spot_img
spot_img

ಸಿಂದಗಿ – ತಾಲೂಕಾಸ್ಪತ್ರೆಯಲ್ಲಿ ಕುಡಿಯು ನೀರಿನ ಸಮಸ್ಯೆ

Must Read

ಶಿಕ್ಷೆಗೆ ಗುರಿ ಪಡಿಸುವುದು ಪರಿಹಾರವಲ್ಲ ; ಅದನ್ನು ತಿದ್ದಿಕೊಳ್ಳುವುದು ಮುಖ್ಯ.

ದಾಖಲೆಗಳು ಸುಟ್ಟು ಹೋಗಿವೆ ಎನ್ನುವುದು ಉತ್ತರವಲ್ಲ. ಅದಕ್ಕೊಂದು ಪರ್ಯಾಯ ವ್ಯವಸ್ಥೆ ಬೇಕು.

ಸಿಂದಗಿ: ತಹಶೀಲ್ದಾರ ಕಛೇರಿ ಆವರಣದಲ್ಲಿ ಮಹಿಳೆಯರಿಗೆ ಹಾಗೂ ಸಾರ್ವಜನಿಕರಿಗೆ ಶೌಚಾಲಯದ ಸಮಸ್ಯೆಯಿದೆ ಎನ್ನುವ ಸಾರ್ವಜನಿಕರ ಅಹವಾಲು ಇದ್ದು ಒಬ್ಬ ತಹಶೀಲ್ದಾರ ಆಗಿ ಪುರಸಭೆಯಿಂದ ನಿರ್ಮಿಸಿದ ಶೌಚಾಲಯ ಪ್ರಾರಂಭಿಸಲು ಆಗುತ್ತಿಲ್ಲ ಎಂದರೆ ನಾಚಿಕೆ ಬರಬೇಕು ಎಂದು ಜಿಲ್ಲಾಧಿಕಾರಿ ಡಾ. ಮಹಾಂತೇಶ ದಾಮಣ್ಣವರ ತಹಶೀಲ್ದಾರರನ್ನು ತರಾಟೆಗೆ ತೆಗೆದುಕೊಂಡರು.

ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಪ್ರತಿ ಮಂಗಳವಾರ ತಾಲೂಕಿನ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಅವುಗಳ ಇತ್ಯರ್ಥಕ್ಕಾಗಿ ಕ್ರಮ ಜರುಗಿಸುವಂತೆ ಸರಕಾರದ ಆದೇಶದನ್ವಯ ಸಾರ್ವಜನಿಕರಿಂದ ಬಂದ 23 ಅಹವಾಲುಗಳನ್ನು ಸ್ವೀಕರಿಸಿ ಪತ್ರಕರ್ತರೊಂದಿಗೆ ಮಾತನಾಡಿ, ಪಟ್ಟಣದಲ್ಲಿ ಎಲ್ಲೆಂದರಲ್ಲಿ ಮಲೀನ ನೀರು ಹರಿಯುತ್ತಿರುವುದರಿಂದ ತಗ್ಗು ಗುಂಡಿಗಳಲ್ಲಿ ನೀರು ನಿಂತು ರೋಗ ರುಜಿನಗಳಿಗೆ ಆಹ್ವಾನ ನೀಡುತ್ತಿವೆ ಎಂದು ಅಧಿಕಾರಿಗಳ ಮೇಲೆ ಸಾರ್ವಜನಿಕರು ದೂರುತ್ತಿದ್ದು ಅದನ್ನು ಒಬ್ಬ ತಹಶೀಲ್ದಾರರಾಗಿ ಪುರಸಭೆ ಅಧಿಕಾರಿಗಳಿಗೆ ನೋಟೀಸ ನೀಡಿ ಸರಿಪಡಿಸಬೇಕಲ್ಲವೇ ಕೂಡಲೇ ಕ್ರಮ ಜರುಗಿಸಿ ಎಂದರು.

ರೈತರ ಜಮೀನುಗಳಿಗೆ ಹೋಗಲು ದಾರಿಯ ಸಮಸ್ಯೆ ಹಾಗೂ ಸರಕಾರಿ ಶಾಲಾ ಶಿಕ್ಷಕರ ಕೊರತೆ ಬಹಳಷ್ಟಿದ್ದು ಅದನ್ನು ಸರಕಾರ ಮಟ್ಟದಲ್ಲಿ ಚರ್ಚಿಸಿ ಇತ್ಯರ್ಥಕ್ಕೆ ಕ್ರಮ ಜರುಗಿಸಲಾಗುವುದು. ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಬರುವ 842/1/2 ರ 21 ಎಕರೆ ಜಮೀನು ಭೂಸ್ವಾಧೀನ ಪಡಿಸಿಕೊಂಡು 1994 ಮತ್ತು 2003ರಲ್ಲಿ ಫಲಾನುಭವಿಗಳಿಗೆ ಮನೆ ಹಂಚಿಕೆ ಮಾಡಿದ್ದು ಅದನ್ನು ಜಮೀನಿನ ಮಾಲೀಕ ನ್ಯಾಯಾಲಯದ ಮೊರೆ ಹೋಗಿ ಜನರನ್ನು ಒಕ್ಕಲೆಬ್ಬಿಸುವ ಕೆಲಸಕ್ಕೆ ಮುಂದಾಗಿದ್ದಾನೆ ಎನ್ನುವ ಬಗ್ಗೆ ಅರ್ಜಿ ಬಂದಿದ್ದು ಸರಕಾರ ಎಲ್ಲವನ್ನು ಪರಾಮರ್ಶಿಸಿ ಭೂಸ್ವಾಧೀನ ಪಡಿಸಿ ಫಲಾನುಭವಿಗಳಿಗೆ ವಿತರಣೆ ಮಾಡುತ್ತದೆ ನ್ಯಾಯಾಲಯದಲ್ಲಿ ಮಾಲೀಕನಂತೆ ಆದೇಶವಾಗಿದ್ದನ್ನು ಕೂಡಲೇ ಪರಿಶೀಲನೆ ನಡೆಸಿ ಕ್ರಮ ಜರುಗಿಸಿ ಎಂದು ಸೂಚಿಸಿದರು.

ಹಾರಿಕೆ ಉತ್ತರ ಬೇಡ; ತಾಲೂಕಿನ ವಿದ್ಯಾರ್ಥಿಗಳ ಶಿಷ್ಯವೇತನದ ಬಗ್ಗೆ ಸಮಾಜ ಕಲ್ಯಾಣ ಇಲಾಖಾ ಅಧಿಕಾರಿಗಳು ಹಾರಿಕೆ ಉತ್ತರ ನೀಡಿ ಹಾಗೂ ತಪ್ಪು ಮಾಹಿತಿ ನೀಡಿ ಸಾಗ ಹಾಕುತ್ತಿದ್ದಾರೆ ಎಂದು ವಿದ್ಯಾರ್ಥಿಗಳ ದೂರಾಗಿದ್ದು ಹಾಗೆ ಮಾಡದೇ ಕಾನೂನಿನಲ್ಲಿ ಕಾನೂನಾತ್ಮಕ ಪರಿಹಾರಕ್ಕೆ ಅವಕಾಶವಿದ್ದು ಅದಕ್ಕೊಂದು ಪರಿಹಾರ ಕಂಡುಕೊಳ್ಳಿ ಎಂದು ಸಮಾಜ ಕಲ್ಯಾಣ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.

ಸರ್ವೇ ಇಲಾಖೆಯಲ್ಲಿ ಕುಂಟು ನೆಪ; ತಾಲೂಕಿನ ರೈತರಿಗೆ ಸರ್ವೇ ಇಲಾಖೆಯಲ್ಲಿ ದಾಖಲೆಗಳು ಸಿಗುತ್ತಿಲ್ಲ ಎನ್ನುವುದು ಪ್ರಶ್ನೆಯಾದರೆ. ಕಳೆದ 15 ವರ್ಷಗಳ ಹಿಂದೆ ದಾಖಲೆಗಳು ಸುಟ್ಟು ಹೋಗಿವೆ ಎನ್ನುವುದು ಉತ್ತರವಲ್ಲ ಅದಕ್ಕೆ ಪರ್ಯಾಯವಾಗಿ ಮಾರ್ಗ ಕಂಡು ಹಿಡಿಯುವುದು ಮುಖ್ಯ. ಕೂಡಲೇ ರೈತರ ದಾಖಲೆ ಸಮಸ್ಯೆಗಳಿಗೆ ಕ್ರಮ ತೆಗೆದುಕೊಳ್ಳಿ ಎಂದು ಆದೇಶ ನೀಡಿದರು.

ತಾಲೂಕಾ ಆಸ್ಪತ್ರೆ ಸಮಸ್ಯೆಗಳ ಆಗರ; ಸಣ್ಣ ಪುಟ್ಟ ಸಮಸ್ಯೆಗೂ ರೋಗಿಗಳನ್ನು ಜಿಲ್ಲಾಸ್ಪತ್ರೆಗೆ ದೂಡುವುದು ಸರಿಯಲ್ಲ. ಹೆರಿಗೆಗಾಗಿ ಜಿಲ್ಲಾಸ್ಪತ್ರೆ ತೆಗೆದುಕೊಂಡು ಹೋಗಿ ಎನ್ನುವುದು ಉತ್ತರ ನೀಡದೇ ವೈದ್ಯರು ಸರಿಯಾಗಿ ನಿತ್ಯ ಕೆಲಸಕ್ಕೆ ಹಾಜರಿದ್ದು ಕಾರ್ಯ ನಿರ್ವಹಿಸಿ ಇಲ್ಲದಿದ್ದರೆ ಮುಂದಿನ ಕ್ರಮಕ್ಕೆ ಸಿದ್ದರಾಗಿ ಎಂದು ಖಡಕ್ ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿಗಳ ನಡೆ ಗ್ರಾಮದ ಕಡೆ ಕಾರ್ಯಕ್ರಮದಲ್ಲಿ ನೀಡಿದ ಅಹವಾಲುಗಳು ಸರಿಯಾಗಿವೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿ ಆಯಾ ತಾಲೂಕು ದಂಡಾಧಿಕಾರಿಗಳ ಮೂಲಕ ಪರಿಹಾರ ಕಂಡುಕೊಳ್ಳಲಾಗುತ್ತಿದೆ. ಈ ಕಾರ್ಯಕ್ರಮ ಹುಸಿಯಾಗದು ಎಂದರು.

ಈ ಸಂದರ್ಭದಲ್ಲಿ ತಹಶೀಲ್ದಾರ ನಿಂಗಣ್ಣ ಬಿರಾದಾರ, ಆಲಮೇಲ ತಹಶೀಲ್ದಾರ ಸುರೇಶ ಚಾವಲಾರ್, ಗ್ರೇಡ್ 2 ತಹಶೀಲ್ದಾರ ಪ್ರಕಾಶ ಸಿಂದಗಿ ಇದ್ದರು.

- Advertisement -
- Advertisement -

Latest News

ಶ್ರೀ ಕೃಷ್ಣ ಜನ್ಮಾಷ್ಟಮಿ

ಸರ್ವಾಸಾಂ ಜಯಂತೀನಾಂ ಶ್ರೇಷ್ಠಾ ಕೃಷ್ಣಾಷ್ಟಮೀ ಮತಾ ಯಸ್ಮಾತ್ ಸನ್ನಿಹಿತಾತ್ಯಂತಂ ತತ್ರೈವೋಪವಸೇನ್ನರಃ ಸರ್ವಾಸ್ವಪಿ ಜಯಂತೀಷು ಪೂಜಾ ಕಾರ್ಯಾ ವಿಸೇಷತಃ ಸಾನಿಧ್ಯ ಏವ ಕರ್ತವ್ಯ ಉಪವಾಸೋ ನ ದೂರಗಃ ಎಲ್ಲ ಜಯಂತಿಗಳಲ್ಲಿಯೂ ಶ್ರೀ ಕೃಷ್ಣ...
- Advertisement -

More Articles Like This

- Advertisement -
close
error: Content is protected !!