ಸಿಂದಗಿ: ಪಟ್ಟಣದ ಸೋಪೂರ ರಸ್ತೆಯಲ್ಲಿರುವ ಆಲಮೇಲ ಸರ್ ಮನೆಯಿಂದ ಆಶಿರ್ವಾದ ಕಲ್ಯಾಣ ಮಂಟಪದವರೆಗೆ ನಗರೋತ್ಥಾನ ಹಂತ 4ರ ಪ್ಯಾಕೇಜ್ 1ರ ರೂ.355.93 ಲಕ್ಷ, ಪ್ಯಾಕೇಜ್ 2ರ ರೂ 206.87 ಲಕ್ಷ, ಒಟ್ಟು ರೂ.562.80 ಲಕ್ಷಗಳ ವೆಚ್ಚದಲ್ಲಿ ವಿಜಯಪುರ ಮುಖ್ಯರಸ್ತೆಯಿಂದ ಚೋಟಾ ಚಾಂಪಿಯನ್‍ವರೆಗೆ ಹಾಗೂ ಶಿವರಾಯ ಹಿಪ್ಪರಗಿ ಮನೆಯಿಂದ ಗುಗ್ಗರಿ ಸರ್ ಮನೆಯವರೆಗೆ, ಬಿ.ಎಚ್.ಬಿರಾದಾರ ಮನೆಯಿಂದ ಮುರಾಗಾನೂರ ಸರ್ ಮನೆಯವರೆಗೆ ರಸ್ತೆ ಡಾಂಬರಿಕರಣ ಕಾಮಗಾರಿಗೆ ಶಾಸಕ ರಮೇಶ ಭೂಸನುರ ಅವರು ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಡಾ. ಶಾಂತವೀರ ಮನಗೂಳಿ ಮಾತನಾಡಿ, ನಗರೋತ್ತಾನ ಯೋಜನೆಯಡಿ ರೂ. 10 ಕೋಟಿ ಅನುದಾನದಲ್ಲಿ 6 ರಸ್ತೆಗಳ ಸುಧಾರಣೆ ಕಾಮಗಾರಿಗೆ ಚಾಲನೆ ಮಾಡಲಾಗಿದ್ದು ಈ ಅನುದಾನದಲ್ಲಿ ಪಟ್ಟಣದ ಸುದಾರಣೆ ಆಗಿಲ್ಲ ಕಾರಣ ಇನ್ನೂ ಹೆಚ್ಚುವರಿ ಅನುದಾನ ಪೂರೈಸಿಕೊಡುವಂತೆ ಶಾಸಕ ರಮೇಶ ಭೂಸನೂರ ಅವರಲ್ಲಿ ವಿನಂತಿಸಿದರು.
ಶಾಸಕ ರಮೇಶ ಭುಸನೂರ ಮಾತನಾಡಿ, ಪಟ್ಟಣದ ಡಾ. ಅಂಬೆಡ್ಕರ ವೃತ್ತದಿಂದ ಡೊಹರ ಕಕ್ಕಯ್ಯ, ಕೆಇಬಿಯಿಂದ ಡಾ. ಅಂಬೆಡ್ಕರ ವೃತ್ತದವರೆಗೆ, ಟಿಪ್ಪು ಸುಲ್ತಾನ ವೃತದಿಂದ ಗಾಂದಿಜಿ ವೃತ್ತದವರೆಗೆ, ಮಲಗಾಣ ರಸ್ತೆಯಿಂದ ಜೆವರಗಿ ಬೈಪಾಸ್‍ವರೆಗೆ ರಸ್ತೆ ಕಾಮಗಾರಿಗೆ ಟೆಂಡರ ಕರೆಯಲಾಗಿದ್ದು ಇದರಲ್ಲಿ ಗಾಂಧಿಜಿ ವೃತ್ತದಿಂದ ಟಿಪ್ಪು ಸುಲ್ತಾನ ವೃತ್ತದವರೆಗೆ, ಡಾ. ಅಂಬೇಡ್ಕರ ವೃತ್ತದಿಂದ ಕೆಇಬಿವರೆಗೆ ಕಾಮಗಾರಿ ನಡೆದಿದ್ದು ಇನ್ನು ಕೆಲ ಕಾಮಗಾರಿಗಳು ಒಳಚರಂಡಿ ಕಾಮಗಾರಿ ನಡೆದಿರುವುದರಿಂದ ಕಾಮಗಾರಿಗಳ ವಿಳಂಬಕ್ಕೆ ಕಾರಣವಾಗಿದೆ ಕೆಲವೇ ದಿನಗಳಲ್ಲಿ ಅಚ್ಚುಕಟ್ಟು ರಸ್ತೆಗಳು ನಡೆಯುತ್ತವೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ, ಪುರಸಭೆ ಮುಖ್ಯಾಧಿಕಾರಿ ರಾಜೆಶ್ರೀ ತುಂಗಳ, ಉಪಾದ್ಯಕ್ಷ ಹಾಸೀಂ ಆಳಂದ, ಸದಸ್ಯರಾದ ಪ್ರತಿಭಾ ಕಲ್ಲೂರ, ರಾಜಣ್ಣಿ ನಾರಾಯಣಕರ, ಭಾಷಾಸಾಬ ತಾಂಬೋಳಿ, ಶರಣಗೌಡ ಪಾಟೀಲ, ಗೊಲ್ಲಾಳ ಬಂಕಲಗಿ, ಸಂದೀಪ ಚೌರ, ಸೇರಿದಂತೆ ಶರಣಪ್ಪ ಕುರುಡೆ, ಬಸವರಾಜ ಸಜ್ಜನ್, ಸೈಪನ್ ನಾಟೀಕಾರ, ಗುತ್ತಿಗೆದಾರ ಮುತ್ತು ಮುಂಡೆವಾಡಗಿ, ಪುರಸಭೆ ಜೆಇ ಎ.ಜೆ.ನಾಟೀಕಾರ, ಶಿವು ಬಡಿಗೆರ ಸೇರಿದಂತೆ ಹಲವರು ಇದ್ದರು.