ಕೆರೆಗೆ ನಾಮಕರಣ ; ವಾಗ್ವಾದದ ಕಣವಾದ ಸಿಂದಗಿ ಪುರಸಭೆ

Must Read

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...

ಲೋಳಸೂರ ಹೊಸ ಸೇತುವೆ ನಿರ್ಮಿಸುವಂತೆ ನೂತನ ಸಿಎಂ ಅವರಿಗೆ ಕಡಾಡಿಯವರಿಂದ ಮನವಿ

ಮೂಡಲಗಿ: ಗೋಕಾಕ ನಗರಕ್ಕೆ ಸಂಪರ್ಕ ಕಲ್ಪಿಸುವ ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿ-31 ರ ಲೋಳಸೂರ ಗ್ರಾಮದ ಹತ್ತಿರ ಘಟಪ್ರಭಾ ನದಿಗೆ ಅಡ್ಡಲಾಗಿ ಹೊಸ ಸೇತುವೆ ನಿರ್ಮಿಸುವಂತೆ...

ಭಾರತ ಮಾತೆಯ ಜ್ಞಾನ ಶಕ್ತಿ ಭಾರತೀಯ ಸ್ತ್ರೀಯಲ್ಲಿದೆ

ಪತಿವ್ರತೆಗೂ ಧರ್ಮ ಪತ್ನಿಗಿರುವ ವ್ಯತ್ಯಾಸವಿಷ್ಟೆ. ಪತಿವ್ರತೆ ಪತಿಯ ದಾರಿಯಲ್ಲಿ ತಾನೂ ನಡೆಯೋದು. ಧರ್ಮಪತ್ನಿ ಪತಿಯನ್ನು ಧರ್ಮದ ಹಾದಿಯಲ್ಲಿ ನಡೆಸೋದು. ಭೂಮಿ ಮೇಲೆ ಧರ್ಮ ನೆಲೆಸಬೇಕಾದರೆ ಸ್ತ್ರೀ...

ಸಿಂದಗಿ: ಪಟ್ಟಣದ ಕೆರೆಗೆ ನಾಮಕರಣ ಮಾಡುವ ಠರಾವಿಗೆ ಸಂಬಂಧಪಟ್ಟಂತೆ ಸಾಮಾನ್ಯ ಸಭೆಯಲ್ಲಿ ಸದಸ್ಯರ ನಡುವೆ ವಾಗ್ವಾದದ ಪ್ರಸಂಗ ನಡೆಯಿತು.

ಪಟ್ಟಣದ ಪುರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರ ಮಧ್ಯೆ ವಾಗ್ವಾದದಲ್ಲಿ ಸದಸ್ಯ ಸಂದೀಪ ಚೌರ ಮಾತನಾಡಿ, ಕಳೆದ ಸಭೆಯಲ್ಲಿ ಮಂಡಿಸಿದ ಠರಾವು ನಕಲು ಪ್ರತಿ ಕಡ್ಡಾಯವಾಗಿ ನೀಡಬೇಕು ಮತ್ತು ಪ್ರಶ್ನೆಗಳಿಗೆ ಯಾರೋ ಉತ್ತರ ನೀಡುವುದು ಸಹಿಸಲಾರೆ ಸಂಬಂದಪಟ್ಟವರು ಮಾತ್ರ ಉತ್ತರ ನೀಡಬೇಕು ಯಾರೋ ಮೂಗು ತೂರಿಸುವುದು ಸರಿಯಲ್ಲ. ಹೊಸ ಲೇಔಟಗಳ ಅಭಿವೃದ್ಧಿಯ ಸಂಪೂರ್ಣ ಮಾಹಿತಿ ದಾಖಲಾತಿ ಸಮೇತ ಪೂರೈಸುವಂತೆ ಹಲವಾರು ಬಾರಿ ಲಿಖಿತವಾಗಿ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಮುಂಬರುವ ಸಾಮಾನ್ಯ ಸಭೆಗೆ ಬರಬೇಕಾದರೆ ಸಂಬಂಧಪಟ್ಟ ಸೂಕ್ತ ದಾಖಲಾತಿಗಳನ್ನು ಸಭೆಯಲ್ಲಿ ಹಾಜರು ಪಡಿಸಿದರೆ ಮಾತ್ರ ಸಭೆಗೆ ಅವಕಾಶ ಮಾಡುತ್ತೇವೆ ಇಲ್ಲದಿದ್ದರೆ ಸಭೆಯನ್ನು ಭಹಿಷ್ಕರಿಸಬೇಕಾಗುತ್ತದೆ ಎಂದು ಮುಖ್ಯಾಧಿಕಾರಿಗೆ ಎಚ್ಚರಿಸಿದರು.

ಸದಸ್ಯ ಹಣಮಂತ ಸುಣಗಾರ ಅವರು ಮಾತನಾಡಿ, ಪಟ್ಟಣದಲ್ಲಿ ಆಯಾ ಸಂದರ್ಭದಲ್ಲಿ ಶಾಸಕರಾದವರು ಅನುದಾನ ತಂದು ಅಭಿವೃದ್ಧಿಪಡಿಸಿದ್ದಾರೆ. ಮನಗೂಳಿಯವರು ಸಹ ಒಬ್ಬ ಶಾಸಕರಾಗಿ ಅನುದಾನ ತಂದು ಅಭಿವೃದ್ದಿ ಪಡಿಸಿರಬಹುದು ಮಾಜಿ ಸಚಿವ ಆರ್.ಬಿ.ಚೌಧರಿ, ಹಾಗೂ ಮಾಜಿ ಶಾಸಕ ಶರಣಪ್ಪ ಸುಣಗಾರ ಅವರ ಕೂಡಾ ಕೆರೆ ನಿರ್ಮಾಣದಲ್ಲಿ ಪಾಲುದಾರಿದ್ದಾರೆ. ಕೆರೆಗೆ ಅವರ ಹೆಸರನ್ನು ಇಡುವುದಾದರೆ ಅದಕ್ಕೆ ಈ ಮೂವರ ಹೆಸರಿಡಬೇಕು ಇಲ್ಲದಿದ್ದರೆ ಶೈಕ್ಷಣಿಕವಾಗಿ ಹಾಗೂ ಧಾರ್ಮಿಕವಾಗಿ ಸಿಂದಗಿಯ ಹೆಸರನ್ನು ರಾಜ್ಯ, ರಾಷ್ಟ್ರಮಟ್ಟದಲ್ಲಿ ಕೊಂಡೊಯ್ದ ಲಿಂ. ಡಾ ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ಹೆಸರಿಡಬೇಕು ಎಂದು ಆಗ್ರಹಿಸಿದರು.

- Advertisement -

ಹಿರಿಯ ಸದಸ್ಯ ರಾಜಣ್ಣ ನಾರಾಯಣಕರ ಮಾತನಾಡಿ, ದಿ.ಎಂ.ಸಿ.ಮನಗೂಳಿ ಅವರು ಶಾಸಕರಾದಗೊಮ್ಮೆ ಊರಿಗೆ ಹೊಸ ಅಭಿವೃದ್ಧಿ ಮಾಡಿದ್ದಾರೆ ಅಲ್ಲದೆ ಅವರಿಂದಲೇ ಪಟ್ಟಣದ ಜನತೆ ನೀರು ಕಂಡಂತಾಗಿದೆ. ಕೆರೆ ನಿರ್ಮಾತೃಗಳು ಅವರೇ ಆ ಕಾರಣಕ್ಕೆ ಕೆರೆಗೆ ಆಧುನಿಕ ಭಗೀರಥ ಎಂ.ಸಿ.ಮನಗೂಳಿ ಅವರ ಹೆಸರಿಡಲು ಎಲ್ಲರು ಪಕ್ಷಾತೀತವಾಗಿ ಬೆಂಬಲ ನೀಡಬೇಕು ಎಂದು ಮನವಿ ಮಾಡಿಕೊಳ್ಳುತ್ತಿದ್ದಂತೆ ಬಸವರಾಜ ಯರನಾಳ ಸೇರಿದಂತೆ ಹಲವು ಸದಸ್ಯರು ಬೆಂಬಲ ವ್ಯಕ್ತಪಡಿಸಿದರು.

ಪುರಸಭೆ ಅಧ್ಯಕ್ಷ ಡಾ. ಶಾಂತವೀರ ಮನಗೂಳಿ ಮಾತನಾಡಿ, ಸಾಮಾನ್ಯ ಸಭೆಯ ಸೂಚನಾಪತ್ರದಲ್ಲಿ ಕೇವಲ ಕೆರೆಗೆ ನಾಮಕರಣ ಹಾಗೂ ಮೂರ್ತಿ ಸ್ಥಾಪನೆಯ ಬಗ್ಗೆ ಸಭೆಯಲ್ಲಿ ಚರ್ಚೆಗೆ ವಿಷಯ ಮಂಡಿಸಲಾಗಿದೆ ಇಲ್ಲಿ ಯಾರ ಹೆಸರನ್ನು ಪ್ರಸ್ತಾಪಿಸಲಾಗಿಲ್ಲ ವಿನಾಕಾರಣ ವಿಷಯದ ಅರಿವಿರದೇ ಸಭೆಗೂ ಮುನ್ನಾ ದಿನದಂದು ಬಿಜೆಪಿಯವರು ಪುರಸಭೆ ಅಧ್ಯಕ್ಷರು ಅಧಿಕಾರ ದುರುಪಯೋಗ ಪಡಿಸಿಕೊಂಡು ಎಂ.ಸಿ.ಮನಗೂಳಿಯವರ ಹೆಸರಿಡಲು ಹುನ್ನಾರ ನಡೆಸಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದು ಎಷ್ಟು ಸರಿ?. ಸತ್ಯಾಸತ್ಯತೆಯನ್ನು ಅವಲೋಕಿಸಿ ಮಾತನಾಡಬೇಕು ಸುಖಾಸುಮ್ಮನೆ ಮಾತನಾಡುವುದು ಸರಿಯಲ್ಲ ಎಂದು ಹೇಳಿಕೆಗೆ ಟಾಂಗ್ ನೀಡಿದರು.

ಮಾಜಿ ಅಧ್ಯಕ್ಷ ಭಾಷಾಸಾಬ ತಾಂಬೋಳಿ ಮಾತನಾಡಿ, ವಾರ್ಡ 7 ರಲ್ಲಿ ಹಲವಾರು ಸಮಸ್ಯೆಗಳ ಬಗ್ಗೆ ದೂರು ನೀಡಿದರು ಮುಖ್ಯಾಧಿಕಾರಿಯ ಸ್ಪಂದನೆಯಿಲ್ಲ. ಅಧ್ಯಕ್ಷರೆ ಮುತುವರ್ಜಿ ವಹಿಸಿ ವಾರ್ಡಿನ ಅಭಿವೃದ್ಧಿಯ ಕಡೆ ಗಮನ ಹರಿಸುವಂತೆ ಮನವಿ ಮಾಡಿಕೊಂಡರು.

2ನೇ ವಾರ್ಡಿನ ಸದಸ್ಯೆ ಮಾದೇವಿ ಸುಲ್ಪಿ ಮಾತನಾಡಿ, ಕ್ರೀಡಾಂಗಣಕ್ಕೆ ಹೊಂದಿಕೊಂಡಿರುವ ಶೌಚಾಲಯದ ಸ್ಥಳವನ್ನು ಯುವಜನ ಮತ್ತು ಕ್ರೀಡಾ ಇಲಾಖೆಗೆ ಹಸ್ತಾಂತರಿಸಬಾರದು ಅಲ್ಲಿ ಮಹಿಳೆಯರ ಶೌಚಾಲಯಕ್ಕೆ ಅನುವು ಮಾಡಿಕೊಡಬೇಕು ಎಂದು ವಿನಂತಿಸಿದರು.

ನಾಮಕರಣ

ಪಟ್ಟಣದ ಬಸವೇಶ್ವರ ವೃತ್ತದಿಂದ ಡಾ. ಅಂಬೇಡ್ಕರ ವೃತ್ತದ ವರೆಗಿನ ರಸ್ತೆಗೆ ಪತ್ರಿಕಾ ಭೀಷ್ಮ ರೇ.ಚ.ರೇವಡಿಗಾರ ಅವರ ಹೆಸರನ್ನು ನಾಮಕರಣ ಮಾಡಲಾಯಿತು. ಕಾನಿಪ ಸಂಘದ ಪದಾಧಿಕಾರಿಗಳು ಪುರಸಭೆ ಅದ್ಯಕ್ಷರಾದಿಯಾಗಿ ಎಲ್ಲ ಸದಸ್ಯರಿಗೆ ಸಿಹಿ ಹಂಚಿ ಹರ್ಷ ವ್ಯಕ್ತಪಡಿಸಿದರು.
ಪುರಸಭೆ ಉಪಾಧ್ಯಕ್ಷ ಹಾಸೀಂ ಆಳಂದ ಸೇರಿದಂತೆ ಶಾಂತವೀರ ಬಿರಾದಾರ ಹೊರತು ಪಡಿಸಿದರೆ ಸರ್ವಸದಸ್ಯರು ಹಾಜರಿದ್ದರು.

ಮುಖ್ಯಾಧಿಕಾರಿ ಸುರೇಶ ನಾಯಕ ಸ್ವಾಗತಿಸಿದರು. ವ್ಯವಸ್ಥಾಪಕ ಬಿ.ಎಂ.ಮಂಡೆ ಸಭೆಯ ಅಜಂಡಾ ಓದಿದರು. ಅಕೌಟೆಂಟ್ ಆರಿಸಿಯಾ ನಾಜ್, ಶಿವಾಜಿ ಕೊಡಗೆ, ಜೆಇ ಎ.ಜೆ.ನಾಟೀಕಾರ ಖರ್ಚು-ವೆಚ್ಚದ ವಿವರಿಸಿದರು. ದಯಾನಂದ ಇವಣಿ ವಂದಿಸಿದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...
- Advertisement -

More Articles Like This

- Advertisement -
close
error: Content is protected !!