spot_img
spot_img

ಸಿಂದಗಿ: 22 ರಿಂದ 24 ರವರೆಗೆ ಸಿಂದಗಿ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ

Must Read

spot_img
- Advertisement -

ಸಿಂದಗಿ: ಸ್ಥಳೀಯ 10/33/11 ಕೆ.ವಿ. ವಿದ್ಯುತ್ ವಿತರಣೆ ಉಪಕೇಂದ್ರದಲ್ಲಿ ರಾಂಪೂರ ಐ.ಪಿ. ಸುಂಗಠಾಣ ಐ.ಪಿ. ಯಂಕಂಚಿ ಐ.ಪಿ, ಬಂದಾಳ ಐಪಿ, ಸೋಂಪೂರ ಐ.ಪಿ ಯರಗಲ್ ಐ.ಪಿ, ರಾಂಪೂರ, ಬೆನಕೋಟಿಗೆ, ಮಾಡಬಾಳ, ಮನ್ನಾಪುರ, ಅಂತರಗಂಗಿ, ಬ್ಯಾಲಿಹಾಳ, ಯಂಕಂಚಿ, ಚಿಕ್ಕಂದಗಿ, ಬಂದಾಳ, ಸೋಂಪೂರ ಸೋಂಪೂರ ಗ್ರಾಮಗಳಲ್ಲಿ ಪ್ರಸ್ತುತವಿರುವ 10 ಎಂ.ವಿ.ಎ ಶಕ್ತಿ ಪರಿವರ್ತಕರು 20 ಎಂ.ಬಿ.ಎ ಶಕ್ತಿ ಪರಿವರ್ತಕದಿಂದ ಬದಲಾಯಿಸುವ ಕಾಮಗಾರಿ ಕೈಗೊಂಡಿರುವುದರಿಂದ 22 ರಂದು ಮುಂಜಾನೆ 7:00 ಗಂಟೆಯಿಂದ 24ರ ಸಾಯಂಕಾಲದವರೆಗೆ ಮಾರ್ಗಗಳ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತದೆ ಎಂದು ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎನ್.ಜೆ.ವಾಯ್ ಹಾಗೂ ಅರ್ಬನ್ (ಸಿಂದಗಿ ನಗರ) ಮಾರ್ಗಗಳಿಗೆ ಬದಲಿ ವ್ಯವಸ್ಥೆ ಮಾಡಿ ವಿದ್ಯುತ್ ಪೂರೈಕೆ ಮಾಡಲಾಗುವದು, ಮುಂದುವರೆದು ಈ ಕೆಳಗೆ ತಿಳಿಸಿದ ಐ.ಪಿ ಮಾರ್ಗಗಳಿಗೆ 7 ತಾಸು ವಿದ್ಯುತ್ ಪೂರೈಕೆ ಕಷ್ಟಸಾಧ್ಯವಾಗಿರುವುದರಿಂದ ಗ್ರಾಹಕರಿಗೆ 2 ರಿಂದ 3 ತಾಸು ವಿದ್ಯುತ್ ಪೂರೈಸಲು ವ್ಯವಸ್ಥೆ ಮಾಡಲಾಗುವದು. ಆದ್ದರಿಂದ ಸದರಿ ಅವಧಿಯಲ್ಲಿ ಸಮರ್ಪಕ ವಿದ್ಯುತ್ ಪೂರೈಕೆ ಮಾಡಲು ಅಡಚಣೆ ಉಂಟಾಗುವುದರಿಂದ ಗ್ರಾಹಕರು ಸಹಕರಿಸುವಂತೆ ಕೋರಿದ್ದಾರೆ

- Advertisement -
- Advertisement -

Latest News

ಶ್ರೀ ಬಸವೇಶ್ವರ ಸೊಸಾಯಿಟಿಗೆ ರಜತ ಮಹೋತ್ಸವ ಸಂಭ್ರಮ

ಮೂಡಲಗಿ -ಪಟ್ಟಣದ ಶ್ರೀ ಬಸವೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಗೆ ೨೫ ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಇದೇ ದಿ. ೨೫ ರಂದು ಸಂಭ್ರಮದ ಬೆಳ್ಳಿ ಮಹೋತ್ಸವ...
- Advertisement -

More Articles Like This

- Advertisement -
close
error: Content is protected !!
Join WhatsApp Group