ಸಿಂದಗಿ: ಪಟ್ಟಣದ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ವಿರುದ್ದ ಜ.24 ರಂದು ನಡೆಯಲಿರುವ ಅವಿಶ್ವಾಸ ಗೊತ್ತುವಳಿ ನಿರ್ಣಯ ಪರವಾಗಿ ನಿಮ್ಮ ಮತ ಚಲಾಯಿಸಬೇಕು ಎಂದು ನಿರ್ದೇಶಿಸುವ ಸಚೇತಕಾದೇಶವನ್ನು(ವಿಪ್) ಜನತಾದಳ(ಜಾ) ಪಕ್ಷದ ಆರು(6)ಜನ ಸದಸ್ಯರುಗಳಿಗೆ ಜಾರಿ ಮಾಡಲಾಗಿದೆ.
ಜಿಲ್ಲಾಧ್ಯಕ್ಷರ ಆದೇಶದ ಮೇರೆಗೆ ಆರು ಜಾತ್ಯತೀತ ಜನತಾದಳದ ಸದಸ್ಯರಿಗೆ ವಿಪ್‍ವನ್ನು ತಲುಪಿಸಲಾಗಿದ್ದು 6ಜನ ಸದಸ್ಯರು ವಿಪ್‍ನ್ನು ಸ್ವೀಕರಿಸಿದ್ದಾರೆ. ವಿಪ್ ಆದೇಶವನ್ನು ಉಲಂಘಿಸಿದರೆ ಜನತಾದಳ(ಜಾ) ಪಕ್ಷದ ಜಿಲಾಧ್ಯಕ್ಷರು ಉಗ್ರ ಕ್ರಮ ಕೈಗೊಳಪಡಿಸುತ್ತಾರೆ ಎಂದು ಜೆ.ಡಿ.ಎಸ್.ಮುಖಂಡರಾದ ಸಲೀಂ ಜುಮನಾಳ್, ಪ್ರಕಾಶ ಹೀರೆಕುರುಬರ, ದಾದಾಪೀರ್ ಎಚ್.ಅಂಗಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.