ಸಿಂದಗಿ ಬಸ್ ನಿಲ್ದಾಣಕ್ಕೆ ಚೆನ್ನವೀರ ಶ್ರೀಗಳ ನಾಮಕರಣ – ಶಾಸಕ ಮನಗೂಳಿ

0
82

ಸಿಂದಗಿ-  ಏ.೮ ರಂದು ಸಿಂದಗಿ ಬಸ್ ನಿಲ್ದಾಣಕ್ಕೆ ಸಾರಂಗಮಠದ ಲಿಂ. ಪೂಜ್ಯ ಶ್ರೀ ಚೆನ್ನವೀರ ಸ್ವಾಮಿಗಳ ಬಸ್ ನಿಲ್ದಾಣವೆಂದು ನಾಮಕರಣ ಮಾಡಲು ಮತ್ತು ಕೆಎಸ್‌ಆರ್‌ಟಿಸಿ ಸಿಬ್ಬಂದಿಗಳಿಗೆ ೧೩ ವಸತಿ ಗೃಹಗಳ ಲೋಕಾರ್ಪಣೆಗೆ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರು ಮಧ್ಯಾಹ್ನ ೧ ಗಂಟೆಗೆ ಸಿಂದಗಿ ನಗರಕ್ಕೆ ಆಗಮಿಸಲಿದ್ದಾರೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

ಅವರು ಸೋಮವಾರ ಪಟ್ಟಣದ ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸಿಂದಗಿ ಸಾರಂಗಮಠದ ಪೂಜ್ಯ ಶ್ರೀ ಲಿಂ. ಕಾಯಕಯೋಗಿ, ಶಿಕ್ಷಣಪ್ರೇಣಿ,ಲಿಂ.ಚೆನ್ನವೀರ ಮಹಾಸ್ವಾಮಿಗಳು, ಕೃಷಿಕರು, ಬಡಜನತೆಯ ಕಲ್ಯಾಣವನ್ನು ಬಯಸಿದರು. ಸಿಂದಗಿ ಅಭಿವೃದ್ದಿಯಾಗಬೇಕು ಎನ್ನುವ ದೃಷ್ಠಿಯಲ್ಲಿ ಸಿಂದಗಿಯಲ್ಲಿ ಬಸ್ ನಿಲ್ದಾಣ ಮಾಡಲು ಯಾವ ಫಲಾಪೇಕ್ಷೇ ಇಲ್ಲದೆ ಜನತೆಗೆ ಒಳಿತು ಆಗಲೆಂಬ ಉದ್ದೇಶದಿಂದ ಮತ್ತು ಸಾರ್ವಜನಿಕರ ಕಲ್ಯಾಣಕ್ಕಾಗಿ ತಮ್ಮ ಮಠದ ಆಸ್ತಿ ಸುಮಾರು ೨ ಎಕರೆ ಜಮಿನನ್ನು ೧೯೫೨ ರಲ್ಲಿ ಬಸ್ ನಿಲ್ದಾಣಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಇದು ಅವರು ಸಾಮಾಜಿಕ ಸೇವೆ ಇವತ್ತು ಅಂತವರನ್ನು ನಾವು ಸ್ಮರಣಿಸಬೇಕು. ತ್ಯಾಗಿ ಜೀವಿಗಳಾದ ಶ್ರೀಗಳು ಬಡತನವನ್ನು ಅನುಭವಿಸಿದಂತವರು, ಕೃಷಿಯನ್ನು ನಂಬಿದAತವರು ಬಡವರರ ಮತ್ತು ಹಿಂದುಳಿದವರ ಬಗ್ಗೆ ಅಪಾರ ಕಾಳಜಿ ವಹಿಸಿದಂತವರು ಈ ಭಾಗದ ಮಕ್ಕಳು ಶಿಕ್ಷಣದಿಂದ ವಂಚಿತವಾಗಬಾರದು ಎಂಬ ಉದ್ದೇಶದಿಂದ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭ ಮಾಡಿ ಅನೇಕ ಬಡ ವಿದ್ಯಾರ್ಥಿಗಳಿಗೆ ಆಶ್ರಯದಾತರಾದವರು. ೧೯೫೨ ರಿಂದ ಅನೇಕ ಜನಪ್ರತಿನಿಧಿಗಳು ಮತ್ತು ಅನೇಕ ಸರ್ಕಾರಗಳು ಪ್ರಯತ್ನ ಪಟ್ಟರು ಅದು ಕಾರ್ಯರೂಪಕ್ಕೆ ಬಂದಿಲ್ಲ ಪೂಜ್ಯರ ಹೆಸರನ್ನು ಬಸನಿಲ್ದಾಣಕ್ಕೆ ಇಡಲು ಮಾಡಿಲ್ಲ ಆದರೆ ಈಗಿನ ಸರ್ಕಾರಕ್ಕೆ ನಾನು ಮನವಿ ಮಾಡಿ ಸಾರಿಗೆ ಸಚಿವರನ್ನು ಮತ್ತು ಸಂಬಂಧಿಸಿದ ಅಧಿಕಾರಿಗಳನ್ನು ಭೇಟಿ ಮಾಡಿ ಪೂಜ್ಯರ ಕಾರ್ಯ ವೈಖರಿಯ ಬಗ್ಗೆ ತಿಳಿ ಹೇಳಿದಾಗ  ರಾಜ್ಯ ಸರ್ಕಾರ ನಮ್ಮ ಮನವಿಗೆ ಬಹು ಬೇಗ ಸ್ಪಂದಿಸಿ ಪೂಜ್ಯರ ಹೆಸರನ್ನು ಸಿಂದಗಿ ಬಸ್ ನಿಲ್ದಾಣಕ್ಕೆ ಇಡಲು ಸರ್ಕಾರದಿಂದ ಅನುಮತಿ ದೊರತಿದೆ. ಆ ಹಿನ್ನೆಲೆಯಲ್ಲಿ ಏ.೮ ರಂದು ಮಧ್ಯಾನ್ಹ ೧.೦೦ ಗಂಟೆಗೆ ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ ಅವರು ಸಿಂದಗಿ ಬಸ್ ನಿಲ್ದಾಣಕ್ಕೆ ಪೂಜ್ಯ ಶ್ರೀ ಚೆನ್ನವೀರ ಮಹಾಸ್ವಾಮಿಗಳ ಬಸ್ ನಿಲ್ದಾಣವೆಂದು ನಾಮಕರಣ ಮಾಡಲು ಆಗಮಿಸುತ್ತಿದ್ದಾರೆ ತಾವೆಲ್ಲ ಆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದ್ದಾರೆ.

ಪತ್ರಿಕಾ ಗೋಷ್ಠಿಯಲ್ಲಿ ಮಾಜಿ ಜಿಪಂ ಸದಸ್ಯ ಮಹಾಂತಗೌಡ ಪಾಟೀಲ, ಬ್ಲಾಕ್ ಅಧ್ಯಕ್ಷ ಸುರೇಶ ಪೂಜಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ ಮಳಲಿ, ಕೆಡಿಪಿ ಸದಸ್ಯ ನೂರಅಹ್ಮದ ಅತ್ತಾರ, ರಾಜಶೇಖರ ಕೂಚಬಾಳ ಸೇರಿದಂತೆ ಇತರರು ಇದ್ದರು.

LEAVE A REPLY

Please enter your comment!
Please enter your name here