ಸಿಂದಗಿ: ರಾಜ್ಯ ಸರ್ಕಾರ ಜೈನ ಮುನಿಗಳಿಗೆ ಸೂಕ್ತ ಭದ್ರತೆ ಹಾಗೂ ರಕ್ಷಣೆ ನೀಡಬೇಕೆಂದು ತಾಲೂಕು ಸಕಲ ಜೈನ ಸಮಾಜದ ವತಿಯಿಂದ ತಾಲೂಕು ದಂಡಾಧಿಕಾರಿ ನಿಂಗಣ್ಣ ಬಿರಾದಾರ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಎನ್.ಆರ್.ಪೋರವಾಲ ಮಾತನಾಡಿ, ಚಿಕ್ಕೋಡಿಯಲ್ಲಿ ಜೈನ ಮುನಿಗಳನ್ನು ಅಮಾನವೀಯವಾಗಿ ಕೊಲೆ ಮಾಡಿದ್ದು ಖಂಡನೀಯ, ಜೀವಿಸು ಜೀವಿಸಲು ಬಿಡಿ ಎಂಬ ಧೇಯದೊಂದಿಗೆ ಜೈನ ಧರ್ಮ ಜನಾಂಗ ಬದುಕುತ್ತಿದೆ. ಈಗ ನಮ್ಮ ಸಮಾಜದ ಕಾಮಕುಮಾರ ನಂದಿ ಮಹಾರಾಜರನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಜೈನ ಸಮಾಜವು ಭಯದ ಬೀತಿಯಲ್ಲಿದೆ. ಕಾರಣ ನಮ್ಮ ಸಮುದಾಯದ ಮುನಿಗಳು, ಮಾತಾಜಿಯವರಿಗೆ ರಾಜ್ಯ ಸರ್ಕಾರ ಸೂಕ್ತ ಭದ್ರತೆ ಮತ್ತು ರಕ್ಷಣೆಯನ್ನು ನೀಡಬೇಕು ಮತ್ತು ಮುನಿಗಳ ಹತ್ಯೆಯ ಕುರಿತು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಾನೂನಾತ್ಮಕ ಶಿಕ್ಷೆಗೆ ಗುರಿ ಪಡಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಅಭಯ ಕಾಗಿ, ಮೋಹಿತ ಜೈನ್, ಡಿ.ಪಿ.ಶೆಟ್ಟಿ, ಜಿನೇಂದರ ಮಳ್ಳಿ, ನಾಗಪ್ಪ ಮಳ್ಳಿ, ಭರಮಣ್ಣ ಸುರಪುರ, ಬಾಹುಬಲಿ ಮಳ್ಳಿ, ಹೇಮಾ ಕಾಸರ, ಜಗದೀಶ ಭೋಗಾರ, ವಿ.ಡಿ.ಪಾಟೀಲ, ಸಿದ್ದರಾಯ ಒಣಕುದರಿ, ಪ್ರವೀಣ, ಸಂಪತ್, ಬಾಹುಬಲಿ ಒಣಕುದರಿ, ಪಾಶ್ವನಾಥ ಕಾಸದ, ಪುಷ್ಪ ಪೋರವಾಲ, ಅಖೀಲ ಪೋರವಾಲ, ಕಿರಣ ಪೋರವಾಲ, ಭರತೇಶ ಧನಪಾಲ ಸೇರಿದಂತೆ ಅನೇಕರಿದ್ದರು.