Sindagi: ಕಾನೂನು ಅರಿವು ನೆರವು ಸಮಿತಿಯಿಂದ ಲೋಕ ಅದಾಲತ್

Must Read

ಸಿಂದಗಿ: ಯಾವುದೋ ಒಂದು ಕಾರಣಕ್ಕೆ ಸಣ್ಣ ಪುಟ್ಟ ವ್ಯಾಜ್ಯಗಳು ಕೋರ್ಟ ಮೆಟ್ಟಿಲು ಏರುವಂತೆ ಮಾಡಿ ವೈಷಮ್ಯ ಸೃಷ್ಟಿಸಿರುತ್ತವೆ ಅವುಗಳನ್ನು ಹಿರಿಯರಿಂದ ನ್ಯಾಯ ಪಂಚಾಯತಗಳ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ವರ್ಷದಲ್ಲಿ 4 ಬಾರಿ ರಾಷ್ಟ್ರೀಯ ಲೋಕ ಅದಾಲತ್ತುಗಳನ್ನು ನಡೆಸಲಾಗುತ್ತಿದೆ ಇದರಲ್ಲಿ ನಾಲ್ಕು ನ್ಯಾಯಾಲಯಗಳಲ್ಲಿ ಒಟ್ಟು 2862 ಪ್ರಕರಣಗಳು ಇತ್ಯರ್ಥವಾಗಿವೆ ಎಂದು ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರು ಹಾಗೂ ಪ್ರಧಾನ ಹಿರಿಯ ಶ್ರೇಣಿ ನ್ಯಾಯಾದೀಶ ಆಯ್.ಪಿ.ನಾಯಕ ಹೇಳಿದರು.

ಪಟ್ಟಣದ ಕಿರಿಯ ಶ್ರೇಣಿ ನ್ಯಾಯಾಲಯದಲ್ಲಿ ತಾಲೂಕು ಕಾನೂನು ಅರಿವು ನೆರವು ಸೇವಾ ಸಮಿತಿ ವತಿಯಿಂದ  ಹಮ್ಮಿಕೊಂಡ ರಾಷ್ಟ್ರೀಯ ಲೋಕ ಅದಾಲತ್ತನಲ್ಲಿ ಮಾತನಾಡಿ, ಆಸ್ತಿ ಇಬ್ಬಾಗ, ಖರೀದಿ ಕರಾರು ಪತ್ರ, ಲಘು ಅಪಘಾತ, ಚೆಕ್ ಬೌನ್ಸ ಪ್ರಕರಣ ಹಾಗೂ ಸಮಾಜದ ಮೇಲೆ ದುಷ್ಪರಿಣಾಮ ಬೀರುವಂತ ಪ್ರಕರಣ ಮತ್ತು ಬ್ಯಾಂಕುಗಳು ಗ್ರಾಹಕರ ಮೇಲೆ ಸಾಲದ ಹೊರೆಯಾದಾಗ ಅವರ ಮೇಲೆ ಪ್ರಕರಣ ದಾಖಲಿಸಿದ್ದನ್ನು ಸಾಲಗಾರರಿಗೆ ಅನುಕೂಲವಾಗುವಂತೆ ಒಂದೇ ಬಾರಿಗೆ ಹಣ ಮರುಪಾವತಿ ಮಾಡುವಂತೆ ಮನವೊಲಿಸುವದು ಸೇರಿದಂತೆ ಲಘು ಪ್ರಕರಣಗಳು ಕಕ್ಷಿದಾರರನ್ನು ಮನವೊಲಿಸಿ ರಾಜಿ ಮೂಲಕ ಇತ್ಯರ್ಥ ಪಡಿಸಿಕೊಂಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಗಂಡ-ಹೆಂಡತಿಯ ಸಂಸಾರದ ನಡುವೆ ಲೋಪವಾಗಿ ಜೀವನಾಂಶಕ್ಕಾಗಿ ಕೋರ್ಟು ಮೇಟ್ಟಿಲೇರಿದ್ದ ಇಂಡಿ ತಾಲೂಕಿನ ಸುಧಾ ರೂಗಿ (ವಯಾ 28 ವರ್ಷ )ಮಾತನಾಡಿ, ಕಳೆದ 9 ವರ್ಷಗಳ ಹಿಂದೆ ದೇವರ ಹಿಪ್ಪರಗಿಯ ಉಮೇಶ ಸೈಬಣ್ಣ ರೂಗಿ ಎಂಬಾತನಿಗೆ ಮದುವೆಯಾಗಿ ನಯನಾ ಎಂಬ ಒಂದು ಹೆಣ್ಣು ಮಗುವಿನ ತಾಯಿಯಾಗಿ 8 ವರ್ಷಗಳು ಕಳೆದರು ಕೂಡ ತನ್ನ ಅಕ್ಕ-ತಂಗಿಯರ ಮಾತಿಗೆ ಕಟ್ಟುಬಿದ್ದು ನನಗೆ 8 ವರ್ಷಗಳ ಹಿಂದೆ ಮನೆಯಿಂದ ಹೊರಗೆ ಹಾಕಿ ಡೈವರ್ಸ ಕೇಳಿ ನ್ಯಾಯಾಲಯಕ್ಕೆ ಪ್ರಕರಣ ದಾಖಲಿಸಿದ್ದನು ಅಲ್ಲದೆ ಮತ್ತೊಂದು ಹೆಣ್ಣಿನ ಜೊತೆ ಲಗ್ನವಾಗಿದ್ದಾರೆ ಅದಕ್ಕೆ ನನ್ನ ಮತ್ತು ನನ್ನ ಮಗುವಿನ ಜೀವನಾಂಶಕ್ಕೆ ಆಧಾರವಾಗಿ ಪ್ರತಿತಿಂಗಳು ಜೀವನಾಂಶ ನೀಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದು ನ್ಯಾಯಕ್ಕೆ ಕಣ್ಣಿಲ್ಲ ಎನ್ನುವಂತೆ ಅಸಹಾಯಕರಿಗೆ ನ್ಯಾಯ ದೊರಕುವುದು ಸುಲಭದ ಮಾತಲ್ಲ ಆ ಕಾರಣಕ್ಕೆ ಒಂದೇ ಕಂತಿನಲ್ಲಿ ಜೀವನಕ್ಕೆ ಹಣ ನೀಡಿದ್ದರಿಂದ ಪ್ರಕರಣದಿಂದ ಹಿಂದೆ ಸರಿದಿದ್ದೇನೆ. ಇಂತಹ ಕಷ್ಟ ಮತ್ಯಾವ ಹೆಣ್ಣಿಗೂ ಬರದಿರಲಿ ಎಂದು ಭಾವುಕಳಾಗಿ ಕಣ್ಣೊರೆಸಿಕೊಂಡಳು.  

ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ನಾಗೇಶ ಮೊಗೇರ ಅವರು 629 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ ಎಂದು ಹೇಳಿದರು.

ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯದೀಶ ಹರೀಶ ಜಾಧವ ಅವರ ನ್ಯಾಯಾಲಯದಲ್ಲಿ 895 ಪ್ರಕರಣಗಳು ಇತ್ಯರ್ಥಗೊಳಿಸಲಾಗಿದೆ ಎಂದರು.

ತಾಲೂಕು ಕಾನೂನು ಸೇವಾ ಸಮಿತಿಯ ಕಾರ್ಯದರ್ಶಿ ಮಹಾಂತೇಶ ಭೂಸಗೋಳ ಅವರ ನ್ಯಾಯಾಲಯದಲ್ಲಿ 670 ಪ್ರಕರಣಗಳು ಇತ್ಯರ್ಥವಾಗಿವೆ ಎಂದು ತಿಳಿಸಿದರು.

Latest News

ಸಿಂದಗಿ : ಕ್ರೀಡಾಕೂಟದ ಸಿದ್ಧತೆ ಪರಿಶೀಲಿಸಿದ ಶಾಸಕ ಮನಗೂಳಿ

ಸಿಂದಗಿ; ನಶಿಸಿ ಹೋಗುತ್ತಿರುವ ದೇಶಿಯ ಕ್ರೀಡೆಗಳ ಉತ್ತೇಜನಕ್ಕಾಗಿ ಶಿಕ್ಷಣ ಇಲಾಖೆಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಇದೇ ಅ. ೨೩,೨೪,೨೫ ರಂದು ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕುಸ್ತಿ...

More Articles Like This

error: Content is protected !!
Join WhatsApp Group