spot_img
spot_img

Sindagi: ಯುವಕರಿಗೆ ಕಾನೂನು ಅರಿವು ಕಾರ್ಯಕ್ರಮ

Must Read

spot_img
- Advertisement -

ಸಿಂದಗಿ: ಜಾಸ್ತಿ ಬೈಕನ್ನು ಬಳಸುವ ಯುವಕರಲ್ಲಿ ಲ್ಯೆಸನ್ಸ್, ಇಶ್ಯೂರೆನ್ಸ್, ಆರ್.ಸಿ ಬುಕ್, ಹೆಲ್ಮೆಟ್ ಇರುವುದು ಬಹಳ ಮುಖ್ಯ ಹಾಗೂ ನಿಮ್ಮಲ್ಲಿ ಸಾಮಾನ್ಯ ಜ್ಞಾನ ಇರಬೇಕು ಎಂದು ಅನ್ವರ್ ಹುಸೇನ್ ಅಂಗಡಿ ವಕೀಲರು ಹೇಳಿದರು.

ಪಟ್ಟಣದ ಸಂಗಮ ಸಂಸ್ಥೆಯಲ್ಲಿ ಹಮ್ಮಿಕೊಂಡ ಯುವಕರಿಗೆ ಕಾನೂನು ಅರಿವು ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿ, ಯುವಕರಿಗೆ ಕೆಲಸ ಇರುವುದಿಲ್ಲ ಆದರೂ ಕೂಡ ಸಮಯವನ್ನು ವ್ಯರ್ಥ ಮಾಡದೇ ಆಟದ ಜೊತೆ ಕಾನೂನು ಕೂಡ ಗೊತ್ತಿರಬೇಕು ವಿಶೇಷವಾಗಿ ಹುಟ್ಟಿದ ತಕ್ಷಣ ನಿಮಗೆ ಕಾನೂನು ಪ್ರಾರಂಭವಾಗುತ್ತದೆ. ಜನನ ಪ್ರಮಾಣ ಪತ್ರ ತೆಗೆದುಕೊಳ್ಳುವುದು, ಸತ್ತ ಮೇಲೆ ಮರಣ ಪ್ರಮಾಣ ಪತ್ರ ತಗೆದುಕೊಳ್ಳುವುದು ಹಾಗೂ ಬದುಕಿನ ಮಧ್ಯದಲ್ಲಿ ಹಲವಾರು ಕಾನೂನುಗಳು ಇವೆ ಅವುಗಳನ್ನು ತಿಳೀದುಕೊಳ್ಳುವುದು ಅತ್ಯವಶ್ಯಕವಾಗಿದೆ ಎಂದರು.

ಸಂಗಮ ಸಂಸ್ಥೆ ನಿರ್ದೇಶಕ ಪಾದರ್ ಸಂತೋಷ ಯುವಕರನ್ನು ಉದ್ದೇಶಿಸಿ ಮಾತನಾಡಿ,  ಹಳ್ಳಿಯ ಯುವಕರು ಮುಂದೆ ಬರಬೇಕು ಮತ್ತು ಸಂಗಮ ಸಂಸ್ಥೆಯಿಂದ ಯುವಕರಿಗೆ ವಿವಿಧ ವಿಷಯಗಳ ಮಾಹಿತಿ ಕೊಡುತ್ತಾ ಬಂದಿದೆ. ಒಗ್ಗಟ್ಟಿನಲ್ಲಿ ಬಲವಿದೆ ಅಂದಂತೆ ಯುವಕರು ಸಂಘಗಳು ಮಾಡುವ ಮುಖಾಂತರ ನಿಮ್ಮ ನಿಮ್ಮ ಹಳ್ಳಿಯಲ್ಲಿ ಅಭಿವೃದ್ದಿ ಕೆಲಸಗಳನ್ನು ಮಾಡಲು ಮುಂದಾಗಬೇಕು. ಕ್ರಿಕೆಟ್ ಟೂರ್ನಮೆಂಟ್ ಆಡಲು ಉತ್ತೇಜನ ನೀಡಿದರು.

- Advertisement -

ಕಾರ್ಯಕ್ರಮದಲ್ಲಿ ರಾಂಪುರ ಎಲ್.ಟಿ ಯುವಕ ಸಂಘದ ಅಧ್ಯಕ್ಷ ಮಂಜುನಾಥ ರಾಠೋಡ, ಆಸಂಗಿಹಾಳ ಯುವಕ ಸಂಘದ ಅಧ್ಯಕ್ಷ ವಿನೋದ, ಮಲಘಾಣ ಯುವಕ ಸಂಘದ ಅಧ್ಯಕ್ಷ ಸುರೇಶ್, ಮಾಡಬಾಳ ಯುವಕ ಸಂಘದ ಅಧ್ಯಕ್ಷ ಬಿರು ಪೂಜಾರಿ, ಬೆನಕೂಟಗಿ ಯುವಕ ಸಂಘದ ಅಧ್ಯಕ್ಷ  ಸಚಿನ ಪಾಟೀಲ ಉಪಸ್ಥಿತರಿದ್ದರು. 

ಸಂಗಮ ಸಂಸ್ಥೆ ಕಾರ್ಯಕರ್ತ ರಾಜೀವ ಕುರಿಮನಿ ಸ್ವಾಗತಿಸಿದರು, ಮಲಕಪ್ಪ ಹಲಗಿ ನಿರೂಪಿಸಿದರು, ವಿಜಯ ಬಂಟನೂರು ವಂದಿಸಿದರು. ತೇಜಸ್ವಿನಿ ಹಳ್ಳದಕೇರಿ, ಬಸಮ್ಮ ಅಲ್ಲಾಪೂರ ಹಾಗೂ ಅನಿಲ್ ಹಾಜರಿದ್ದರು.

- Advertisement -
- Advertisement -

Latest News

ಯೋಗ ಸ್ಪರ್ಧಾ ವಿಜೇತರಿಗೆ ಕಡಾಡಿ ಸನ್ಮಾನ

ಮೂಡಲಗಿ: ಗ್ರಾಮೀಣ ಪ್ರದೇಶದ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಯೋಗದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ ಇಂತಹ ಪ್ರತಿಭೆಗಳು ಬೆಳಕಿಗೆ ಬಂದು ನಾಡಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group