Sindagi News: ನಾನು ರಾಜಕಾರಣಿಯಾಗಿದ್ದರೂ ಸಾಹಿತ್ಯದಲ್ಲಿ ರಾಜಕೀಯ ಬೆರೆಸಿಲ್ಲ – ಮಲ್ಲಿಕಾರ್ಜುನ ಯಂಡಿಗೇರಿ

Must Read

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...

ಜನ ಸಾಮಾನ್ಯರ ತುರ್ತು ಸೇವೆಗಾಗಿ ಅರಭಾವಿ ಕ್ಷೇತ್ರದ ಎಲ್ಲ ಪಿಎಚ್‍ಸಿಗಳಿಗೆ ರಕ್ಷಾ ಕವಚ ವಾಹನ ಸೌಲಭ್ಯ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿಯಲ್ಲಿ ಟಾಸ್ಕ್ ಫೋರ್ಸ್ ಸಭೆ ಮೂಡಲಗಿ : ಕೋವಿಡ್ ಎರಡನೆಯ ಅಲೆಯ ವಿರುದ್ದ ಹೋರಾಟ ಮಾಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಕೊರೋನಾ ವಾರಿಯರ್ಸ್‌ ಗಳ ಕಾರ್ಯ...

ಪುರಸಭೆಯ ಸಾಮಾನ್ಯ ಸಭೆ ಕರೆಯಲು ಮನವಿ

ಸಿಂದಗಿ: ಪಟ್ಟಣದ ಹಲವು ವಾರ್ಡುಗಳಲ್ಲಿ ನೀರಿನ ಸಮಸ್ಯೆ, ಗಟಾರಗಳ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳು ಉಲ್ಬಣ ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚಿಸಲು ಸಾಮಾನ್ಯ ಸಭೆ...

ಸಿಂದಗಿ: 105 ವರ್ಷಗಳ ಸಾಹಿತ್ಯಿಕ, ಸಾಂಸ್ಕೃತಿಕ ಇತಿಹಾಸವಿರುವ, ಜಗತ್ತಿನಲ್ಲಿಯೇ ಅತೀ ಹೆಚ್ಚು ಸದಸ್ಯತ್ವ ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಅಸ್ಮಿತೆ. ಇದು ಕನ್ನಡಿಗರು ಭಾವನಾತ್ಮಕ ಬದುಕು ಕಟ್ಟಿಕೊಳ್ಳಲು ಮೈಸೂರು ಮಹಾರಾಜರಿಂದ ಸ್ಥಾಪಿತವಾದ ಸರಕಾರದ ಸ್ವಾಯತ್ತ ಸಂಸ್ಥೆಗೆ ಆಕಸ್ಮಿಕವಾಗಿ ನಾನು ಅಧ್ಯಕ್ಷನಾದ ನಂತರ ಇದರ ಇತಿಮಿತಿ ಮೀರಿ ಕಾರ್ಯನಿರ್ವಹಿಸಿದ್ದೇನೆ ಎಂದು ವಿಜಯಪುರ ಜಿಲ್ಲಾ ಸಾಹಿತ್ಯ ಪರಿಷತ್ತಿನ ಆಕಾಂಕ್ಷಿ ಮಲ್ಲಿಕಾರ್ಜನ ಯಂಡಿಗೇರಿ ಹೇಳಿದರು.

ಪಟ್ಟಣದ ಮಾಂಗಲ್ಯ ಭವನದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ನಾನು ಒಬ್ಬ ರಾಜಕಾರಣಿಯಾಗಿದ್ದರೂ ಕೂಡಾ ಸಾಹಿತ್ಯ ಪರಿಷತ್ತಿನಲ್ಲಿ ಯಾವ ಕಾರಣಕ್ಕೂ ರಾಜಕಾರಣ ಬೆರೆಸದೆ ಎಲ್ಲರನ್ನೂ ಪಕ್ಷಾತೀತ ಮತ್ತು ಜಾತ್ಯಾತೀತವಾಗಿ ಸಮನ್ವಯತೆಯಿಂದ ಸಾಹಿತ್ಯ ಪರಿಷತ್ತನ್ನು ಉತ್ತುಂಗಕ್ಕೆ ತೆಗೆದುಕೊಂಡು ಹೋಗಲು ಶ್ರಮಿಸಿದ್ದೇನೆ. ವ್ಯಾಪ್ತಿ ವಿಸ್ತಾರ, ರೂಪುರೇಷೆಗಳ ಸಮಗ್ರ ಅಧ್ಯಯನ ಮಾಡಿ. ಸಾಹಿತ್ಯ ಪರಿಷತ್ತನ್ನು ಗ್ರಾಮೀಣ ಮಟ್ಟದಿಂದ ಜಿಲ್ಲಾ ಮಟ್ಟದವರೆಗೂ ಮನೆ-ಮನಗಳಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯ ಮಾಡಿದ್ದೇನೆ.

ಇವನೊಬ್ಬ ರಾಜಕಾರಣಿ, ಸಾಹಿತ್ಯ ಪರಿಷತ್ತನ್ನು ಹಾಳು ಮಾಡುತ್ತಾನೆ ಎನ್ನುವವರಿಗೆ ನಾನೊಬ್ಬ ಸಾಹಿತಿಯಾಗಿರದಿದ್ದರೂ ಸಾಹಿತ್ಯದ ಒಲವು ಹಾಗೂ ಕನ್ನಡ ಪರ ಸ್ಪಷ್ಟ ನಿಲುವುಗಳು ಸುಮಾರು 40 ತಾಲೂಕಾ ಸಮ್ಮೇಳನಗಳನ್ನು 8 ಜಿಲ್ಲಾ ಸಮ್ಮೇಳನಗಳನ್ನು ಹಾಗೂ ನ ಭೂತೋ ನ ಭವಿಷ್ಯತೆ… ಎನ್ನುವಂತೆ 90 ವರ್ಷಗಳ ನಂತರ ವಿಜಯಪುರ ಜಿಲ್ಲೆಯಲ್ಲಿ 2013ರಲ್ಲಿ 79ನೆಯ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಮಾಡಿ, 100 ಸಾಹಿತ್ಯಿಕ ಕೃತಿಗಳ ಬಿಡುಗಡೆ ಹಾಗೂ 6 ಕೋಟಿ ಮೌಲ್ಯದ ಪುಸ್ತಕಗಳ ಮಾರಾಟದ ಇತಿಹಾಸ ಅಜರಾಮರ.

- Advertisement -

ಸರಕಾರದ 2ಕೋಟಿ ರುಪಾಯಿಗಳ ಅನುದಾನ ಹಾಗೂ ಸಂಘ-ಸಂಸ್ಥೆಗಳ ಧನ ಸಹಾಯದಿಂದ ಒಟ್ಟು 6 ಕೋಟಿ ರೂಪಾಯಿಗಳಲ್ಲಿ 2 ಕೋಟಿ ರೂಪಾಯಿಗಳನ್ನು ಅದ್ದೂರಿ ಸಮ್ಮೇಳನದ ನಂತರ ಉಳಿತಾಯ ಮಾಡಿದ್ದು ಹಾಗೂ ಅದನ್ನು ಠೇವಣಿ ರೂಪದಲ್ಲಿಟ್ಟಿದ್ದು ಸಾಧನೆಯೇ ಸರಿ.

ಈಗ ಅದು ಬಡ್ಡಿ ಸೇರಿ 3 ಕೋಟಿ ರೂಪಾಯಿಗಳಷ್ಟಾಗಿದ್ದು, ಮುಂದಿನ ದಿನಮಾನಗಳಲ್ಲಿ 5 ಕೋಟಿ ರೂ.ಗಳ ವೆಚ್ಚದಲ್ಲಿ ಸುಸಜ್ಜಿತವಾದ ರಾಜ್ಯದಲ್ಲಿಯೇ ಮಾದರಿ ಸಾಹಿತ್ಯ ಪರಿಷತ್ತ ಭವನ ನಿರ್ಮಾಣ ಮಾಡುವ ಕನಸಿದೆ ಎಂದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಯುವ ಪರಿಷತ್ತು ಅಧ್ಯಕ್ಷ ಶರಣು ಸಬರದ, ಕರ್ನಾಟಕ ಪುಸ್ತಕ ಪರಿಷತ್ ಜಿಲ್ಲಾ ಅಧ್ಯಕ್ಷ ಶಿವಾನಂದ ಮಂಗಾನವರ, ತಾಲೂಕ ಕಸಾಪ ಅಧ್ಯಕ್ಷ ಸಿದ್ದಲಿಂಗ ಚೌಧರಿ, ನ್ಯಾಯವಾದಿ ಜುಲ್ಪಿಕರ್ ಅಂಗಡಿ ಸೇರಿದಂತೆ ಅನೇಕರು ಪತ್ರಿಕಾ ಗೋಷ್ಠಿಯಲ್ಲಿದ್ದರು.

ನಾನು ಒಬ್ಬ ರಾಜಕಾರಣಿಯಾಗಿದ್ದರೂ ಕೂಡಾ ಸಾಹಿತ್ಯ ಪರಿಷತ್ತಿನಲ್ಲಿ ಯಾವ ಕಾರಣಕ್ಕೂ ರಾಜಕಾರಣ ಬೆರೆಸದೆ ಎಲ್ಲರನ್ನೂ ಪಕ್ಷಾತೀತ ಮತ್ತು ಜಾತ್ಯಾತೀತವಾಗಿ ಸಮನ್ವಯತೆಯಿಂದ ಕಂಡಿದ್ದೇನೆ ಎಂದು ಹೇಳಿಕೊಂಡ ಹಾಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಅವರು ಜೆಡಿಎಸ್ ಪಕ್ಷದ ಸಿಂದಗಿ ಕ್ಷೇತ್ರದ ಆಕಾಂಕ್ಷಿ ಅಂಗಡಿಯವರು ಗೋಷ್ಠಿಯಲ್ಲಿ ಇದದ್ದು ರಾಜಕೀಯ ಪ್ರೇರಿತವಲ್ಲವೇ ಎಂದು ಮಾತನಾಡಿಕೊಳ್ಳುತ್ತಿರುವುದು ಕೇಳಿ ಬಂತು.

ವರದಿ: ಪಂಡಿತ್ ಯಮಪುರಿ

- Advertisement -
- Advertisement -

Latest News

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...
- Advertisement -

More Articles Like This

- Advertisement -
close
error: Content is protected !!