ಸಿಂದಗಿ: ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ನಿಲುಗಡೆ ಮಾಡದೇ ಸಾರ್ವಜನಿಕರಿಗೆ ಹಾಗೂ ಶಾಲಾ ಹೆಣ್ಣು ಮಕ್ಕಳಿಗೆ ಒಳ್ಳೆಯ ಬಾಂಧವ್ಯದಿಂದ ಸೇವೆ ನೀಡುವದಲ್ಲದೆ ಪೊಲೀಸರ ಸಹಕಾರ ನೀಡಿ ನಿಮ್ಮ ಜೊತೆ ಇಲಾಖೆ ಕೈ ಜೋಡಿಸುತ್ತದೆ ಎಂದು ಸಿಪಿಐ ಡಿ.ಹುಲಗೆಪ್ಪ ಹೇಳಿದರು.
ಪಟ್ಟಣದ ಪೊಲೀಸ ಠಾಣೆಯ ಆವರಣದಲ್ಲಿ ಸಂಚಾರಿ ನಿಯಮದ ಕುರಿತು ಹಮ್ಮಿಕೊಂಡ ವಾಹನ ಚಾಲಕರ ಹಾಗೂ ಮಾಲೀಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ವಾಹನ ಚಾಲನೆ ಸಮಯದಲ್ಲಿ ಮೊಬಾಯಿಲ್ ಬಳಕೆ ಮಾಡುವದನ್ನು ನಿಷೇಧಿಸಿ ಅದರಿಂದಾಗುವ ಅನಾಹುತವನ್ನು ತಪ್ಪಿಸಿ ಸಂಚಾರ ಸಮಯದಲ್ಲಿ ಅಚಾತುರ್ಯದಿಂದ ಅಪಘಾತವಾದಲ್ಲಿ 112ಗೆ ಕರೆ ಮಾಡಿ ದೂರು ಸಲ್ಲಿಸಿ ಅಥವಾ ಖುದ್ದಾಗಿ ಪ್ರಥಮ ಚಿಕಿತ್ಸೆಗೆ ಸಹಕರಿಸಿ ಮಾನವೀಯತೆ ಮೆರೆಯಿರಿ ಪೊಲೀಸ ಇಲಾಖೆ ನಿಮ್ಮಸೇವೆಗೆ ಸದಾ ಸಿದ್ದವಾಗಿದೆ. ವಾಹನ ವಿಮೆ ಮತ್ತು ಚಾಲನಾ ಲೈಸನ್ಸ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.
ಪಿಎಸ್‍ಐ ಬೀಮಪ್ಪ ರಬಕವಿ ಮಾತನಾಡಿ, ವಾಹನ ಚಾಲಕರು ಕಡ್ಡಾಯವಾಗಿ ಸಮವಸ್ತ್ರ ಧರಿಸಬೇಕು ಅಲ್ಲದೆ ಲೈಸನ್ಸ ಮತ್ತು ವಿಮೆ ಚಾಲ್ತಿಯಲ್ಲಿಟ್ಟುಕೊಳ್ಳಿ ಅಕಸ್ಮಾತ್ತಾಗಿ ಅಪಘಾತವಾದಲ್ಲಿ ವಿಮೆಯಿಂದ ನಿಮಗೆ ಅನುಕೂಲವಾಗುತ್ತದೆ ಜಾಗೃತೆಯಿಂದ ವಾಹನ ಚಾಲನೆ ಮಾಡಿ ಅಲ್ಲದೆ ಮದ್ಯ ಸೇವನೆ ಮಾಡಿ ಚಲಿಸಬೇಡಿ, ಮೊಬಾಯಿಲ್‍ನಲ್ಲಿ ಮಾತನಾಡುತ್ತ ವಾಹನ ಚಲಿಸಬೇಡಿ ಅಂತಹ ನಿದರ್ಶನಗಳು ಕಂಡು ಬಂದರೆ ನಿರ್ದಾಕ್ಷಿಣ್ಯವಾಗಿ ದಂಡ ತೆತ್ತಬೇಕಾಗುತ್ತದೆ ಎಚ್ಚರಿಕೆಯಿಂದ ಡ್ರೈವಿಂಗ್ ಮಾಡಿ ಶಾಲಾ ಹೆಣ್ಣು ಮಕ್ಕಳ ಜೊತೆ ಸುರಕ್ಷತೆ, ಬಾಂಧವ್ಯದಿಂದ ವರ್ತನೆ ಮಾಡಿ ಸಹಕರಿಸಿ ಗ್ರಾಹಕರಿಂದಲೇ ನಿಮ್ಮ ಜೀವನ ನಡೆಯುತ್ತಿದೆ ಅವರಿಲ್ಲದೇ ನಿಮ್ಮ ಜೀವನವಿಲ್ಲ ಅದಕ್ಕೆ ಅವರ ಸುರಕ್ಷತೆಯೇ ನಿಮಗೆ ಶ್ರೀರಕ್ಷೆ ನಮ್ಮನ್ನು ಕೆಟ್ಟವರನ್ನಾಗಿ ಮಾಡಬೇಡಿ ನಾವು ನಿಮ್ಮ ಹಾಗೆ ಇದ್ದವರು ನಮಗೆ ಕೆಲಸ ಕೊಡಬೇಡಿ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಅಟೋ ಚಾಲಕರು ತಮ್ಮ ತಮ್ಮ ಸಮಸ್ಯೆಗಳನ್ನು ತೊಡಿಕೊಳ್ಳುತ್ತ ದ್ವಿಚಕ್ರ ವಾಹನಗಳು ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದು ಅವುಗಳಿಂದ ಸಂಚಾರಕ್ಕೆ ತೊಂದರೆಯಾಗುತ್ತಿದ್ದು ಅವರಿಗೆ ಕಡಿವಾಣ ಹಾಕಬೇಕು ಎಂದು ಹೇಳಿದ ಅವರು ಕೆಲ ಆಟೋ ಚಾಲಕರು ಆರ್ಥಿಕ ತೊಂದರೆಯಿಂದ ಲೈಸನ್ಸ ಹೊಂದಿಲ್ಲ ಕೆಲ ದಿನಗಳ ಕಾಲ ಅವಕಾಶ ಕಲ್ಪಿಸಿಕೊಡುವಂತೆ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ಜೆ.ಕೆ.ಕೋರೆ, ಪಿ.ಕೆ.ಗೊರವಗುಂಡಗಿ, ಹಾಗೂ ಆಟೋ ಚಾಲಕರಾದ ಸೈಪನ್ ಕರ್ಜಗಿ, ಜಬ್ಬಾರ ಮರ್ತೂರ, ರಫೀಕ ಬೆಕಿನಾಳ, ರಫೀಕ ಶೇಖ, ಪ್ರಕಾಶ ಮಳ್ಳಿ, ಪ್ರವೀಣ ಹಂಚನಾಳ, ಮಲ್ಲು ಬಿರಾದಾರ, ಶರಣಪ್ಪ ಬಂಕಲಗಿ, ಚಂದು ಪ್ರಧಾನಿ, ರಫೀಕ ಮದರಖಾನ, ಬುಡ್ಡೇಶಾ ಆಳಂದ ಸೇರಿದಂತೆ ಅನೇಕರಿದ್ದರು.