ಸಿಂದಗಿ: ಸಿಂದಗಿ ಹಾಗೂ ಆಲಮೇಲ ತಾಲೂಕಿನ 3 ಗ್ರಾ.ಪಂ ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಬೋರಗಿ ಗ್ರಾಮದ 1ನೆಯ ವಾರ್ಡಿಗೆ ಗಂಗೂಲಿ ಕುರಬತಳ್ಳಿ 483 ಮತಗಳನ್ನು ಪಡೆದರೆ ಪ್ರತಿಸ್ಪರ್ಧಿ ವೀರೇಶ ಕೋಟಾರಗಸ್ತಿ 360 ಮತಗಳನ್ನು ಪಡೆದು ಸೋಲುಂಡಿದ್ದಾರೆ. ಕಡಣಿ ಗ್ರಾ. ಪಂ ನ ತಾರಾಪುರ ವಾರ್ಡಿಗೆ ಸ್ಪರ್ಧೆಸಿದ ಸಂತೋಷಕುಮಾರ ಬಿರಾದಾರ 378 ಮತಗಳನ್ನು ಪಡೆದು ಜಯಗಳಿಸಿದ್ದಾರೆ.
ದೇವಣಗಾವ ಗ್ರಾಪಂನ ಕಡ್ಲೇವಾಡ ಗ್ರಾಮದ ವಾರ್ಡಿಗೆ ರೂಪಾ ನಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.