spot_img
spot_img

ಸಿಂದಗಿ: ಮಕ್ಕಳ ವಿಶೇಷ ಗ್ರಾಮ ಸಭೆ

Must Read

spot_img
- Advertisement -

ಸಿಂದಗಿ; ಸರಕಾರಿ ಶಾಲೆಯ ಮಕ್ಕಳು  ಗುಣಮಟ್ಟದ ಶಿಕ್ಷಣ ಪಡೆಯಬೇಕೆಂದರೆ ಶಿಕ್ಷಕರು, ಪಾಲಕರು ಮತ್ತು ಪಂಚಾಯಿತಿ ಅಧಿಕಾರಿಗಳ ಪಾತ್ರ ಬಹಳ ಮುಖ್ಯ ಎಂದು    ಸಂಗಮ ಸಂಸ್ಥೆ ಸಹ ನಿರ್ದೇಶಕರಾದ ಸಿಸ್ಟರ್ ಸಿಂತಿಯಾ ಹೇಳಿದರು.

ತಾಲೂಕಿನ ಕೊಕಟನೂರ ಗ್ರಾಮದಲ್ಲಿ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರ, ಸಿಂದಗಿ ಹಾಗೂ ಗ್ರಾಮ ಪಂಚಾಯತಿ ಕೊಕಟನೂರ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಮಕ್ಕಳ ವಿಶೇಷ ಗ್ರಾಮ ಸಭೆಯಲ್ಲಿ ಮಾತನಾಡಿ, 2006ರಲ್ಲಿ ವಿಶ್ವ ಸಂಸ್ಥೆ ಗ್ರಾಮ ಸಭೆ ನಡೆಸಲು ಒತ್ತು ನೀಡಿತು. ಕಾರ್ಯಕ್ರಮದಲ್ಲಿ ಮಕ್ಕಳ ಹಕ್ಕುಗಳ ಕುರಿತು ಮಾಹಿತಿ ನೀಡಿ, ಇದರ ಜೊತೆಗೆ ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿ ಪೆಟ್ಟಿಗೆ ಇಡುವುದು ಮತ್ತು ಕಾಲಾನುಕಾಲಕ್ಕೆ ಅದರಲ್ಲಿ ಇದ್ದ ಮಕ್ಕಳ ಬೇಡಿಕೆಗಳು ಹಾಗೂ ಸಮಸ್ಯೆಗಳನ್ನು ಬಗೆಹರಿಸುವುದು, ಪೌಷ್ಠಿಕ ಆಹಾರ, ಶಾಲಾ ದಾಖಲಾತಿ, ಬಾಲ್ಯ ವಿವಾಹ ಪ್ರಕರಣಗಳು, ಹೆಣ್ಣು ಮಕ್ಕಳ ಶಿಕ್ಷಣ, ಮಕ್ಕಳ ಜೀತ ಪದ್ಧತಿ ಮುಕ್ತತೆ, ಮಕ್ಕಳ ಸಂರಕ್ಷಣೆ, ಶಾಲೆ ಬಿಟ್ಟ ಮಕ್ಕಳ ವಿವರ, ಹೆಣ್ಣು ಮಕ್ಕಳ ಶಿಕ್ಷಣದ ಪ್ರಮಾಣ, ಬಾಲ್ಯ ವಿವಾಹ ಪ್ರಕರಣಗಳು, ಮಕ್ಕಳ ಹಕ್ಕುಗಳ ಕ್ಲಬ್, ಮಕ್ಕಳ ಸುರಕ್ಷತಾ ಸಮಿತಿ, ವಲಸೆ ಹೋಗುವ ಮಕ್ಕಳ ಸಂಖ್ಯೆ, ಕೂಲಿ ಕೆಲಸ ಮಾಡುವ ಮಕ್ಕಳ ವಿವರ, 6 ವರ್ಷದೊಳಗಿನ ಮಕ್ಕಳಿಗೆ 100% ಚುಚ್ಚುಮದ್ದು ನೀಡಿದ ವಿವರ ಮತ್ತು 3 ರಿಂದ 6 ವರ್ಷದೊಳಗಿನ ಮಕ್ಕಳು ಅಂಗನವಾಡಿ ಕೇಂದ್ರಗಳಿಗೆ ಹೋಗುವ ವಿವರಗಳನ್ನು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಮಕ್ಕಳ ಗ್ರಾಮ ಸಭೆಯಲ್ಲಿ ಮಾಹಿತಿ ತೆಗೆದುಕೊಂಡು ಸಮಸ್ಯೆಗಳು ಇದ್ದಲ್ಲಿ ಅವುಗಳನ್ನು ಸರಿಪಡಿಸಬೇಕು ಎಂದರು.

ಮಕ್ಕಳ ಬೇಡಿಕೆಗಳು ಸರಕಾರಿ ಉರ್ದು ಶಾಲೆ ಕೊಕಟನೂರ-ಶುದ್ದ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ಅಡುಗೆ ಕೋಣೆ, ಆಟದ ಮೈದಾನ, ಪ್ರೌಢಶಾಲೆ ಹಾಗೂ ಕಂಪೌಂಡ್. ಸರಕಾರಿ ಪ್ರೌಢ ಶಾಲೆ ಕೊಕಟನೂರ ಮಕ್ಕಳ ಬೇಡಿಕೆಗಳು ಕಂಪೌಂಡ್, ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಕೊಕಟನೂರ- ಮಕ್ಕಳ ಬೇಡಿಕೆಗಳು- ಕಂಪೌಂಡ್, ಅಡುಗೆ ಕೋಣೆ, ಶುದ್ದ ಕುಡಿಯುವ ನೀರಿನ ವ್ಯವಸ್ಥೆ, ಕೊಠಡಿಗಳ ಮೇಲ್ಚಾವಣಿ ರಿಪೇರಿ ಮತ್ತು ಶೌಚಾಲಯ. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ  ಕೊಕಟನೂರ- ಮಕ್ಕಳ ಬೇಡಿಕೆಗಳು ಶುದ್ದ ಕುಡಿಯುವ ನೀರಿನ ವ್ಯವಸ್ಥೆ, ಕೊಠಡಿ ಮೇಲ್ಚಾವಣಿ ರಿಪೇರಿ, ಶಾಲಾ ಅವರಣದ ಒಳಗೆ ಮದ್ಯಪಾನ ಮಾಡುವುದನ್ನು ತಡೆಗಟ್ಟುವುದು ಹಾಗೂ ಅಡುಗೆಕೋಣೆ ಈ ಎಲ್ಲಾ ವ್ಯವಸ್ಥೆಗಳನ್ನು ಶೀಘ್ರದಲ್ಲಿ ಮಾಡಿಕೊಡಬೇಕಾಗಿ ಮಕ್ಕಳು ಪಂಚಾಯತಿ ಕಾರ್ಯದರ್ಶಿಯವರಿಗೆ ಬೇಡಿಕೊಂಡರು. 

- Advertisement -

ಗ್ರಾಮ ಪಂಚಾಯತ್ ಕಾರ್ಯದರ್ಶಿ ಶಿವುಕುಮಾರ ಮಠರವರು ಮೇಲಿನ ಎಲ್ಲಾ ಮಕ್ಕಳ ಬೇಡಿಕೆಗಳು ಅತ್ಯವಶ್ಯಕವಾಗಿದ್ದು ಆದಷ್ಟು ಬೇಗ ಬಗೆಹರಿಸಲು ಪ್ರಯತ್ನಿಸುವುದಾಗಿ ತಿಳಿಸಿದರು. 

ಕಾರ್ಯಕ್ರಮದಲ್ಲಿ ಸಭೆಯ ಅಧ್ಯಕ್ಷತೆ ವಹಿಸಿದ ಸರಕಾರಿ ಹಿರಿಯ ಪ್ಯಾಥಮಿಕ  ಶಾಲೆಯ ಪ್ರಧಾನಮಂತ್ರಿ ಕುಮಾರಿ ಪ್ರೀಯಾಂಕ ಡೋಣೂರ ವಿಕಾಸ ಕೋರಬು 8ನೇ ತರಗತಿ, ಮುಖ್ಯ ಅತಿಥಿಗಳು ಕುಮಾರಿ ವಿದ್ಯಾಶ್ರೀ ಜಾಲವಾದಿ 8ನೇ ತರಗತಿ, ಕುಮಾರಿ ಮುಸ್ಕಾನ ಮುಲ್ಲಾ 8ನೇ ತರಗತಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪೈಗಂಬರ್ ಮುಲ್ಲಾ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಕಟನೂರ ಮುಖ್ಯ ಗುರುಗಳು ಎಸ್.ಎಸ್.ರಾಂಪೂರ ಮತ್ತು ಶಿಕ್ಷಕ ವರ್ಗ, ಸರಕಾರಿ ಪೌಢ ಶಾಲೆ ಕೊಕಟನೂರ ಮುಖ್ಯ ಗುರುಗಳು ಎಮ್.ಎಮ್ ಮೋಯಿನ್ ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದರು. 

ಶಿಕ್ಷಕ ಬಸವರಾಜ ಕನೊಳ್ಳಿ ನಿರೂಪಿಸಿದರು, ಎಸ್.ಎಸ್.ಕುಸರಿ ಸ್ವಾಗತಿಸಿದರು ಹಾಗೂ ಸಂಗಮ ಸಂಸ್ಥೆಯ ಕಾರ್ಯಕರ್ತ ರಾಜೀವ ಕುರಿಮನಿ ವಂದಿಸಿದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

10ರಂದು ಅಬ್ಬಿಗೇರಿ ದಂಪತಿಯ 15 ಕೃತಿ ಲೋಕಾರ್ಪಣೆ

ಬೆಳಗಾವಿ: ಜಿಲ್ಲಾ ಲೇಖಕಿಯರ ಸಂಘ ಬೆಳಗಾವಿ ಹಾಗೂ ಲೋಕವಿದ್ಯಾ ಪ್ರಕಾಶನ ಸಂಕೇಶ್ವರ ಇವರ ಸಂಯುಕ್ತ ಆಶ್ರಯದಲ್ಲಿ ಉಪನ್ಯಾಸಕಿ, ಲೇಖಕಿ ಜಯಶ್ರೀ ಮತ್ತು ಜಯಪ್ರಕಾಶ ಅಬ್ಬಿಗೇರಿ ದಂಪತಿಗಳ...
- Advertisement -

More Articles Like This

- Advertisement -
close
error: Content is protected !!
Join WhatsApp Group