಂದಿ ಇದ್ದರು.

- Advertisement -
- Advertisement -

Latest News

ಪಂಚಮಸಾಲಿ ಸಮಾಜದ ಹೋರಾಟಕ್ಕೆ ಬೆಂಬಲ ಘೋಷಿಸಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಹೋರಾಟಕ್ಕೆ ಸಹಕಾರ ಘೋಷಣೆ ಮೂಡಲಗಿ: ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!